Asianet Suvarna News Asianet Suvarna News

ಕೊರೊನಾ ವಾರಿಯರ್ಸ್‌ಗೆ ವಿಕ್ಟೋರಿಯಾದಲ್ಲಿ ಡೋಂಟ್‌ಕೇರ್; ಕರ್ತವ್ಯಕ್ಕೆ ಬರಲು ಕಿರುಕುಳ

ಕೊರೊನಾ ನಿರ್ಲಕ್ಷ್ಯಕ್ಕೆ  ವಿಕ್ಟೋರಿಯಾ ಆಸ್ಪತ್ರೆ ಕಾರಣವಾಗಿದೆ. ಕೊರೊನಾ ಬಂದ್ರೂ ವಿಕ್ಟೋರಿಯಾ ಆಸ್ಪತ್ರೆ ಡೋಂಟ್ ಕೇರ್ ಎನ್ನುತ್ತಿದೆ. ಇಲ್ಲಿ ಕೆಲಸ ಮಾಡುವ ಸ್ಟಾಫ್‌ ನರ್ಸ್‌ಗೂ ಕೊರೊನಾ ಸೋಂಕು ತಗುಲಿದೆ. ರಿಪೋರ್ಟ್‌ ಬಂದ ದಿನವೂ ಕರ್ತವ್ಯಕ್ಕೆ ನರ್ಸ್ ಹಾಜರಾಗಿದ್ದಾರೆ. 

ಬೆಂಗಳೂರು (ಜೂ. 22): ಕೊರೊನಾ ನಿರ್ಲಕ್ಷ್ಯಕ್ಕೆ  ವಿಕ್ಟೋರಿಯಾ ಆಸ್ಪತ್ರೆ ಕಾರಣವಾಗಿದೆ. ಕೊರೊನಾ ಬಂದ್ರೂ ವಿಕ್ಟೋರಿಯಾ ಆಸ್ಪತ್ರೆ ಡೋಂಟ್ ಕೇರ್ ಎನ್ನುತ್ತಿದೆ. ಇಲ್ಲಿ ಕೆಲಸ ಮಾಡುವ ಸ್ಟಾಫ್‌ ನರ್ಸ್‌ಗೂ ಕೊರೊನಾ ಸೋಂಕು ತಗುಲಿದೆ. ರಿಪೋರ್ಟ್‌ ಬಂದ ದಿನವೂ ಕರ್ತವ್ಯಕ್ಕೆ ನರ್ಸ್ ಹಾಜರಾಗಿದ್ದಾರೆ. 

ಹೆಚ್ಚೆಚ್ಚು ಕೊರೋನಾ ಟೆಸ್ಟ್ ಮಾಡಬೇಕು: ಡಾ. ಸಿ.ಎನ್. ಮಂಜುನಾಥ್

ಸ್ಟಾಫ್‌ ನರ್ಸ್‌ ಒಬ್ಬರ ಸಹೋದರರಿಗೆ ಕೊರೊನಾ ಬಂದಿತ್ತು. ಡೆಂಟಲ್ ಡೀನ್ ಡಾ. ಗಿರೀಶ್‌ಗೆ ಸ್ಟಾಫ್ ನರ್ಸ್ ಮಾಹಿತಿ ಕೊಟ್ಟಿದ್ದರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಟಾರ್ಚರ್ ಕೊಟ್ಟಿದ್ದರು ಎನ್ನಲಾಗಿದೆ. ಇದೀಗ ಡೆಂಟಲ್ ಕಾಲೇಜಿನ 150 ಮಂದಿಗೆ ಆತಂಕ ಎದುರಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!