3 ನೇ ಅಲೆ ಮಕ್ಕಳಿಗೆ ಅಪಾಯ, ಐಸಿಯು, ವೆಂಟಿಲೇಟರ್, ಬೆಡ್ ವ್ಯವಸ್ಥೆಗೆ ತಜ್ಞರ ಸಲಹೆ

Jun 20, 2021, 10:11 AM IST

ಬೆಂಗಳೂರು (ಜೂ. 20): ಮುಂದಿನ 6-8 ವಾರಗಳಲ್ಲಿ 3 ನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ. ರಾಜ್ಯದಲ್ಲಿ 3 ನೇ ಅಲೆ ಎದುರಿಸಲು ಸಜ್ಜಾಗುವಂತೆ ತಜ್ಞರು ಸಲಹೆ ನೀಡಿದ್ದಾರೆ. 3 ನೇ ಅಲೆಯಲ್ಲಿ ಒಂದೂವರೆ ಲಕ್ಷ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಇದೆ. 5 ಸಾವಿರ ಮಕ್ಕಳಿಗೆ ಐಸಿಯು ಬೇಕಾಗಬಹುದು, ನಿತ್ಯ 500 ಮಕ್ಕಳು ಐಸಿಯುಗೆ ದಾಖಲಾಗುವ ಸಾಧ್ಯತೆ ಇದೆ. ಐಸಿಯು, ವೆಂಟಿಲೇಟರ್, ಬೆಡ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಸೂಚನೆ ನೀಡಿದೆ. 

ಫುಡ್ ಕಿಟ್, ಆಕ್ಸಿಜನ್, ಬೆಡ್, ಔಷಧಿ ಕೊಡಿಸಿ ಜೀವ ಉಳಿಸಿದ ರಕ್ಷಕ: ಸಖತ್ ಸಿದ್ದು