ಮಲೆನಾಡಲ್ಲಿ ಗಗನಕ್ಕೇರಿದ ತರಕಾರಿ ಬೆಲೆ; ಗ್ರಾಹಕರಿಗೆ ಸಂಕಷ್ಟ

By Suvarna News  |  First Published May 21, 2024, 10:46 PM IST

ಜನಸಾಮಾನ್ಯರಿಗೆ  ಈಗ ತರಕಾರಿ ಬೆಲೆ ಹೆಚ್ಚಳ ಆತಂಕ ಮೂಡಿಸಿದೆ. ಇದು ಗಾಯದ ಮೇಲೆ ಬರೆ ಎಳೆದಿದ್ದು, ಬದುಕು ದುಸ್ತರವಾಗಿ ಜನಸಾಮಾನ್ಯರಿಗೆ ಪರಿಣಮಿಸಿದೆ. ಬರದ ಛಾಯೆ ಪರಿಣಾಮ ಬಹುತೇಕ ಎಲ್ಲ ಬಗೆಯ ತರಕಾರಿಗಳ ಬೆಲೆ ಗಗನಕ್ಕೇರುತ್ತಿವೆ.


ವರದಿ : ಆಲ್ದೂರು ಕಿರಣ್ 

ಚಿಕ್ಕಮಗಳೂರು (ಮೇ.21) : ಜನಸಾಮಾನ್ಯರಿಗೆ  ಈಗ ತರಕಾರಿ ಬೆಲೆ ಹೆಚ್ಚಳ ಆತಂಕ ಮೂಡಿಸಿದೆ. ಇದು ಗಾಯದ ಮೇಲೆ ಬರೆ ಎಳೆದಿದ್ದು, ಬದುಕು ದುಸ್ತರವಾಗಿ ಜನಸಾಮಾನ್ಯರಿಗೆ ಪರಿಣಮಿಸಿದೆ. ಬರದ ಛಾಯೆ ಪರಿಣಾಮ ಬಹುತೇಕ ಎಲ್ಲ ಬಗೆಯ ತರಕಾರಿಗಳ ಬೆಲೆ ಗಗನಕ್ಕೇರುತ್ತಿವೆ. ಕಳೆದ ಎರಡು ವಾರಗಳಿಂದ ಗ್ರಾಹಕರಿಗೆ ಇದರ ಬಿಸಿ ತೀವ್ರವಾಗಿ ತಟ್ಟುತ್ತಿದೆ. ಅದರಲ್ಲೂ ಬಟಾಣಿ 200, ಬೀನ್ಸ್ 160, ಹಸಿಮೆಣಸಿನ ಕಾಯಿ 100 ಕ್ಕೇರಿ ಗ್ರಾಹಕರಿಗೆ ಖಾರದ ಅನುಭವ ನೀಡಲಾರಂಭಿಸಿದೆ. 

Latest Videos

undefined

ತರಕಾರಿ ಬೆಲೆ ಬಲು ತುಟ್ಟಿ: ಗ್ರಾಹಕರಿಗೆ ಸಂಕಷ್ಟ

ಒಂದು ಕೆ.ಜಿ. ಬಟಾಣಿ 200 ರೂ.!, ಒಂದು ಸೌತೆಕಾಯಿ ಬೆಲೆ 60 ರೂ., 60 ರೂ.ಗೆ ಒಂದು ಕೆ.ಜಿ ಕ್ಯಾರೆಟ್ , ಬೀನ್ಸ್ 160, ಹಸಿಮೆಣಸಿನಕಾಯಿ 100 ಅಬ್ಬಬ್ಬಾ ತರಕಾರಿ ಇಷ್ಟೊಂದು ದುಬಾರಿಯೇ?.ಹೌದು ಚಿಕ್ಕಮಗಳೂರಿನ ಮಾರುಕಟ್ಟೆಗೆ ಬರುವ ಗ್ರಾಹಕರಿಂದ ಕೇಳಿ ಬರುತ್ತಿರುವ ಈ ಉದ್ಘಾರಕ್ಕೆ ಬರ ಕಾರಣವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸಿಗಬೇಕಿದ್ದ ತರಕಾರಿ, ಕಾಯಿ ಪಲ್ಲೆಗಳ ಬೆಲೆ ಗಗನಕ್ಕೇರಿದೆ. ಇದು ಗ್ರಾಹಕರ ಪಾಲಿಗೆ ಬಿಸಿ ತುಪ್ಪವಾಗಿದೆ. ಹೊಳಪಿನಿಂದ ಕೂಡಿದ ತಾಜಾ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುವ ಸಮಯವಾಗಿದ್ದು, ತರಕಾರಿ ವಹಿವಾಟಿನಿಂದ ರೈತರು ಹಾಗು ಮಾರಾಟಗಾರರಿಗೆ ಬಿಡುವಿಲ್ಲದ ದುಡಿಮೆ ಸಂದರ್ಭ. ಆದರೆ ಈ ವರ್ಷದ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬರ ಮತ್ತು ಅಕಾಲಿಕ ಮಳೆಯ ಪರಿಣಾಮ ತರಕಾರಿ ಬೆಳೆ ಪ್ರಮಾಣ ಅತ್ಯಲ್ಪವಾಗಿದೆ. ಇದರಿಂದ ತರಕಾರಿ ಬೆಲೆ ದುಬಾರಿಯಾಗಲು ಕಾರಣವಾಗಿದೆ. 

ಮಳೆಗೆ ಉರುಳಿ ಬಿದ್ದ ಹಂಪಿಯ ಸಾಲು ಮಂಟಪಗಳು 

ತರಕಾರಿ ಈಗಿನ ಬೆಲೆ(1ಕೆಜಿಗೆ)    ಹಿಂದಿನ ಬೆಲೆ ಬೀನ್ಸ್ ₹160, ಹಿಂದಿನ ಬೆಲೆ 40 ರಿಂದ 60, ಸುಲಿಯುವ ಕಾಳು ₹220, ಹಿಂದಿನ ಬೆಲೆ 80, ಹೂ ಕೋಸು ₹60, ಹಿಂದಿನ ಬೆಲೆ 45, ಬಟಾಣಿ ₹200, ಹಿಂದಿನ ಬೆಲೆ 70, ಕ್ಯಾರೆಟ್ ₹60, ಹಿಂದಿನ ಬೆಲೆ 30, ದಪ್ಪ ಮೆಣಸಿನಕಾಯಿ ₹80, ಹಿಂದಿನ ಬೆಲೆ 30, ಹಸಿಮೆಣಸಿನಕಾಯಿ 100, ಹಿಂದಿನ 40 ರೂ. ಆಗಿತ್ತು.

ಮದ್ಯವರ್ತಿಗಳಿಗೆ  ವರದಾನ : 

ಈ ಅವಧಿಯಲ್ಲಿ ಚಿಕ್ಕಮಗಳೂರು ಸುತ್ತಲಿನ ಅಂಬಳೆ, ಲಕ್ಯ, ಕಳಸಾಪುರ, ಕೆಂಪನಹಳ್ಳಿ, ಆಲೇನಹಳ್ಳಿ ಸೇರಿದಂತೆ ಪಕ್ಕದ ಜಿಲ್ಲೆ ಹಾಸನದ ಬೇಲೂರು, ಹಳೆಬೀಡು ಇನ್ನಿತರೆ ಕಡೆಗಳಿಂದ ಬರುವ ತರಕಾರಿಯಿಂದ ಮಾರುಕಟ್ಟೆ ತುಂಬಿಹೋಗುತ್ತಿತ್ತು.ಎಲೆ ಕೋಸು, ಹೂ ಕೋಸು, ಆಲೂಗೆಡ್ಡೆ, ಕ್ಯಾರೆಟ್, ಮೆಣಸಿನ ಕಾಯಿ, ಇನ್ನಿತರೆ ತರಕಾರಿ ಚಿಕ್ಕಮಗಳೂರಿನಿಂದ ಬಾಂಬೆ, ಪೂನ, ಗೋವಾ ದಂತಹ ಹೊರ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಆದರೆ ಈ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರದ ಕಾರಣ ಯಾವ ತರಕಾರಿ ಬೆಳೆಯನ್ನೂ ಬೆಳೆಯಲಾಗಿಲ್ಲ. ನೀರಾವರಿ ಸೌಲಭ್ಯ ಇರುವವರು, ಪಂಪ್ ಸೆಟ್ ಇರುವವರು ಬೆಳೆದೆ ತರಕಾರಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಅದೂ ಅತ್ಯಲ್ಪ ಪ್ರಮಾಣದಾಗಿದೆ.  ತರಿಕಾರಿ ಬೆಲೆ ದುಬಾರಿಯಾಗಿರುವುದು ರೈತರಿಗೆ ಲಾಭವನ್ನು ತಂದಿಲ್ಲ ಎನ್ನುವ ನೋವು ರೈತರದ್ದು, ತರಕಾರಿ ದರ ಏರಿಕೆ ಕೇವಲ ಸಾಮಾನ್ಯರಿಗೆ ಮಾತ್ರ ಬಿಸಿ ಮುಟ್ಟಿಸಿಲ್ಲ. ತರಕಾರಿ ವ್ಯಾಪಾರಿಗಳೂ ದರ ಏರಿಕೆಯಿಂದ ತತ್ತರಿಸಿದ್ದಾರೆ. ಇನ್ನು ಮದ್ಯವರ್ತಿಗಳಿಗೆ ಇದು ವರದಾನವಾಗಿ ಪರಿಣಾಮಿಸಿದೆ..

click me!