ದಕ್ಷಿಣ ಕಾಶಿ ಹಂಪಿಯಲ್ಲಿ ಭಾನುವಾರ ಸುರಿದ ಭರ್ಜರಿ ಮಳೆಗೆ ಪುರಾತನ ದೇವಾಲಯದ ಆವರಣದಲ್ಲಿ ನಿಂತ ಮಳೆ ನೀರಿನಿಂದ ಸ್ಮಾರಕಗಳು ಹೊಳೆಯುತ್ತಿದ್ದರೆ ಇನ್ನೊಂದೆಡೆ ಮಳೆ ಅರ್ಭಟಕ್ಕೆ ಹಂಪಿಯ ಪಂಪಾ ವಿರೂಪಾಕ್ಷನ ರಥ ಬೀದಿಯ ಸಾಲುಮಂಟಪದ ಕಲ್ಲಿನ ಕಂಬಗಳು ಉರುಳಿಬಿದ್ದಿವೆ.
ವಿಜಯನಗರ (ಮೇ.21): ದಕ್ಷಿಣ ಕಾಶಿ ಹಂಪಿಯಲ್ಲಿ ಭಾನುವಾರ ಸುರಿದ ಭರ್ಜರಿ ಮಳೆಗೆ ಪುರಾತನ ದೇವಾಲಯದ ಆವರಣದಲ್ಲಿ ನಿಂತ ಮಳೆ ನೀರಿನಿಂದ ಸ್ಮಾರಕಗಳು ಹೊಳೆಯುತ್ತಿದ್ದರೆ ಇನ್ನೊಂದೆಡೆ ಮಳೆ ಅರ್ಭಟಕ್ಕೆ ಹಂಪಿಯ ಪಂಪಾ ವಿರೂಪಾಕ್ಷನ ರಥ ಬೀದಿಯ ಸಾಲುಮಂಟಪದ ಕಲ್ಲಿನ ಕಂಬಗಳು ಉರುಳಿಬಿದ್ದಿವೆ.
ಹೌದು ಈ ವರ್ಷದ ಭೀಕರ ಬರಗಾಲ, ವಿಪರೀತ ತಾಪಮಾನ ಹೆಚ್ಚಳದಿಂದ ಹಂಪಿ ಸ್ಮಾರಕಗಳು ಕಾದು ಕೆಂಡವಾಗಿದ್ದವು. ಇದೀಗ ಮೊದಲ ಮಳೆಗೆ ಬಿಸಿಗೊಳಿಸಿದ ಸೀಸ ತಣ್ಣೀರಲ್ಲಿ ಕತ್ತರಿಸಿಕೊಂಡು ಬಿಳುವಂತೆ ಮಂಟಪದ ಕಂಬಗಳು ಉರುಳಿಬಿದ್ದಿವೆ.
undefined
ಪಂಪಾ ವಿರೂಪಾಕ್ಷನ ರಥ ಬೀದಿಯ ಸಾಲುಮಂಟಪಗಳು ವಿಜಯನಗರ ಸಾಮ್ರಾಜ್ಯದ ಅರಸರು ನಿರ್ಮಿಸಿದ್ದರು. ಯುನೆಸ್ಕೋ ಪಟ್ಟಿಗೆ ಸೇರಿದ ಹಂಪಿಯ ಸ್ಮಾರಕಗಳ ರಕ್ಷಣೆಗೆ ಕೋಟ್ಯಂತರ ರೂ. ಹಣ ಬರ್ತಿದ್ರೂ ಸರಿಯಾಗಿ ನಿರ್ವಹಣೆ ಮಾಡದ ಇಲಾಖೆ. ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ.
ಒಂದು ಕಡೆ ಉತ್ತಮ ಮಳೆಗೆ ಜಿಲ್ಲೆಯ ಜನ ಖುಷಿಯಾಗಿದ್ದರೆ, ಇನ್ನೊಂದಡೆ ಮೊದಲ ಮಳೆಗೆ ಹಂಪಿ ಸ್ಮಾರಕ ಮಂಟಪದ ಕಂಬಗಳು ಉರುಳಿಬಿದ್ದ ಘಟನೆ ಕಂಡು ಬೇಸರವಾಗಿದೆ.
ಬಳ್ಳಾರಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ರೈತರ ಮುಖದಲ್ಲಿ ಮಂದಹಾಸ