Dec 29, 2023, 3:46 PM IST
ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದಿದ್ದರು ರಾಷ್ಟ್ರಕವಿ ಕುವೆಂಪು. ಆದರೆ ಕನ್ನಡಕ್ಕಾಗಿ(Kannada) ಕೈ ಎತ್ತಿದವರ ಕೈಗೆ ಸರ್ಕಾರ ಕೋಳ ಹಾಕಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಬೀದಿಗಿಳಿದ ಕರ್ನಾಟಕ ರಕ್ಷಣಾ ವೇದಿಕೆ(Karnataka Rakshana Vedike) ಕಾರ್ಯಕರ್ತರು ಜೈಲು ಸೇರಿದ್ದಾರೆ. ಇದು ಸರ್ಕಾರ ಮತ್ತು ಕರವೇ ಮಧ್ಯೆ ಜಟಾಪಟಿಗೆ ಕಾರಣವಾಗಿ ಬಿಟ್ಟಿದೆ. ಸರ್ಕಾರ ಕೊಟ್ಟಿರೆ ಜೈಲುಭಾಗ್ಯದ ವಿರುದ್ಧ ಕರವೇ ಕಾರ್ಯಕರ್ತರು ರೊಚ್ಚಿಗೆದ್ದಿದ್ರೆ, ಪ್ರತಿಪಕ್ಷ ಬಿಜೆಪಿ(BJP) ಕನ್ನಡ ಹೋರಾಟಗಾರರ ಬೆಂಬಲಕ್ಕೆ ನಿಂತಿದೆ. ಇದು ಕರ್ನಾಟಕ ರಕ್ಷಣಾ ವೇದಿಕೆಯ ಉಗ್ರ ಹೋರಾಟಕ್ಕೆ ಸಂದ ಜಯ. ರಾಜ್ಯದಲ್ಲಿ 60:40 ಮಾದರಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯ(Kannada Nameplates) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದು, ಫೆಬ್ರವರಿ 28ರೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ(Siddaramaiah) ಈ ಘೋಷಣೆ ಮಾಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡ್ಬೇಕಾಯ್ತು. ರಾಜಧಾನಿ ಬೆಂಗಳೂರಿನ ಅಂಗಡಿ ಮುಂಗಟ್ಟುಗಳು, ಶಾಪಿಂಗ್ ಮಾಲ್'ಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಕಾರ್ಯಕರ್ತರು ಬುಧವಾರ ಬೀದಿಗಿಳಿದಿದ್ರು. ಕನ್ನಡಕ್ಕೆ ಜಾಗವಿಲ್ಲದ ಅನ್ಯಭಾಷೆಯ ನಾಮಫಲಕಗಳನ್ನು ಪುಡಿ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ರು. ಇದ್ರ ಬೆನ್ನಲ್ಲೇ ಮಧ್ಯರಾತ್ರಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಂಧಿಸಲಾಯ್ತು. ನಾರಾಯಣ ಗೌಡರ ಜೊತೆ 29 ಕರವೇ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಬಂಧಿಸುತ್ತಿದ್ದಂತೆ ಆಕ್ರೋಶ ಹೊರ ಹಾಕಿದ ನಾರಾಯಣ ಗೌಡ್ರು, ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿ ಕಾರಿದ್ರು.
ಇದನ್ನೂ ವೀಕ್ಷಿಸಿ: ರೂಪಾಯಿಯಲ್ಲೇ ವ್ಯಾಪಾರವಾದ್ರೆ ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!