ಆನ್‌ಲೈನ್‌ ಶಿಕ್ಷಣ ಬೇಡ: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

Jul 10, 2020, 4:37 PM IST

ಬೆಂಗಳೂರು(ಜು.10): ವಿನೂತನ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಆನ್‌ಲೈನ್ ಶಿಕ್ಷಣ ಬೇಡವೇ ಬೇಡ ಎಂದು ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ರಾಜ್ಯ ಸರಕಾರ ಆನ್ ಲೈನ್ ಕ್ಲಾಸ್ ಕೈ ಬಿಡಬೇಕು ಎಂದು ವಾಟಾಳ್ ಆಗ್ರಹ ಪಡಿಸಿದ್ದಾರೆ. ಇದೇ ವೇಳೆ ಪ್ರತಿಕೃತಿಗೆ ಲ್ಯಾಪ್‌ ಟಾಪ್ ನೇತು ಹಾಕಿ, ಬೆಂಕಿ ಹಚ್ಚಿ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧುಸ್ವಾಮಿಯವರೇ, ಊಟ ಕೇಳೋದು ಅಪರಾಧವೇ..?

ಒಂದು ವೇಳೆ ರಾಜ್ಯ ಸರ್ಕಾರ ಆನ್‌ ಲೈನ್ ತರಗತಿಗಳನ್ನು ಮುಂದುವರೆಸಲು ನಿರ್ಧರಿಸಿದರೆ ನಾಳೆ(ಜು.11)ಯಿಂದ ರಾಜ್ಯಾದ್ಯಂತ ವಾಟಾಳ್ ಪಕ್ಷದಿಂದ ಪ್ರತಿಭಟನೆ ನಡೆಸುವುದಾಗಿಯೂ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.