ವಂಶಿಕಾ ಇಂಗ್ಲಿಷ್ನಲ್ಲಿ ಮಗ್ಗಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಾಸ್ಟರ್ ಆನಂದ್ ಫ್ಯಾನ್ಸ್ ಕನ್ನಡದಲ್ಲಿಯೂ ಮಗ್ಗಿ ಹೇಳಿಸುವಂತೆ ಸಲಹೆ ಇತ್ತಿದ್ದಾರೆ.
ಬಾಲ ನಟರಾಗಿದ್ದಾಗಿನಿಂದಲೂ ಮಾಸ್ಟರ್ ಆನಂದ್ ಬಹಳ ಫೇಮಸ್. ಬಾಲ್ಯದಲ್ಲಿನ ಅವರ ಚಿತ್ರಗಳನ್ನು ನೋಡಿದ್ರೆ ಎಂಥಾ ನಟನೆ ಮಾಡ್ತಾರಪ್ಪಾ… ಇಷ್ಟು ಸಣ್ಣ ವಯಸ್ಸಲ್ಲಿ ಇಷ್ಟೊಂದು ಡೈಲಾಗ್ ಹೇಳ್ತಾ, ನಟನೆ ಮಾಡೋದಾದ್ರೂ ಹೇಗೆ ಅಂತ ಅನಿಸಿದ್ದಂತೂ ನಿಜಾ. ಈಗ ಅದೇ ಗುಣ ಮಗಳು ವಂಶಿಕಾಗೂ ಬಂದಿದೆ. ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾಳೆ ಈ ಪುಟಾಣಿ. ಗೌರಿ ಗಣೇಶ, ಕಿಂದರಿ ಜೋಗಿ ಚಿತ್ರದ ಮಾಸ್ಟರ್ ಆನಂದ್(Master Anand) ಅವರನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಗೌರಿ ಗಣೇಶದಲ್ಲಿನ ಅವರ ಅದ್ಭುತ ಅಭಿನಯದಿಂದಾಗಿಯೇ ಇಂದಿಗೂ ಆನಂದ್ ‘ಮಾಸ್ಟರ್ ಆನಂದ್’ ಆಗಿಯೇ ಉಳಿದಿದ್ದಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ನಿರೂಪಣೆ ಮಾಡ್ತಾ ಇರೋ ಆನಂದ್ ಪುತ್ರಿ ಕೂಡ ಈಗ ಕನ್ನಡಿಗರ ಅಚ್ಚುಮೆಚ್ಚಿನ ಮನೆ ಮಗಳಾಗಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ಬಾಲಕಿ ಇದೀಗ ಇಂಗ್ಲಿಷ್ನಲ್ಲಿ ಪಟಪಟ ಎಂದು ಮಗ್ಗಿ ಹೇಳಿದ್ದಾಳೆ. ಇದನ್ನು ನೋಡಿದ ಹಲವರು ಕನ್ನಡದಲ್ಲಿ ಹೇಳಿಸಿ, ಕನ್ನಡಿಗಳಾಗಿ ಬೆಳೆಸಿ. ನಿಮ್ಮಂಥವರು ಹಲವರಿಗೆ ಮಾದರಿಯಾಗಬೇಕು. ಇಂಗ್ಲಿಷ್ ವ್ಯಾಮೋಹ ಸ್ವಲ್ಪ ಬಿಟ್ಟು ಮಗಳಿಗೆ ಕನ್ನಡವನ್ನೂ ಕಲಿಸಿ, ಕನ್ನಡದಲ್ಲಿಯೂ ಮಗ್ಗಿ ಹೇಳಿಸಿ ಎನ್ನುತ್ತಿದ್ದಾರೆ. ಗುರೂ ಮಗಳಿಗೆ ಕನ್ನಡತನವನ್ನು ಕಲಿಸಿ ಎನ್ನುತ್ತಿದ್ದಾರೆ ಇನ್ನು ಕೆಲವರು. ಇನ್ನು ಕೆಲವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳನ್ನು ಇಷ್ಟೆಲ್ಲಾ ಎಕ್ಸ್ಪೋಸ್ ಮಾಡಬೇಡಿ ಎನ್ನುತ್ತಿದ್ದಾರೆ.
ಬಾಲಿವುಡ್ ನಟ ಗೋವಿಂದ ಸೊಸೆ ರಾಗಿಣಿ ಮತಾಂತರ? ಎಡವಟ್ಟಿನ ಕುರಿತು ಮೌನ ಮುರಿದ ನಟಿ...
ಇನ್ನು ಮಾಸ್ಟರ್ ಆನಂದ್ ಕುರಿತು ಹೇಳುವುದಾದರೆ, ಯಶಸ್ವಿ ಬಾಲನಟನಾಗಿ, ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬೆಳೆದರು. 2010ರಲ್ಲಿ ಯಶಸ್ವಿನಿ ಎಂಬುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ವಂಶಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಅಪ್ಪನಂತೆ ಮಗಳೂ ಸಹ ಪುಟ್ಟ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿ ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾಳೆ. ಇನ್ನು ಮಾಸ್ಟರ್ ಆನಂದ್ ಮದುವೆಯಾಗಿ, ತಂದೆಯಾದರೂ ಸಹ ಇನ್ನೂ ಮಾಸ್ಟರ್ ಆನಂದ್ ಎಂದೇ ಜನಪ್ರಿಯರಾಗಿದ್ದಾರೆ. ಚಿಕ್ಕ ವಯಸ್ಸಿಗೆ ವಂಶಿಕಾ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದ್ದು, ಈಗ ಮಾಸ್ಟರ್ ಆನಂದ್ ಅವರಿಗಿಂತಲೂ ಚೂಟಿಯಾಗಿದ್ದು, ಕಾಮಿಡಿ ಶೋಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.
ವಂಶಿಕಾ ಅಂಜನಿ ಕಷ್ಯಪ್ (Vamshika Anjani Kashya) ಈಚೆಗಷ್ಟೇ ಆರು ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಣ್ಣ ವಯಸ್ಸಲ್ಲಿ ಸಾಧಿಸಿದು ಬಹಳಷ್ಟು. ಕೇವಲ ಎರಡು ವರ್ಷಗಳಲ್ಲಿ ಈ ಮಗು ಬಹು ಮುಖ ಪ್ರತಿಭೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಲಿಟಲ್ ಸ್ಟಾರ್ ವನ್ಶಿಕಾ ಅಂಜನಿ ಕಶ್ಯಪಾ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ (Nammamma Super Star season 1) ಒಂದರಲ್ಲಿ ತಾಯಿ ಯಶಸ್ವಿನಿ ಜೊತೆ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಪ್ರೋಮೋ ವಿಡಿಯೋದಿಂದಲೇ ತನ್ನ ಮಾತಿಗೆ ಮೋಡಿಗೆ ಸಾವಿರಾರು ಅಭಿಮಾನಿಗಳನ್ನು ಪಡೆದುಕೊಂಡ ವಂಶಿಕಾ. ಕೊನೆಗೆ ನಮ್ಮಮ್ಮ ಸೂರ್ ಸ್ಟಾರ್ ವಿನ್ನರ್ ಕೂಡ ಆದರು. ಬಳಿಕ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋದಲ್ಲೂ ನಟಿಸಿ, ಅಲ್ಲೂ ಸಹ ತನ್ನ ಅಮೋಘ, ನಟನೆ, ಡೈಲಾಗ್ ಡೆಲಿವರಿ, ಕಾಮಿಡಿ ಟೈಮಿಂಗ್ ಮೂಲಕ ವೀಕ್ಷಕರಿಗೆ ಅಚ್ಚರಿ ಮೂಡಿಸಿದ ಈ ಬಾಲೆ ಆ ಶೋನಲ್ಲೂ ವಿನ್ನರ್ ಆಗಿ ಹೊರಹೊಮ್ಮಿದರು. ಆ ಮೂಲಕ ಕರ್ನಾಟಕದ, ಕನ್ನಡಿಗರ ಮನ, ಮನೆ ಗೆಲ್ಲುವಲ್ಲಿ ಯಶಸ್ವಿಯಾದರು.
ಡೈರೆಕ್ಟರ್ಕ್ಕಿಂತ ಮೊದ್ಲೇ ನಾವು ಇದನ್ನೇ ಹೇಳಿದ್ದು ಬಿಡಿ ಅಂತಿರೋದ್ಯಾಕೆ ಫ್ಯಾನ್ಸ್?