ಕೋವಿಡ್ 19: ಮುಂದಿನ ಎರಡು ತಿಂಗಳು ಕರ್ನಾಟಕದ ಪಾಲಿಗೆ ನಿರ್ಣಾಯಕ

Jul 29, 2020, 12:49 PM IST

ಬೆಂಗಳೂರು (ಜು. 29): ಮುಂದಿನ 60 ದಿನಗಳಲ್ಲಿ ಕೊರೊನಾ ಮಹಾಸ್ಫೋಟವಾಗಲಿದೆ. ಮುಂದಿನ ಎರಡು ತಿಂಗಳು ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಲಿದೆ. ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಕೊರೊನಾ ತಾರಕಕ್ಕೇರಲಿದೆ. ಸೆಪ್ಟೆಂಬರ್ ನಂತರ ಇಳಿಮುಖವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೋವಿಡ್‌ಗೆ ಭಯಪಡುವ ಅವಶ್ಯಕತೆಯಿಲ್ಲ, ಧೈರ್ಯವಾಗಿರಿ: ಕೊರೊನಾ ಗೆದ್ದ ಶಾಸಕ

ಒಂದು ಬಾರಿ ತನ್ನ ಗರಿಷ್ಠ ಹಂತ ಮುಟ್ಟಿದ ನಂತರ ಅಂದರೆ ಅಕ್ಟೋಬರ್ ಮಾಸಾಂತ್ಯದ ವೇಳೆಗೆ ಕೊರೊನಾ ಸೋಂಕು ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!