ಏರ್ ಇಂಡಿಯಾ ಕೈಗೆಟುಕವ ದರದ ಟಿಕೆಟ್ ಸೇವೆಯಲ್ಲಿ ಒಂದು ಉಚಿತ ಸೌಲಭ್ಯಕ್ಕೆ ಮಿತಿ!

By Suvarna NewsFirst Published May 5, 2024, 5:44 PM IST
Highlights

ಏರ್ ಇಂಡಿಯಾ ವಿಮಾನ ಸೇವೆ ಇದೀಗ ಮಹತ್ವದ ಘೋಷಣೆ ಮಾಡಿದೆ. ಕೈಗೆಟುಕುವ ದರದ ಟಿಕೆಟ್ ಸೇವೆಯಲ್ಲಿ ಒಂದು ಉಚಿತ ಸೇವೆಗೆ ಮಿತಿಯನ್ನು ಮತ್ತಷ್ಟು ಕಡಿತಗೊಳಿಸಿದೆ.

ನವದೆಹಲಿ(ಮೇ.05) ಟಾಟಾ ಮಾಲೀಕತ್ವದ ಏರ್ ಇಂಡಿಯಾ ಇದೀಗ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದೆ. ಪ್ರಮುಖವಾಗಿ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ನೀಡುತ್ತಿರುವ ಟಿಕೆಟ್ ಸೇವೆಯಲ್ಲಿ ಕೆಲ ಮಿತಿಗಳನ್ನು ಹೇರಿದೆ. ಅಗ್ಗದ ದರದ ಡೊಮೆಸ್ಟಿಕ್ ಟೆಕೆಟ್ ಸೇವೆಯಲ್ಲಿ ಇದೀಗ ಬ್ಯಾಗೇಜ್ ಮಿತಿಯನ್ನು ಮತ್ತಷ್ಟು ಕಡಿತಗೊಲಿಸಿದೆ. 25 ಕೆಜಿ ಉಚಿತ ಬ್ಯಾಗೇಜ್ ಮಿತಿಯನ್ನು ಇದೀಗ 15 ಕೆಜಿಗೆ ಇಳಿಸಲಾಗಿದೆ. ಮೇ ತಿಂಗಳಿನಿಂದ ನೂತನ ನಿಯಮ ಜಾರಿಯಾಗಿದ್ದು, ಪ್ರಯಾಣಿಕರಿಗೆ ಕ್ಯಾಬಿನ್ ಬ್ಯಾಗೇಜ್ ಮಿತಿ ಸಂಕಷ್ಟ ಹೆಚ್ಚಿಸಿದೆ.

ಏರ್ ಇಂಡಿಯಾದ ಫೇರ್ ಫ್ಯಾಮಿಲಿ ಟಿಕೆಟ್ ವಿಭಾಗದಲ್ಲಿ ಕಂಫರ್ಟ್, ಕಂಫರ್ಟ್ ಪ್ಲಸ್ ಹಾಗೂ ಫ್ಲೆಕ್ಸ್ ಅನ್ನೋ ಮೂರು ವಿಧದ ಟಿಕೆಟ್‌ಗಳಿವೆ. ಈ ಪೈಕಿ ಕಂಪರ್ಟ್ ಹಾಗೂ ಕಂಫರ್ಟ್ ಪ್ಲಸ್ ಟಿಕೆಟ್ ಖರೀದಿಸುವ ಪ್ರಯಾಣಿಕರಿಗಿದ್ದ 20 ಹಾಗೂ 25 ಕೆಜಿ ಉಚಿತ ಬ್ಯಾಗೇಜ್ ಮಿತಿಯನ್ನು ಇದೀಗ 15 ಕೆಜಿಗೆ ಇಳಿಸಲಾಗಿದೆ. ಇದಕ್ಕಿಂತ ಹೆಚ್ಚಿನ ತೂಕದ ಕ್ಯಾಬಿನ್ ಬ್ಯಾಗೇಜ್ ಇದ್ದಲ್ಲಿ ಹೆಚ್ಚುವರಿ ಪಾವತಿ ಮಾಡಬೇಕಾಗಿದೆ.

ಪ್ರಯಾಣಿಕರ ಲಗೇಜ್ ಬೇಕಾಬಿಟ್ಟಿ ಹ್ಯಾಂಡಲ್ ಮಾಡಿದ ಏರ್ ಇಂಡಿಯಾ ವೀಡಿಯೋ ವೈರಲ್, ನೆಟ್ಟಿಗರ ಆಕ್ರೋಶ

 ಇದೀಗ ಫ್ಲೆಕ್ಸ್ ಟಿಕೆಟ್ ಖರೀದಿಸಿದ ಪ್ರಯಾಣಿಕರಿಗೆ ಮಾತ್ರ 25 ಕೆಜಿ ಕ್ಯಾಬಿನ್ ಬ್ಯಾಗೇಜ್ ಉಚಿತ ನೀಡಲಾಗಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 25 ಕೆಜಿ ಬ್ಯಾಗೇಜ್ ಒಯ್ಯಲು ಅವಕಾಶವಿದೆ. ಇದರ ಜೊತೆಗೆ ಕ್ಯಾಬಿನ್ ಬ್ಯಾಗೇಜ್ ಗರಿಷ್ಠ 15 ಕೆಜಿಗೆ ಅವಕಾಶವಿದೆ. ಕೇವಲ ಕಡಿಮೆ ದರದ ಟಿಕೆಟ್ ಪ್ರಯಾಣಕ್ಕೆ ಬ್ಯಾಗೇಜ್ ಮಿತಿ ಹೇರಲಾಗಿದೆ. ಏರ್ ಇಂಡಿಯಾ ಈ ನಿರ್ಧಾರ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ನೀಡಿದೆ.

ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ನಾಗರೀಕರ ವಿಮಾನಯಾನ ಸಚಿವಾಲಯ ನಿಯಮ ಉಲ್ಲಂಘನೆ ದಂಡ ವಿಧಿಸಿತ್ತು. ವಿಮಾನದ ಸಿಬ್ಬಂದಿಗಳಿಗೆ ಸರಿಯಾಗ ವಿರಾಮ ಅವಧಿಯನ್ನು ನೀಡದ ಕಾರಣ 80 ಲಕ್ಷ ರೂಪಾಯಿ ಫೈನ್ ವಿಧಿಸಲಾಗಿತ್ತು. ಏರ್‌ ಇಂಡಿಯಾ ಸಂಸ್ಥೆ ತನ್ನ ಪೈಲಟ್‌ ಸೇರಿದಂತೆ ಕ್ಯಾಬಿನ್‌ ಸಿಬ್ಬಂದಿಗಳಿಗೆ ಒಂದು ಪ್ರಯಾಣದ ಬಳಿಕ ಮತ್ತೊಂದು ಪ್ರಯಾಣದ ನಡುವೆ ಸರಿಯಾದ ವಿರಾಮವನ್ನು ನೀಡುತ್ತಿಲ್ಲ ಅನ್ನೋ ಆರೋಪ ಎದುರಾಗಿತ್ತು. ಈ ಕುರಿತು ನಾಗರೀಕ ವಿಮಾನಯಾನ ಸಚಿವಾಲಯ ನೋಟಿಸ್ ನೀಡಿತ್ತು. ಆದರೆ ನೋಟಿಸ್‌ಗೆ ಉತ್ತರಿಸ ಏರ್ ಇಂಡಿಯಾ ಸಂಸ್ಥೆ ಮೇಲೆ 80ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.  

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರು: ಏರ್ ಇಂಡಿಯಾದೊಂದಿಗೆ BIAL ಒಪ್ಪಂದ
 

click me!