ಬೆಂಗಳೂರಿನಲ್ಲಿ ನೇಪಾಳಿ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆಗೈದು ನಾಪತ್ತೆಯಾಗಿದ್ದ ಶಂಕಿತ ಕೊಲೆ ಆರೋಪಿ ಮುಕ್ತಿ ರಂಜನ್ ದಾಸ್ ತನ್ನ ಸ್ವಗ್ರಾಮದಲ್ಲಿ ಬದುಕು ಅಂತ್ಯಗೊಳಿಸಿದ್ದಾನೆ. ಸ್ಕೂಟಿಯಲ್ಲಿ ತೆರಳಿದ್ದ ಮುಕ್ತಿ ರಂಜನ್ ಸ್ಮಶಾನದ ಪಕ್ಕದಲ್ಲೇ ಬದುಕು ಅಂತ್ಯಗೊಳಿಸಿದ್ದಾನೆ.
ಭುವನೇಶ್ವರ(ಸೆ.25) ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಮಹಿಳೆ ಕೊಲೆ ಹಾಗೂ ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣದ ಶಂಕಿತ ಆರೋಪಿ ಮುಕ್ತಿ ರಂಜನ್ ರಾಯ್ ಸಾವಿಗೆ ಶರಣಾಗಿದ್ದಾನೆ. ನೇಪಾಳಿ ಮೂಲದ ಮಹಾಲಕ್ಷ್ಮಿ ಹತ್ಯೆಗೈದು ನಾಪತ್ತೆಯಾಗಿದ್ದ ಒಡಿಶಾ ಮೂಲದ ಮುಕ್ತಿ ರಂಜನ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ತನ್ನ ಸ್ವಗ್ರಾಮ ಭೂತಕಪುರದ ಸಮೀಪದ ಕಳೆಪಾ ಸ್ಮಶಾನದ ಬಳಿ ಬದುಕು ಅಂತ್ಯಗೊಳಿಸಿದ್ದಾನೆ.
ಬೆಂಗಳೂರಿನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್, ಅದೇ ಫ್ಯಾಕ್ಟರಿಯ ಮಹಾಲಕ್ಷ್ಮಿಯನ್ನು ಪ್ರೀತಿಸುತ್ತಿದ್ದ. ಆಧರೆ ಏಕಾಏಕಿ ಹತ್ಯೆ ಮಾಡಿ ದೇಹವನ್ನು 50ಕ್ಕೂ ಹೆಚ್ಚು ತುಂಡುಗಳಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಬಳಿಕ ಪರಾರಿಯಾಗಿದ್ದ. ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ ಅನ್ನೋ ಮಾಹಿತಿ ಮೇರೆಗೆ ಪೊಲೀಸರು ಪಶ್ಚಿಮ ಬಂಗಾಳಕ್ಕೂ ತೆರಳಿದ್ದ. ಮೊಬೈಲ್ ಫೋನ್ ಬಳಸದೆ ತಿರುಗಾಡುತ್ತಿದ್ದ ಈತ, ಒಡಿಶಾದ ಭದ್ರಾಕ್ ಜಿಲ್ಲೆಗೆ ಮರಳಿದ್ದ.
ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್, ಶಂಕಿತ ಆರೋಪಿ ಮೃತದೇಹ ಒಡಿಶಾದಲ್ಲಿ ಪತ್ತೆ!
ಒಡಿಶಾದ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಮನೆಗೆ ಮರಳಿದ್ದರೂ ಸೈಲೆಂಟ್ ಆಗಿದ್ದ. ನಿನ್ನೆ ರಾತ್ರಿ ಭದ್ರಕ್‌ಗೆ ತೆರಳುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಸ್ಕೂಟಿ ಮೂಲಕ ಈತ ತೆರಳಿದ್ದ. ಮೊಬೈಲ್ ಇಲ್ಲದ ಕಾರಣ ಈತ ಲ್ಯಾಪ್‌ಟಾಪ್ ಒಯ್ದಿದ್ದ. ಸ್ಕೂಟಿಯಲ್ಲಿ ಲ್ಯಾಪ್‌ಟಾಪ್ ಇಟ್ಟು ಕುಳೆಪಾ ಸ್ಮಶಾನದ ಬಳಿ ಬದುಕು ಅಂತ್ಯಗೊಳಿಸಿದ್ದಾನೆ.
ಬೆಳಗಿನ ಜಾವದಿಂದಲೂ ದಾರಿ ಪಕ್ಕದಲ್ಲಿ ಸ್ಕೂಟಿ ಹಾಗೂ ಲ್ಯಾಪ್‌ಟಾಪ್ ಗಮನಿಸಿದ ಸ್ಥಳೀಯರು ಅಕ್ಕ ಪಕ್ಕ ಹುಡುಕಾಡಿದ್ದಾರೆ. ಈ ವೇಳೆ ಮರದ ಬಳಿ ಮೃತದೇಹ ಪತ್ತೆಯಾಗಿದೆ. ಸ್ಛಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಆರ್‌ಡಿ ಪಂಡಿಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹ ವಶಕ್ಕೆ ಪಡೆದು ಭದ್ರಕ್ ಸರ್ಕಾರಿ ಆಸ್ಪ್ರತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಧುಶೂರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಬಳಸಿದ್ದ ಸ್ಕೂಟಿ, ಲ್ಯಾಪ್‌ಟಾಪ್ ಹಾಗೂ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಇದೀಗ ದುರಂತ ಅಂತ್ಯಕಂಡಿದ್ದಾರೆ. ಮಹಾಲಕ್ಷ್ಮಿ ಹತ್ಯೆ ಪ್ರಕರಣ ಬೆಂಗಳೂರು ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಪ್ರಕರಣದ ರೀತಿಯಲ್ಲೇ ಈ ಘಟನೆ ನಡೆದಿದೆ. ಈ ಕೊಲೆ ಪ್ರಕರಣಕ್ಕೆ ಶ್ರದ್ಧವಾಕರ್ ಘಟನೆ ಪ್ರೇರಣೆಯಾಗಿದೆಯಾ ಅನ್ನೋ ಹಲವು ಅನುಮಾನಗಳಿಗೆ ಇದೀಗ ಉತ್ತರ ಕಂಡು ಹಿಡಿಯುವುದು ಕಷ್ಟವಾಗಿದೆ. ಕಾರಣ ಆರೋಪಿ ಬದುಕು ಅಂತ್ಯಗೊಳಿಸಿದರೆ, ಆತನ ಜೊತೆಗೆ ಸಾಕ್ಷ್ಯಗಳು ನಾಶವಾಗಿದೆ. ಇದೀಗ ಈತನ ಸ್ಕೂಟಿಯಿಂದ ವಶಪಡಿಸಿಕೊಂಡಿರವ ಲ್ಯಾಪ್‌ಟಾಪ್ ಹಾಗೂ ಡೈರಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!