
ಆಲ್ದೂರು ಕಿರಣ್: ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.25): ಮಗುವಿನ ಹುಟ್ಟಿನ ಬಗ್ಗೆ ಅನುಮಾನಗೊಂಡಿದ್ದ ಅಪ್ಪ 5 ವರ್ಷದ ತನ್ನ ಮಗುವನ್ನೇ ಕೊಂದಿರುವಂತಹ ಹೃದಯ ವಿದ್ರಾವಕ ಘಟನೆಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಗ್ರಾಮ ಸಾಕ್ಷಿಯಾಗಿದೆ. ಶಿವನಿ ರೈಲ್ವೆ ಸ್ಟೇಷನ್ ನಿವಾಸಿ ಮಂಜುನಾಥ್ ಏಳು ವರ್ಷಗಳ ಹಿಂದೆ ಮಂಗಳ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಯಾದ ತಿಂಗಳ ಬಳಿಕ ಮಂಜುನಾಥ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ಮಂಗಳ ಗರ್ಭೀಣಿಯಾಗಿದ್ದಳು. ಅಂದಿನಿಂದಲೂ ಮಂಜುನಾಥನಿಗೆ ಮಗುವಿನ ಜನನದ ಬಗ್ಗೆ ಅನುಮಾನ ಮೂಡಿತ್ತು. ಜೊತೆಗೆ ಕುಡಿತದ ಚಟಕ್ಕೆ ಬಿದ್ದಿದ್ದ ಮಂಜುನಾಥ್ ಪತ್ನಿ ಜೊತೆ ಜಗಳ ಕೂಡ ಆಡುತ್ತಿದ್ದನು.
ಮನೆಯಲ್ಲಿ ಪತ್ನಿ ಇಲ್ಲದ ವೇಳೆ ಕೃತ್ಯ: ಇದೇ ತಿಂಗಳ 19ನೇ ತಾರೀಖಿನಂದು ಮಗುವಿಗೆ ಜ್ವರ ಇದ್ದ ಕಾರಣ ಅಂಗನವಾಡಿಗೆ ಹೋಗಿರಲಿಲ್ಲ. ಮನೆಯಲ್ಲೇ ಮಲಗಿತ್ತು. ಇದೇ ವೇಳೆ ಪತ್ನಿ ಜೊತೆ ಕೆಲಸಕ್ಕೆ ಹೋಗಿದ್ದ ಮಂಜುನಾಥ್ ಮನೆಗೆ ಬಂದಿದ್ದನು. ಈ ವೇಳೆ ಒಲೆ ಊದುವ ಕೊಳಪೆಯಿಂದ ಮಗುವಿನ ತಲೆಗೆ ಹೊಡೆದು ಕೊಂದಿದ್ದನು. ಬಳಿಕ ಮಗು ಸತ್ತಿರುವುದನ್ನ ಗಮನಿಸಿ ಭಯಗೊಂಡು ಅತ್ಯಾಚಾರ ಹಾಗೂ ಮಗುವಿನ ಕಿವಿಯಲ್ಲಿದ್ದ ಒಡವೆಗಾಗಿ ಯಾರೋ ಕೊಲೆ ಮಾಡಿದ್ದಾರೆಂದು ಬಿಂಬಿಸಲು ಮಗುವಿನ ಕಿವಿ ಓಲೆ ಹಾಗೂ ಕಾಲ್ಗೆಜ್ಜೆಯನ್ನ ಬಿಚ್ಚಿಕೊಂಡು ಕೊಲೆಯ ನಾಟಕವಾಡಿದ್ದನು.
ಕೂಡಲೇ ಮಳೆ ಸಮೀಕ್ಷೆ ನಡೆಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ
ಆದರೆ, ಸ್ಥಳಕ್ಕೆ ಬಂದ ಪೊಲೀಸರಿಗೆ ಅತ್ಯಾಚಾರದ ಯಾವುದೇ ಲಕ್ಷಣಗಳು ಕಂಡಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಅಜ್ಜಂಪುರ ಪೊಲೀಸರು ತನಿಖೆ ಕೈಗೊಂಡು ಊರಿನ ಹಲವರನ್ನ ತಂದು ವರ್ಕ್ ಮಾಡಿ ವಿಚಾರಣೆ ಮಾಡಿದ್ದರು. ಆದರೆ, ಅಂತಿಮವಾಗಿ ಗಂಡ-ಹೆಂಡತಿ ಜಗಳ, ಮಗುವಿನ ಜೊತೆ ಅಪ್ಪನ ವರ್ತನೆ, ಮನೆಯಲ್ಲಿ ಹೆಂಡತಿ ಜೊತೆ ಗಂಡನ ಮಾತು ಕೇಳಿದ್ದ ಅಕ್ಕ-ಪಕ್ಕದವರ ಮಾತಿನ ಮೇರೆಗೆ ಮಗುವಿನ ಅಪ್ಪ ಮಂಜುನಾಥ್ ನನ್ನ ತಂದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ