Sep 25, 2024, 11:45 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಸಂಕಷ್ಟ ಹೆಚ್ಚಾಗಿದೆ. ಇದೀಗ ಇರುವ ಕಾನೂನು ದಾರಿಗಳನ್ನು ಹುಡುಕಾಟ ಜೋರಾಗಿದೆ.ಸಿದ್ದರಾಮಯ್ಯ ವಿರುದ್ದ ಹೈಕೋರ್ಟ್ ತನಿಖೆಗೆ ಅಸ್ತು ಎಂದಿದೆ. ಜನಪ್ರತಿನಿಧಿಗಳ ನ್ಯಾಯಾಲಯ, ಲೋಕಾಯುಕ್ತಕ್ಕೆ ಈ ಪ್ರಕರಣ ನೀಡಿದೆ. ಆದರೆ ದೂರುದಾರರಿಗೆ ಲೋಕಾಯುಕ್ತ ಮೇಲೆ ನಂಬಿಕೆ ಇಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಹೈಕೋರ್ಟ್ ನೀಡಿದ 171 ಪುಟಗಳ ತೀರ್ಪಿನಲ್ಲಿ ಏನಿದೆ? ಸಿದ್ದರಾಮಯ್ಯ ರಾಜೀನಾಮೆ ಕುರಿತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದೇನು?