Happy Birthday Baby… ಪತಿ ರಣಬೀರ್ ಬರ್ತ್ ಡೇಗೆ ಮುದ್ದಾದ ಫೋಟೋಗಳೊಂದಿಗೆ ವಿಶ್ ಮಾಡಿದ್ರು ಆಲಿಯಾ ಭಟ್

Published : Sep 28, 2024, 04:36 PM ISTUpdated : Sep 28, 2024, 05:08 PM IST

ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಆಲಿಯಾ ಭಟ್ ಮಗಳ ಜೊತೆಗಿನ ಫೋಟೊ ಶೇರ್ ಮಾಡಿ ಮುದ್ದಾಗಿ ವಿಶ್ ಮಾಡಿದ್ದಾರೆ.   

PREV
17
Happy Birthday Baby… ಪತಿ ರಣಬೀರ್ ಬರ್ತ್ ಡೇಗೆ ಮುದ್ದಾದ ಫೋಟೋಗಳೊಂದಿಗೆ ವಿಶ್ ಮಾಡಿದ್ರು ಆಲಿಯಾ ಭಟ್

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಇಂದು ಅಂದರೆ ಸೆಪ್ಟೆಂಬರ್ 28 ರಂದು ತಮ್ಮ 42ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಪತ್ನಿ ಆಲಿಯಾ ಭಟ್ ಅವರಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 
 

27

ಸೋಷಿಯಲ್ ಮೀಡಿಯಾದಲ್ಲಿ ಇಲ್ಲಿವರೆಗೂ ಹಂಚಿಕೊಂಡಿರದ ಮುದ್ದಾದ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಆಲಿಯಾ ಭಟ್ (Alia Bhatt) ಪತಿ ರಣಬೀರ್ ಕಪೂರ್ ಮೇಲೆ ಪ್ರೀತಿಯನ್ನು ಸುರಿಸಿದ್ದಾರೆ. ಇದರೊಂದಿಗೆ, ಹ್ಯಾಪಿ ಬರ್ತ್ ಡೇ ಬೇಬಿ ಎನ್ನುತ್ತಾ ಪತಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. 
 

37

ಆಲಿಯಾ ಭಟ್ ತಮ್ಮ ಇನ್ಸ್ಟಾ ಹ್ಯಾಂಡಲ್ನಲ್ಲಿ ಕೆಲವು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರ ಪತಿ ರಣಬೀರ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ, ಈ ಫೋಟೋಗಳಲ್ಲಿ, ಈ ಸ್ಟಾರ್ ಜೋಡಿಗಳ ಲಿಟಲ್ ಏಂಜಲ್ ರಾಹಾ (Raha) ಕೂಡ ಕಾಣಿಸಿಕೊಂಡಿದ್ದು, ತಮ್ಮ ಕ್ಯೂಟ್ ನೆಸ್ ಮೂಲಕ ರಾಹಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 
 

47

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೊದಲ ಚಿತ್ರದಲ್ಲಿ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮರವನ್ನು ತಬ್ಬಿಕೊಳ್ಳುವುದನ್ನು ಕಾಣಬಹುದು. ಇವರಿಬ್ಬರ ಜೊತೆಗೆ ರಾಹಾ ಕೂಡ ತುಂಬಾನೆ ಮುದ್ದಾಗಿ ಮರವನ್ನು ತಬ್ಬಿಕೊಂಡು ಹಿಂದೆ ತಿರುಗಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.  ಎರಡನೇ ಚಿತ್ರದಲ್ಲಿ, ರಣಬೀರ್ ಮಗಳು ರಾಹಾಳನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. 
 

57

ಮೂರನೇ ಚಿತ್ರದಲ್ಲಿ, ಆಲಿಯಾ ಪತಿ ರಣಬೀರ್ ಅವರ ತೊಡೆಯ ಮೇಲೆ ಕುಳಿತು ಸುಂದರವಾಗಿ ನಗುತ್ತಿರೋದನ್ನ ಕಾಣಬಹುದು. ಇದಲ್ಲದೆ, ರಣಬೀರ್ ಅವರ ಹುಟ್ಟುಹಬ್ಬದ ಪಾರ್ಟಿಯ ಒಂದು ಸಣ್ಣ ಜಲಕ್ ನ್ನು ಸಹ ಆಲಿಯಾ ತೋರಿಸಿದ್ದಾರೆ. ಬಲೂನ್ ಮೇಲೇ ಹ್ಯಾಪಿ ಬರ್ತ್ ಡೇ ರಣಬೀರ್ (Happy birthday Ranbir) ಎಂದು ಬರೆದಿರುವ ಒಂದು ಫೋಟೊವನ್ನು ನಟಿ ಹಂಚಿಕೊಂಡಿದ್ದಾರೆ. 
 

67

ಇದರ ಜೊತೆಗೆ ಆಲಿಯಾ ಭಟ್ ಕೆಲವೊಮ್ಮೆ ನಮಗೆ ಬೇಕಾಗಿರೋ ಒಂದು ದೊಡ್ಡದಾದ ಹಗ್ ಮತ್ತು ಜೀವನವನ್ನು ಅನುಭವಿಸುವಂತೆ ಮಾಡುವ ನೀನು ಎಂದು ಬರೆದುಕೊಂಡು ಹ್ಯಾಪಿ ಬರ್ತ್ ಡೇ ಬೇಬಿ ಎಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ. ಈ ಮುದ್ದಾದ ಫೋಟೊಗಳಿಗೆ ಅಭಿಮಾನಿಗಳು ಸಾಕಷ್ಟು ಪ್ರೀತಿಯನ್ನು ಸುರಿಸಿದ್ದು, ನಟನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. 
 

77

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಏಪ್ರಿಲ್ 2022 ರಲ್ಲಿ ವಿವಾಹವಾದರು. ನಂತರ, ಮಗಳು ರಾಹಾ ನವೆಂಬರ್ 6 ರಂದು ಜನಿಸಿದಳು. ಸದ್ಯ ಈ ಸ್ಟಾರ್ ಕಪಲ್ಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್ ಜಿಗ್ರಾ ಮತ್ತು ಆಲ್ಫಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ರಣಬೀರ್ ಕಪೂರ್ ರಾಮಾಯಣದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

Read more Photos on
click me!

Recommended Stories