ಬೆಂಗ್ಳೂರಲ್ಲಿ ಮೆಡಿಕಪ್ ರೆಪ್‌ಗೂ ಅಂಟಿದ ಕೊರೋನಾ ಸೋಂಕು..!

Jun 22, 2020, 4:49 PM IST

ಬೆಂಗಳೂರು(ಜೂ.22): ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಜಯನಗರ 4th ಬ್ಲಾಕ್‌ನ ತಿಲಕ್‌ ನಗರದಲ್ಲಿ ವಾಸವಿದ್ದ ಮೆಡಿಕಲ್ ರೆಪ್ರೆಸೆಂಟಿವ್‌ಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ತಿಲಕ್ ನಗರದ 31ನೇ ಕ್ರಾಸ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

45 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ಈಗ ಖಚಿತವಾಗಿದೆ. ತಿಲಕ್ ನಗರದ 31ನೇ ಕ್ರಾಸ್ ರಸ್ತೆಯನ್ನು ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣ ಬಂದ್ ಮಾಡಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ವಿಕ್ಟೋರಿಯಾದಲ್ಲಿ ಡೋಂಟ್‌ಕೇರ್; ಕರ್ತವ್ಯಕ್ಕೆ ಬರಲು ಕಿರುಕುಳ

ಕೆಲದಿನಗಳಿಂದೀಚೆಗೆ ಬೆಂಗಳೂರಿನಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ ಪ್ರತಿದಿನ ಶತಕದ ಗಡಿ ದಾಟುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.