ಕಾಂಗ್ರೆಸ್ ಓಟು ಹಾಕುವಂತೆ ಬಿಜೆಪಿ ಮುಖಂಡ ದ್ಯಾಮಣ್ಣ ಬಾಲನಗೌಡರ್ ಮೇಲೆ ಹಲ್ಲೆ ನಡೆಸಿದ್ದ ರಾಘವೇಂದ್ರ ಮತ್ತು ರಾಜಶೇಖರ ಹಿಟ್ನಾಳ ಬೆಂಬಲಿಗರು. ಇಂದು ಜಿಲ್ಲಾಸ್ಪತ್ರೆಗೆ ತೆರಳಿ ಬಿಜೆಪಿ ಮುಖಂಡರ ಆರೋಗ್ಯ ವಿಚಾರಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಹಿಟ್ನಾಳ್ ಬೆಂಬಲಿಗರ ರೌಡಿಸಂ ವಿರುದ್ಧ ಕಿಡಿಕಾರಿದರು.
ಕೊಪ್ಪಳ (ಮೇ.5): ಕಾಂಗ್ರೆಸ್ ಬೆಂಬಲಿಗರಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಇಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಜಿಲ್ಲಾಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಮುಖಂಡನ ಆರೋಗ್ಯ ವಿಚಾರಿಸಿದರು.
ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನಸಭಾ ಕ್ಷೇತ್ರದ ಯಲಮಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದ ಘಟನೆ. ಕಾಂಗ್ರೆಸ್ ಓಟು ಹಾಕುವಂತೆ ಬಿಜೆಪಿ ಮುಖಂಡ ದ್ಯಾಮಣ್ಣ ಬಾಲನಗೌಡರ್ ಮೇಲೆ ಹಲ್ಲೆ ನಡೆಸಿದ್ದ ರಾಘವೇಂದ್ರ ಮತ್ತು ರಾಜಶೇಖರ ಹಿಟ್ನಾಳ ಬೆಂಬಲಿಗರು.
undefined
ಇಂದು ಜಿಲ್ಲಾಸ್ಪತ್ರೆಗೆ ತೆರಳಿ ಬಿಜೆಪಿ ಮುಖಂಡರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಹಯಲಮಗೇರಿ ಗ್ರಾಮದಲ್ಲಿ ನನ್ನ ಕಾರ್ಯಕರ್ತರ ಮೇಲೆ ರಾಘವೇಂದ್ರ ಮತ್ತು ರಾಜಶೇಖರ ಹಿಟ್ನಾಳ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಈ ಬಾರಿ ಹಿಟ್ನಾಳ್ ಕುಟುಂಬಕ್ಕೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಈ ರೀತಿ ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿಸಂ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಾಸಕನಾಗಲು ಸಿಎಂ ಸಿದ್ದರಾಮಯ್ಯ ಕಾರಣ: ಜನಾರ್ದನ ರೆಡ್ಡಿ
ಹಿಟ್ನಾಳ ಬ್ರದರ್ಸ್ ಕ್ಷೇತ್ರದಲ್ಲಿ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಹೊಡಿ ಬಡಿ ಮೂಲಕ ಜನರನ್ನ ಹೆದರಿಸುವ ಕೆಲಸ ಮಾಡ್ತಿದ್ದಾರೆ ಕಾಂಗ್ರೆಸ್ ನವರಿಗೆ ವಿನಾಶಕಾಲ ವಿಪರೀತ ಬುದ್ದಿ ಬಂದಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಈ ರೀತಿ ಹೆದರಿಸುವ ವಾತಾವರಣ ಇರಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಇಂತಹ ಎರಡು ಮೂರು ಘಟನೆಗಳು ನಡೆದಿವೆ. ಗಂಗಾವತಿಯಲ್ಲಿ ಜೈ ಶ್ರೀರಾಮ್ ಎಂದ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಗೆ ಮತ ಹಾಕುವಂತೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ನಿಜಕ್ಕೂ ಕೊಪ್ಪಳ ಎಸ್ಪಿ ಪ್ರಾಮಾಣಿಕರು ಎನಿಸಿಕೊಂಡಿದ್ದಾರೆ. ಆದರೆ ನಿನ್ನೆ ರಾತ್ರಿ ಆದ ಘಟನೆಗೆ ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಹಲ್ಲೆ ಆದವರ ಮೇಲೆ ಗಮನ ಕೊಡ್ತಿಲ್ಲ. ಕೊಪ್ಪಳದಲ್ಲಿ ಹಿಟ್ನಾಳ್ ಬ್ರದರ್ಸ್ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
Loksabha election 2024: ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದ ಶಾಸಕ ಜನಾರ್ದನ ರೆಡ್ಡಿ!
ಅಂತಹ ಬಳ್ಳಾರಿಯಲ್ಲೇ ನಾವು ಡೌಡಿಸಂ ಮಟ್ಟಹಾಕಿದವರು. ಪೊಲೀಸ್ ಇಲಾಖೆ ಮಧ್ಯೆ ಪ್ರವೇಶಿಸಿ ಈ ಕ್ರಿಮಿನಲ್‌ಗಳನ್ನ ಹದ್ದುಬಸ್ತಿನಲ್ಲಿಡಬೇಕು. ಈ ರೀತಿ ಕ್ಷೇತ್ರಾದ್ಯಂತ ರೌಡಿಸಂ ಮಾಡಲು ಕಾಂಗ್ರೆಸ್ ತಯಾರಿ ಮಾಡಿಕೊಂಡಂತಿದೆ. ಇದನ್ನ ಕೂಡಲೇ ಮಟ್ಟ ಹಾಕದಿದ್ರೆ ಮುಂದೆ ಆಗೊ ಅನಾಹುತಕ್ಕೆ ಜಿಲ್ಲಾಡಳಿತದ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಚ್ಚರಿಸಿದರು ಮುಂದುವರಿದು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಸಿಪಿಐ ಕೂಡಲೇ ಸಸ್ಪೆಂಡ್ ಮಾಡಬೇಕು. ಚುನಾವಣೆ ಎರಡು ದಿನ ಇರೋವಾಗ ಈ ರೀತಿ ಗಲಾಟೆಗಳನ್ನ ಎಬ್ಬಿಸಿ ಮತದಾನಕ್ಕೆ ಅಡ್ಡಿ ಮಾಡುವ ಕೆಲಸ ನಡೆಯುತ್ತಿದೆ. ಈ ರೀತಿ ನಡೆಯದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.