ಲಾಕ್‌ಡೌನ್‌ ಪರಿಹಾರವಲ್ಲ, ಕಠಿಣ ಕ್ರಮಗಳು, ಪರ್ಯಾಯ ಮಾರ್ಗ ಬಗ್ಗೆ ಚರ್ಚೆ: ಸುಧಾಕರ್

Apr 19, 2021, 2:12 PM IST

ಬೆಂಗಳೂರು (ಏ. 19): ರಾಜಧಾನಿಯಲ್ಲಿ ಕೊರೋನಾ ಕೈಮೀರುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಕೊರೊನಾ ಕಂಟ್ರೋಲ್‌ಗೆ ಟಫ್‌ರೂಲ್ಸ್‌ ಮಾಡದೇ ಬೇರೆ ದಾರಿಯಿಲ್ಲ: ಟಾಸ್ಕ್‌ಫೋರ್ಸ್

ಒಂದೆಡೆ ಚಿಕಿತ್ಸೆ ನೀಡಿ ನಿಯಂತ್ರಣ ಮಾಡುತ್ತಿದ್ದೇವೆ. ಮತ್ತೊಂದೆಡೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಿ ನಿಯಂತ್ರಣ ಮಾಡಬೇಕಿದೆ. ದಿನ ನಿತ್ಯದ ಚಟುವಟಿಕೆಗಳು ನಡೆಯುತ್ತಿದ್ದರೆ, ಕೊರೋನಾ ನಿಯಂತ್ರಣ ಅಸಾಧ್ಯ. ಆದ್ದರಿಂದ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.