ಮಾಸ್ಕ್ ಇಲ್ಲ, ಅಂತರವಿಲ್ಲ, ಜನರ ನಿರ್ಲಕ್ಷ್ಯವೇ ಕೊರೊನಾ ಹೆಚ್ಚಳಕ್ಕೆ ಕಾರಣ: ಸುಧಾಕರ್

Apr 20, 2021, 11:56 AM IST

ಬೆಂಗಳೂರು (ಏ. 20): ಕೊರೊನಾ ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ. ಜನರು ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಹಾಗಾಗಿಯೇ ಇಂತಹ ಸ್ಥಿತಿ ಬಂದಿದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಗರಂ ಆಗಿದ್ದಾರೆ. 

ಬದುಕಿದ್ದಾಗ ಆಸ್ಪತ್ರೆಗೆ ದುಡ್ಡು, ಮೃತಪಟ್ಟರೆ ಚಟ್ಟಕ್ಕೂ ದುಬಾರಿ ಹಣ..!

 'ನಾವೆಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಿದರೆ, ಸೀಲ್‌ಡೌನ್, ಲಾಕ್‌ಡೌನ್ ಯಾವುದೂ ಬೇಡ. ನಾವು ಎಷ್ಟೇ ಮನವಿ ಮಾಡಿದರೂ, ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಮಗೆ ಬಂದ ಮೇಲೆ ನೋಡಿಕೊಂಡ್ರಾಯ್ತು ಎನ್ನುವ ಅಸಡ್ಡೆಯೇ, ಇಂತಹ ಸ್ಥಿತಿ ತಂದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.