ಮನೆ ಎರಡು ಭಾಗವಾಗಿದ್ಯಲ್ಲಾ... ಟಾಯ್ಲೆಟ್​ ಹೇಗೆ ಯೂಸ್​ ಮಾಡ್ತೀರಾ? ಸೃಜನ್​ ಪ್ರಶ್ನೆಗೆ ಭಾಗ್ಯ ಹೇಳಿದ್ದೇನು?

By Suchethana D  |  First Published May 18, 2024, 1:14 PM IST

ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಯ ಮೇಲೆ ಭಾಗ್ಯಲಕ್ಷ್ಮಿ ಸೀರಿಯಲ್​ ತಂಡಕ್ಕೆ ತೀರ್ಪುಗಾರರಾಗಿರುವ ಸೃಜನ್​ ಲೋಕೇಶ್​ ಕೇಳಿದ ಪ್ರಶ್ನೆ ಏನು?
 


ಒಂದು ಕಡೆ ಪತ್ನಿ ಭಾಗ್ಯ, ಇನ್ನೊಂದು ಕಡೆ ಪ್ರೇಯಸಿ ಶ್ರೇಷ್ಠಾ. ಇವರಿಬ್ಬರ ನಡುವೆ ಸಿಲುಕಿಕೊಂಡಿದ್ದಾನೆ ತಾಂಡವ್​. 16 ವರ್ಷಗಳ ದಾಂಪತ್ಯ ಜೀವನವನ್ನು ಕಡೆಗಣಿಸಿ ಪ್ರೇಯಸಿ ಶ್ರೇಷ್ಠಾ ಜೊತೆ ಮದುವೆಯಾಗಲು ರೆಡಿಯಾಗಿದ್ದಾನೆ. ಮನೆಯಲ್ಲಿ ಬೆಳೆದು ನಿಂತಿರುವ ಇಬ್ಬರು ಮಕ್ಕಳು ಅವನಿಗೆ ಬೇಕು, ಆದರೆ ಪತ್ನಿ ಬೇಡ. ಇದ್ಯಾವುದೂ ಅವನ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಪತ್ನಿ ಭಾಗ್ಯಳನ್ನು ಕಂಡರೆ ಉರ ಉರ ಅಂತಿರೋದು ಗೊತ್ತು ಬಿಟ್ಟರೆ, ಶ್ರೇಷ್ಠಾಳನ್ನು ತಾಂಡವ್​ ಲವ್​ ಮಾಡ್ತಿರೋ ವಿಷಯ ಯಾರಿಗೂ ಗೊತ್ತಿಲ್ಲ. ಮನೆಯಲ್ಲಿ ಭಾಗ್ಯಳ ತಂಗಿ ಪೂಜಾಳಿಗೆ ವಿಷಯ ಗೊತ್ತು, ಆದರೆ ಅದನ್ನು ಎಲ್ಲರ ಎದುರು ಹೇಳುವ ಧೈರ್ಯ ಅವಳಿಗೆ ಇಲ್ಲ. ಶ್ರೇಷ್ಠಾಳ ಮದುವೆ ವಿಷಯ ತಾಂಡವ್​ ಅಮ್ಮ ಕುಸುಮಾಗೆ ಗೊತ್ತು. ಆದರೆ ಮದುವೆಯಾಗುತ್ತಿರುವ ಹುಡುಗ ತನ್ನ ಮಗನೇ ಎನ್ನುವುದು ಗೊತ್ತಿಲ್ಲ. 

ಇದು  ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆ. ಇದೀಗ ಇದೇ ವಾಹಿನಿಯಲ್ಲಿ ನಡೆಯುತ್ತಿರುವ ನನ್ನಮ್ಮ ಸೂಪರ್​ಸ್ಟಾರ್​ ರಿಯಾಲಿಟಿ ಷೋನಲ್ಲಿ ಭಾಗ್ಯಲಕ್ಷ್ಮಿಯ ಭಾಗ್ಯ ಅರ್ಥಾತ್​ ಸುಷ್ಮಾ ರಾವ್​ ನಿರೂಪಕಿಯಾಗಿದ್ದಾರೆ. ವೇದಿಕೆ ಮೇಲೆ ಕುಸುಮಾ ತನ್ನ ಸೀರಿಯಲ್​  ಮಗ ತಾಂಡವ್​ ಜೊತೆ ಬಂದಿದ್ದಾಳೆ. ಅಲ್ಲಿ ಕೆಲವೊಂದು ಹಾಸ್ಯ ಪ್ರಸಂಗಗಳು ನಡೆದಿವೆ. ಈ ರಿಯಾಲಿಟಿ ಷೋನಲ್ಲಿ ಚಿಕ್ಕಮಕ್ಕಳು ಅಮ್ಮನ ಜೊತೆ ಬರುವ ಕಾರಣ, ಸುಷ್ಮಾ ಅವರು ತಾಂಡವ್​ ಪಾತ್ರಧಾರಿ ಸುದರ್ಶನ್‌ ರಂಗಪ್ರಸಾದ್‌ ಅವರಿಗೆ ಪುಟ್ಟಾ ಎಂದು ಕರೆದಿದ್ದಾರೆ. ಅದಕ್ಕೆ ಸುದರ್ಶನ್​ ಅವರು ಸುಷ್ಮಾ ಅವರಿಗೆ ಆಂಟಿ ಎಂದು ಕರೆಯುವ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ.

Tap to resize

Latest Videos

ಅಪ್ಪುಗೂ ನೃತ್ಯ ಸಂಯೋಜಿಸಿದ್ದ ಶ್ರೀರಸ್ತು ಶುಭಮಸ್ತು ದೀಪಿಕಾ: ಪೂರ್ಣಿಗೆ ಡ್ಯಾನ್ಸ್​ ಹೇಳಿಕೊಡ್ತಿರೋ ವಿಡಿಯೋ ವೈರಲ್​

ಇದೇ ವೇಳೆ ಭಾಗ್ಯಲಕ್ಷ್ಮಿ ಸೀರಿಯಲ್​ ಬಗ್ಗೆ ಚರ್ಚೆ ನಡೆದಿದೆ. ತಾಂಡವ್​ ಅಮ್ಮ ಕುಸುಮಾಗೆ, ಈ ಸೊಸೆ ನಿನಗೆ ಬೇಡ, ಹೊಸ ಸೊಸೆ ತರ್ತೇನೆ ಎಂದಿದ್ದಾರೆ. ಇದೇ ವೇಳೆ ತೀರ್ಪುಗಾರರಲ್ಲಿ ಒಬ್ಬರಾಗಿರುವ ಸೃಜನ್​ ಲೋಕೇಶ್​ ಅವರು ಮಧ್ಯೆ ಮಾತನಾಡಿ, ನನಗೊಂದು ಪ್ರಶ್ನೆ ಇದೆ. ನಿಮ್ಮ ಮನೆ ಸದ್ಯ ಎರಡು ಭಾಗವಾಗಿದೆಯಲ್ಲ. ಅಂದರೆ ಮನೆಗೆ ಗೆರೆ ಎಳೆದಿದ್ದೀರಲ್ಲ, ಹಾಗಿದ್ರೆ ಟಾಯ್ಲೆಟ್​ ಹೇಗೆ ಯೂಸ್​ ಮಾಡುತ್ತಿದ್ದೀರಿ ಎಂದೇ ಗೊತ್ತಾಗ್ತಿಲ್ಲ ಎಂದಿದ್ದಾರೆ. ಅದಕ್ಕೆ ಭಾಗ್ಯ ಅವರು ಛೇ ಛೇ ನೀವು ಅಂದುಕೊಂಡರೆ ಹಾಫ್​ ಅವರು, ಹಾಫ್​ ನಾವು ಯೂಸ್​ ಮಾಡ್ತಿಲ್ಲ. ನಮ್​ ಯಜಮಾನ್ರು ಎಲ್ಲರ ಕೋಣೆಗೂ ಸಪರೇಟ್​ ಟಾಯ್ಲೆಟ್​ ಕಟ್ಟಿಸಿದ್ದಾರೆ ಎಂದಿದ್ದಾರೆ. ಇದನ್ನು ಕೇಳಿ ಸೃಜನ್​ ಅವರು ಹೋ ಹಾಗಾ? ನನಗೆ ಇದರ ಬಗ್ಗೆ ಬಹಳ ಡೌಟ್​ ಇತ್ತು ಎಂದು ಎಲ್ಲರನ್ನೂ ನಗಿಸಿದ್ದಾರೆ. 

ಇನ್ನು, ನನ್ನಮ್ಮ ಸೂಪರ್​ಸ್ಟಾರ್​ ಕುರಿತು ಹೇಳುವುದಾರೆ, ಇದು ಸೀಸನ್​ -3.  ಈಗ ಈ ರಿಯಾಲಿಟಿ ಷೋ ಫಿನಾಲೆ ಹಂತವನ್ನು ಸಮೀಪಿಸಿದೆ. ಸೃಜನ್​ ಲೋಕೇಶ್​, ಅನು ಪ್ರಭಾಕರ್​, ತಾರಾ ಅನುರಾಧಾ  ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ನಟಿ ಸುಷ್ಮಾ ಕೆ. ರಾವ್​ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಮತ್ತು ಅವರ ಅಮ್ಮಂದಿರು ಕೆಲ ವಾರಗಳ ಕಾಲ ಜನರನ್ನು ರಂಜಿಸಿದ್ದಾರೆ. ಇನ್ನು ಅಂತಿಮ ಘಟ್ಟ ತಲುಪಿದೆ. ಈ ಕುರಿತು ಮಾತನಾಡಿರುವ ಸೃಜನ್​ ಲೊಕೇಶ್​ ಅವರು, ಮೂರು ಸೀಸನ್​ಗಳನ್ನು ಮಾಡಿರುವುದು ಸುಲಭವಲ್ಲ. ಒಂದೇ ಮಾದರಿಯ ಕಾರ್ಯಕ್ರಮವನ್ನು ಜನರು ನೋಡಿ ಒಪ್ಪಿಕೊಂಡಿದ್ದಾರೆ ಎಂದಾಗ ಅವರಿಗೆ ಇನ್ನೂ ಜಾಸ್ತಿ ಮನರಂಜನೆ ನೀಡಬೇಕು ಎಂಬ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಈ ಸೀಸನ್​ನಲ್ಲಿ ನಮಗೆ ಸಿಕ್ಕ ಮಕ್ಕಳು ತುಂಬ ಚೂಟಿ ಆಗಿದ್ದಾರೆ. ಫಿನಾಲೆ ಹಂತಕ್ಕೆ ಬಂದಿದ್ದೇವೆ. ಆರು ಜನ ಯಾರು ಫೈನಲಿಸ್ಟ್​ ಆಗುತ್ತಾರೆ ಎಂಬ ಕುತೂಹಲ ನಮಗೂ ಇದೆ ಎಂದಿದ್ದಾರೆ. 

ತೋಳ ಬಂತು ತೋಳ ಆಯ್ತಾ ರಾಖಿ ಕಥೆ? ಇಂದು ಆಪರೇಷನ್- ನಟಿ ಕಣ್ಣೀರಿಟ್ರೂ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

click me!