ಈ ಶ್ಲೋಕ ಹೇಳಿದರೆ ನೀವು ಕಳೆದುಕೊಂಡದ್ದೆಲ್ಲ ಸಿಗುತ್ತೆ! ಯಾರಿವನು ಕಾರ್ಯವೀರ್ಯಾರ್ಜುನ?

By Bhavani Bhat  |  First Published Sep 25, 2024, 9:55 PM IST

ಕಾರ್ತವೀರ್ಯಾರ್ಜುನನ ಮಂತ್ರವು ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು ಮತ್ತು ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಇದೆ. ಈ ಮಂತ್ರವನ್ನು ಪಠಿಸುವುದರಿಂದ ಮತ್ತು ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟ, ಸಂಪತ್ತು ಮತ್ತು ಪ್ರೀತಿಪಾತ್ರರನ್ನು ಮರಳಿ ಪಡೆಯಬಹುದು ಎಂದು ಹೇಳಲಾಗುತ್ತದೆ.


ನೀವು ಪುರಾಣದ ಕಾರ್ಯವೀರ್ಯಾರ್ಜುನನ ಕತೆ ಕೇಳಿದ್ದೀರಾ? ಇವನನ್ನು ಸ್ಮರಿಸುವ ಶ್ಲೋಕವೊಂದಿದೆ. ಇದರಲ್ಲೊಂದು ಅಪಾರ ಶಕ್ತಿಯಿದೆ. ಅದೇನೆಂದರೆ ನೀವು ಯಾವುದಾದರೂ ವಸ್ತು ಅಥವಾ ಸಂಗತಿಯನ್ನು ಕಳೆದುಕೊಂಡಿದ್ದರೆ, ಅದು ನಿಮಗೆ ಮರಳಿ ಸಿಗುತ್ತದೆ. ಹಾಗೆಯೇ ಇದನ್ನು ಜಪಿಸುತ್ತಿದ್ದರೆ ನಿಮ್ಮ ಮನೆಗೆ ಚೋರಭಯವೂ ಇರುವುದಿಲ್ಲ.   

ಅಂದ ಹಾಗೆ ಯಾರು ಈ ಕಾರ್ಯವೀರ್ಯಾರ್ಜುನ?
 
ಕಾರ್ತವೀರ್ಯ ಅರ್ಜುನನು ಹೇಹಯ ರಾಜವಂಶದ ದೊರೆ. ಅವನು ದತ್ತಾತ್ರೇಯನ ಶಿಷ್ಯ ಮತ್ತು ವಿಷ್ಣುವಿನ ದೈವಿಕ ಆಯುಧವಾದ ಸುದರ್ಶನ ಚಕ್ರದ ಅವತಾರ ಎಂದು ನಂಬಲಾಗಿದೆ. ಸುದರ್ಶನನಿಗೆ ತನ್ನ ಬಗೆಗೆ ಭಾರಿ ಗರ್ವ ಇತ್ತು. ವಿಷ್ಣುವು ಅವನನ್ನು ವಿನಮ್ರಗೊಳಿಸಲು, ಅವನಿಗೆ ಪಾಠ ಕಲಿಸಲು ಬಯಸಿದ. ನಂತರ ಶಾಪ ನೀಡಿ ಅವನನ್ನು ಭೂಮಿಯಲ್ಲಿ ಜನಿಸುವಂತೆ ಮಾಡಿದ. ಅಲ್ಲಿಗೆ ಆತನ ಗರ್ವ ಇಳಿಯಿತು. ಭೂಮಿಯಲ್ಲಿ ಶಕ್ತಿವಂತ ರಾಜನಾಗಿ ಜನಿಸಿದ ಅವನನ್ನು, ವಿಷ್ಣುವೇ ಪರಶುರಾಮನ ಅವತಾರ ತಾಳಿ ಬಂದು ವಧಿಸಿದ. 

Tap to resize

Latest Videos

undefined

ಕಾರ್ತವೀರ್ಯ ಅರ್ಜುನನಿಗೆ ಸಾವಿರ ಕೈಗಳು ಇದ್ದವು. ಅವನಲ್ಲಿ ಮಹಾನ್ ಶಕ್ತಿಗಳಿದ್ದವು. ಅವನು ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವ 1000 ಕೈಗಳನ್ನು ಹೊಂದಿದ್ದ. ತನ್ನ ಶತ್ರುಗಳ ರಕ್ತದಲ್ಲಿ ತೊಯ್ದ ಬಟ್ಟೆಗಳನ್ನು ಧರಿಸಿರುತ್ತಾನೆ. ಕಾರ್ತವೀರ್ಯ ಅರ್ಜುನನು ಕೂಡ ಭಕ್ತರಿಂದ ಪೂಜಿತ. ಯಾಕೆಂದರೆ ಅವನು ಸುದರ್ಶನನ ಅವತಾರ. ಭಕ್ತನಿಗೆ ಹೆಚ್ಚಿನ ಸಂಪತ್ತು ಮತ್ತು ಜನರ ಮೇಲೆ ಅಧಿಕಾರವನ್ನು ಆತ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆತನನ್ನು ಆರಾಧಿಸುವುದರಿಂದ ಕದ್ದ ವಸ್ತುಗಳನ್ನು ಮರಳಿ ಪಡೆಯಹುದಾಗಿದೆ. ನಿಮ್ಮನ್ನು ತೊರೆದ ಪ್ರೀತಿಪಾತ್ರರನ್ನು ಮರಳಿ ತರಲು, ಸಂಪತ್ತು ಮತ್ತು ಇತರ ಅಮೂಲ್ಯ ಆಸ್ತಿಗಳನ್ನು ಕಳೆದುಕೊಂಡಿದ್ದರೆ ಮರಳಿ ಪಡೆಯಲು ಸಾಧ್ಯ. ಜೊತೆಗೆ ನಿಮ್ಮ ಅದೃಷ್ಟವನ್ನು ಇದು ಹೆಚ್ಚಿಸುತ್ತದೆ.

ಭಕ್ತರು ಕಾರ್ತವೀರ್ಯ ಅರ್ಜುನ ಹೋಮವನ್ನು ಮಾಡುತ್ತಾರೆ ಮತ್ತು ಕಾರ್ತವೀರ್ಯ ಸ್ತೋತ್ರಮ್ ಮತ್ತು ಮಂತ್ರವನ್ನು ಪಠಿಸುತ್ತಾರೆ. ಈ ಮಂತ್ರವನ್ನು ಸ್ನಾನ ಮಾಡಿ ಶುಚಿರ್ಭೂತನಾಗಿ, ದೇವರ ಧ್ಯಾನ ಮಾಡುವಾಗ ಅಥವಾ ಹೋಮ (ಅಗ್ನಿ ಯಜ್ಞ) ಮಾಡುವಾಗ ಜಪಿಸಬೇಕು.

ಈತನ ಮಂತ್ರವನ್ನು ಹೇಳಿದ ಫಲ ಪಡೆದ ಅನುಭವ ಬಹಳ ಜನಗಳಿಗೆ ಈಗಾಗಲೇ ಬಂದಿರಬಹುದು. ಈತನ ದೇವತಾ ವಿಗ್ರಹ ಶೃಂಗೇರಿ ಶನೇಶ್ವರ ದೇವಸ್ಥಾನದ ಹೊರಭಾಗದಲ್ಲಿದೆ. ವಿಗ್ರಹಕ್ಕೆ  ಪ್ರತಿದಿನ ಪೂಜೆ ಸಲ್ಲುತ್ತದೆ. ಕಳೆದ ವಸ್ತು ದೊರೆತಮೇಲೆ  ನಾವು ಹೇಳಿಕೊಂಡಿದ್ದಲ್ಲಿ ಇಲ್ಲಿ ಕಾಣಿಕೆಯನ್ನು ಸಲ್ಲಿಸುವುದು ಪ್ರತೀತಿ. ಇಲ್ಲಿ ನಂಬಿಕೆ ಹಾಗೂ ಭಕ್ತಿ  ಬಹಳ ಮುಖ್ಯ ಎನಿಸುತ್ತದೆ.

ಈ ರಾಶಿಯವರಿಗೆ ಏಕಾಂಗಿಯಾಗಿರುವುದು ಇಷ್ಟ, ಯಾವಾಗಲೂ ಸಿಂಗಲ್ ಆಗಿರುತ್ತಾರೆ
 

ಮಂತ್ರ ಹೀಗಿದೆ: 

ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್ | ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ |
ಕಾರ್ತವೀರ್ಯಃ ಖಲದ್ವೇಷೀ ಕೃತವೀರ್ಯಸುತೋ ಬಲೀ |ಸಹಸ್ರಬಾಹುಃ ಶತ್ರುಘ್ನೋ ರಕ್ತವಾಸಾ ಧನುರ್ಧರಃ
ರಕ್ತಗಂಧೋ ರಕ್ತಮಾಲ್ಯೋ ರಾಜಾ ಸ್ಮರ್ತುರಭೀಷ್ಟದಃ | ದ್ವಾದಶೈತಾನಿ ನಾಮಾನಿ ಕಾರ್ತವೀರ್ಯಸ್ಯ ಯಃ ಪಠೇತ್
ಸಂಪದಸ್ತತ್ರ ಜಾಯಂತೇ ಜನಸ್ತತ್ರ ವಶಂ ಗತಃ | ಆನಯತ್ಯಾಶು ದೂರಸ್ಥಂ ಕ್ಷೇಮಲಾಭಯುತಂ ಪ್ರಿಯಮ್ || 
ಸಹಸ್ರಬಾಹುಂ ಮಹಿತಂ ಸಶರಂ ಸಚಾಪಂ ರಕ್ತಾಂಬರಂ ವಿವಿಧ ರಕ್ತಕಿರೀಟಭೂಷಮ್ | 
ಚೋರಾದಿದುಷ್ಟಭಯನಾಶನಮಿಷ್ಟದಂ ತಂ ಧ್ಯಾಯೇನ್ಮಹಾಬಲವಿಜೃಂಭಿತಕಾರ್ತವೀರ್ಯಮ್ || 
ಯಸ್ಯ ಸ್ಮರಣಮಾತ್ರೇಣ ಸರ್ವದುಃಖಕ್ಷಯೋ ಭವೇತ್ | ಯನ್ನಾಮಾನಿ ಮಹಾವೀರ್ಯಶ್ಚಾರ್ಜುನಃ ಕೃತವೀರ್ಯವಾನ್ || 
ಹೈಹಯಾಧಿಪತೇಃ ಸ್ತೋತ್ರಂ ಸಹಸ್ರಾವೃತ್ತಿಕಾರಿತಮ್ | ವಾಂಚಿತಾರ್ಥಪ್ರದಂ ನೄಣಾಂ ಸ್ವರಾಜ್ಯಂ ಸುಕೃತಂ ಯದಿ || 
ಇತಿ ಕಾರ್ತವೀರ್ಯಾರ್ಜುನ ದ್ವಾದಶನಾಮ ಸ್ತೋತ್ರಮ್ |

Chanakya Niti: ಇಂಥ ಸಮಯದಲ್ಲಿ ಹೆಂಡತಿ ಗಂಡನಿಗೆ ʼನೋʼ ಅನ್ನಬೇಕು! ಚಾಣಕ್ಯರ ಕಿವಿಮಾತು ಕೇಳಿ
 

click me!