ಕರ್ಫ್ಯೂ ರೂಲ್ಸ್ ಪಾಲನೆಯಾಗ್ತಿಲ್ಲ, 2 ವಾರ ಲಾಕ್‌ಡೌನ್ ಮಾಡಿ: ತಜ್ಞರ ಸಲಹೆ

May 4, 2021, 11:05 AM IST

ಬೆಂಗಳೂರು (ಮೇ. 04): ರಾಜ್ಯದಲ್ಲಿ ಈಗ ಜಾರಿಗೆ ತಂದಿರುವ ಜನತಾ ಕರ್ಫೂ ನಿಯಮಗಳ ಪಾಲನೆ ಸಮರ್ಪಕವಾಗಿ ಆಗದೇ ಇರುವುದರಿಂದ ಎರಡು ವಾರಗಳ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು. ಇಲ್ಲದಿದ್ದರೆ ಸೋಂಕಿನ ತೀವ್ರತೆಗೆ ಇಡೀ ಆರೋಗ್ಯ ವ್ಯವಸ್ಥೆ ಕುಸಿದು ಹೋಗಲಿದೆ ಎಂದು ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ರೂಪದ ಸಲಹೆ ನೀಡಿದ್ದಾರೆ.

ಚಾಮರಾಜನಗರ : ನಾಪತ್ತೆಯಾಗಿದ್ದ ಸೋಂಕಿತ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಲ್ಲಿ ಶವವಾಗಿ ಪತ್ತೆ

ಜನತಾ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದರೆ ಸಮಸ್ಯೆ ಕಡಿಮೆಯಾಗುತ್ತಿತ್ತು. ಆದರೆ, ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲೂ ನಿಯಮಪಾಲನೆ ಆಗುತ್ತಿಲ್ಲ. ಹೀಗಾಗಿ, ಸಂಪೂರ್ಣ ಲಾಕ್‌ಡೌನ್‌ ಒಂದೇ ಈಗಿರುವ ಪರಿಹಾರ ಎಂದು ತಜ್ಞರು ಹೇಳಿದ್ದಾರೆ.