News Hour ರಾಜ್ಯದಲ್ಲಿ ಮುಂದುವರಿದ ಬಹಿಷ್ಕಾರದ ಧರ್ಮಯುದ್ಧ, ಕಾಂಗ್ರೆಸ್ ನ ಸಾಫ್ಟ್ ಹಿಂದುತ್ವ

Mar 23, 2022, 11:35 PM IST

ಬೆಂಗಳೂರು (ಮಾ. 23): ಉಡುಪಿಯ ಕಾಪು ಮಾರಿಜಾತ್ರೆಯಲ್ಲಿ (Kapu Mari Jatre) ಮುಸ್ಲಿಂ ವರ್ತಕರು (Muslims Traders) ಮಳಿಗೆಗಳನ್ನು ಇಡಬಾರದು ಎನ್ನುವ ಬ್ಯಾನರ್ ಗಳನ್ನು ಅಳವಡಿಸಿದ್ದರಿಂದ ಆರಂಭವಾದ ವಿವಾದ ಈಗ ಎಲ್ಲಿಗೋ ಹೋಗಿ ಮುಟ್ಟಿದೆ. ಉಡುಪಿಯಲ್ಲಿ ಆರಂಭವಾದ ವಿವಾದ ಇಂದು ಶಿವಮೊಗ್ಗಕ್ಕೆ ಹೋಗಿ ತಲುಪಿದೆ. ಬಹಿಷ್ಕಾರದ ಧರ್ಮಯುದ್ಧ ಎಲ್ಲಿಯವರೆಗೆ ಹೋಗಿ ಮುಟ್ಟಲಿದೆ ಎನ್ನುವ ಕುತೂಹಲ ಆರಂಭವಾಗಿದೆ. ಒಟ್ಟಾರೆ ಈ ಎಲ್ಲಾಅಭಿಯಾನ ಎಲ್ಲಿಂದ ಆರಂಭವಾಗಿದ್ದು ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.


ಇನ್ನೊಂದೆಡೆ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದು ಜಾತ್ರೆಗಳಲ್ಲಿ ಅವಕಾಶ ನೀಡದಿರುವ ಅಭಿಯಾನ ಈಗ ನೆಲಮಂಗಲಕ್ಕೂ (Nelamangala) ವ್ಯಾಪಿಸಿದೆ. ಇದರ ನಡುವೆ ವಿಧಾನಸಭೆಯಲ್ಲಿ ಧಾರ್ಮಿಕ ದತ್ತಿ ಕಾಯ್ದೆಯ ನಿಯಮಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ರಾಜಕೀಯ ವಲಯದ ಕಡೆ ಗಮನಹರಿಸುವುದಾದರೆ, ಪಂಚರಾಜ್ಯ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ (Congress), ದಕ್ಷಿಣ ಭಾರತದಲ್ಲಿ ತನ್ನ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಮೃದು ಹಿಂದುತ್ವದ ಮಂತ್ರ ಜಪಿಸಲು ಮುಂದಾಗಿದೆ. ಕಾಂಗ್ರೆಸ್ ನಡೆಸುತ್ತಿರುವ ಸೇಫ್ ಗೇಮ್ ನಲ್ಲಿ ಧರ್ಮ ರಾಜಕಾರಣದಿಂದ ಅಂತರ ಕಾಯಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

News Hour: ತಮಿಳುನಾಡು ವಿರುದ್ಧ ನಾಯಕರ ಕೆಂಡ, ಮೇಕೆದಾಟು ಯೋಜನೆ ನಮ್ಮದು!
ಇನ್ನು ಮಹತ್ವದ ಸುದ್ದಿಯಲ್ಲಿ ಕೇಂದ್ರ ಹೊರತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು (Farm Laws) ದೇಶದ ಶೇ. 93ರಷ್ಟು ರೈತರು ಬೆಂಬಲಿಸಿದ್ದರು. ಕೇವಲ ರಾಜಕೀಯ ಉದ್ದೇಶಗಳಿಗಾಗಿ ಇದನ್ನು ವಿರೋಧಿಸಲಾಗಿತ್ತು ಎನ್ನುವ ಅಂಶ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ನೀಡಿರುವ ಅಂಶಗಳಿಂದ ಬಹಿರಂಗವಾಗಿದೆ. ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸಿದ್ದ ಯಾರೊಬ್ಬರೂ ತನಿಖಾ ಸಮಿತಿಯ ಎದುರು ಹಾಜರಾಗಿರಲಿಲ್ಲ ಎನ್ನುವ ಅಂಶವೂ ಪ್ರಮುಖವಾಗಿದೆ.