ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿ ಟೆನ್ಷನ್‌ನಲ್ಲಿರುವ ವೇಳೆಯೇ ಇತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಕನಕಪುರ (ಸೆ.28): ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟೆನ್ಷನ್ ಶುರುವಾಗಿದೆ. ಸಿಎಂ ರಾಜೀನಾಮೆ ಕೊಡಲೇಬೇಕು ಅಂತಾ ಅತ್ತ ಪ್ರತಿಪಕ್ಷಗಳು ಬೀದಿಗಿಳಿದು ಹೋರಾಟ ನಡೆಸುತ್ತಿರುವ ಹೊತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ ಪರೋಕ್ಷವಾಗಿ ಸಿಎಂ ಆಗುವ ಆಸೆ ಬಿಚ್ಚಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಇಂದು ಕನಕಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಬಳಿಕ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಕನಕಪುರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ಆಗ್ತಿದೆ. ಈಗ ಮಾತಾಡಿದ್ರೆ ಮಾಧ್ಯಮಗಳು ವಿವಿಧ ರೀತಿಯಲ್ಲಿ ಬಿಂಬಿಸುತ್ತವೆ. ಆದರೆ ಸದ್ಯ ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ. ಇಲ್ಲಿ ನಾವೆಲ್ಲ ನಮ್ಮ ಮನೆ ಮಕ್ಕಳು ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ. ಸಿಎಂ ಮೇಲೆ ಎಫ್ಐಆರ್ ಆಗಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಕೆ ಶಿವಕುಮಾರ ಹೇಳಿಕೆ ಕುತೂಹಲ ಮೂಡಿಸಿದೆ.
undefined
ಸಿದ್ದರಾಮಯ್ಯ ಅಪ್ಪಟ ಚಿನ್ನ, ಪ್ರಾಮಾಣಿಕ ವ್ಯಕ್ತಿ: ಸಚಿವ ಹೆಚ್‌ಸಿ ಮಹದೇವಪ್ಪ
ತಿಂಗಳ ಕೊನೆಯ ಶನಿವಾರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಇಂದು ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮಾಡಿದ್ದೇನೆ. ಈ ಕಾಲೇಜು ಹಿಂದೆ ಮುನ್ಸಿಪಾಲ್ ಗ್ರೌಂಡ್ ಹತ್ರ ಇತ್ತು. ಅಲ್ಲಿ ಜಾಗದ ಸಮಸ್ಯೆ ಇದ್ದಿದ್ದರಿಂದ ಇಲ್ಲಿ ಒಳ್ಳೆಯ ವಾತಾವರಣದಲ್ಲಿ ಕಾಲೇಜು ನಿರ್ಮಾಣ ಆಗಿದೆ. ನಾನು ಒಂದು ಚಿತ್ರಗಳನ್ನ ತಯಾರಿಸಲು ಹೇಳಿದ್ದೇನೆ. ಈ ಹಿಂದೆ ಕನಕಪುರ ಹೇಗಿತ್ತು, ಈಗ ಕನಕಪುರ ಹೇಗಿದೆ. ನಾನು ಶಾಸಕನಾದ ಬಳಿಕ ಎಷ್ಟೆಲ್ಲಾ ಅಭಿವೃದ್ಧಿ ಆಗಿದೆ ಎಂಬುದನ್ನ ತಿಳಿಸಬೇಕು. ಕನಕಪುರ ಒಂದು ರೀತಿಯ ಎಜುಕೇಶನ್ ಕಾರಿಡಾರ್ ಆಗಬೇಕು. ಈಗಾಗಲೇ ಉತ್ತಮ ರಸ್ತೆಗಳು ನಗರಕ್ಕೆ ಇದೆ. ನಾನು ಡಿಸಿಎಂ ಆಗಿ ಇಲ್ಲಿ ಬಂದಿಲ್ಲ, ನಿಮ್ಮ ಶಾಸಕನಾಗಿ ಕೆಲಸ ಮಾಡ್ತಿದ್ದೆನೆ ಎಂದರು.
ನೀವು ಕನಕಪುರದ ವಿದ್ಯಾರ್ಥಿಗಳಲ್ಲ. ನೀವು ಬೆಂಗಳೂರು ಜಿಲ್ಲೆಯ ಮಕ್ಕಳು. ನಿಮ್ಮ ಇತಿಹಾಸ ತೆಗೆದು ನೋಡಿ, ಸಂಗಮ, ಮೇಕೆದಾಟು ವರೆಗೂ ಬೆಂಗಳೂರು ಜಿಲ್ಲೆ. ಚನ್ನಪಟ್ಟಣ, ಮಾಗಡಿ ಎಲ್ಲವೂ ಬೆಂಗಳೂರಿಗೆ ಸೇರುತ್ತೆ. ಯಾವುದೊ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಆಗಿತ್ತು ಆಷ್ಟೇ. ನಿಮ್ಮ ಕಾಂಪಿಟೇಷನ್ ಗ್ಲೋಬಲ್ ಮಟ್ಟದಲ್ಲಿ ಇರಬೇಕು. ಕನಕಪುರವನ್ನ ಏನು ಮಾಡಬೇಕು ಎಂಬುದನ್ನು ನಾನು ಬಾಯಿಬಿಟ್ಟು ಹೇಳಲ್ಲ. ಅದನ್ನ ಮಾಡಿ ತೋರಿಸುವ ಕೆಲಸ ಮಾಡ್ತೇನೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಗುತ್ತಾ?
ನನಗೆ ಈಗಲೂ ಕಂಪ್ಯೂಟರ್ ಆಪರೇಟ್ ಮಾಡಲು ಬರಲ್ಲ. ನನಗೆ ಮೊಬೈಲ್ ನಲ್ಲಿ ಮೆಸೇಜ್ ಮಾಡಲು ಅಷ್ಟೇ ಬರುತ್ತೆ. ಆದ್ರೆ ನೀವು ಎಲ್ಲವನ್ನೂ ತಿಳಿದಿರುವ ಜನರೇಷನ್. ಎಲ್ಲರೂ ಮೊಬೈಲ್, ಕಂಪ್ಯೂಟರ್ ಬಳಸುವ ಬುದ್ದಿ ಇದೆ. ದೇಶದಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯೋದು ನಾವೇ. ಕನಕಪುರದಲ್ಲಿ ಇರುವ ಡೇರಿ ಇಡೀ ದೇಶದಲ್ಲೇ ಇಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಓದಬೇಕು. ನೀವು ಕೇವಲ ನೌಕರರಾಗಬಾರದು, ನಾಲ್ಕು ಜನಕ್ಕೆ ನೌಕರಿ ಕೊಡುವವರಾಗಬೇಕು. ಸಮಾಜದಲ್ಲಿ ಯಾರು ಬೇಕಾದರೂ ಡಿ.ಕೆ.ಶಿವಕುಮಾರ್ ಆಗಬಹುದು. ಅದಕ್ಕೆ ನಿಮ್ಮ ತಳಹದಿ ಗಟ್ಟಿಯಾಗಿರಬೇಕು. ನೀವೇ ನಮ್ಮ ಆಸ್ತಿ ನಿಮ್ಮ ಬದುಕಿಗೆ ಒಳ್ಳೆಯದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.