Weekend Curfew: ಜೀವವೂ ಮುಖ್ಯ, ಜೀವನವೂ ಮುಖ್ಯ: ತೊಂದರೆಯಾಗದಂತೆ ನಿರ್ಧಾರ: ಡಾ. ಸುಧಾಕರ್

Jan 19, 2022, 1:44 PM IST

ಬೆಂಗಳೂರು (ಜ. 19): ವಿಕೆಂಡ್ ಕರ್ಫ್ಯೂ (Weekend Curfew) ಮುಂದುವರೆಸಬೇಕಾ.? ತೆರವುಗೊಳಿಸಬೇಕಾ ಎಂಬ ಯೋಚನೆಯಲ್ಲಿದೆ ಸರ್ಕಾರ. ಶುಕ್ರವಾರ ಜ. 21 ರಂದು ಸಿಎಂ (CM Bommai) ಮಹತ್ವದ ಸಭೆ ನಡೆಸಲಿದ್ದಾರೆ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ನಿರ್ಧಾರವಾಗಲಿದೆ. ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರು ಪರಾಮರ್ಶೆ ಮಾಡುತ್ತಿದ್ದಾರೆ. ಶುಕ್ರವಾರದ ಸಭೆಯಲ್ಲಿ ನಿರ್ಧಾರವಾಗಲಿದೆ. ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ. ಜನರಿಗೂ ತೊಂದರೆಯಾಗದಂತೆ, ಸೋಂಕು ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

Weekend Curfew:ತಜ್ಞರ ಕೈಯಲ್ಲಿ 'ಲಾಕ್‌'ಕೀ, ಸರ್ಕಾರದ ಮುಂದಿರುವ ಆಯ್ಕೆಗಳೇನು.?

'ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ. ಇನ್ನೂ ಎರಡ್ಮೂರು ದಿನಗಳ ಪಾಸಿಟಿವಿಟಿ ರೇಟ್ (Positivity Rate) ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜನ ಜೀವನ ಅಸ್ತವ್ಯಸ್ತವಾಗದಂತೆ, ನಷ್ಟವಾಗದಂತೆ ಆದ್ಯತೆ ವಹಿಸುತ್ತೇವೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Dr Sudhakar) ಹೇಳಿದ್ದಾರೆ.