Covid 19: ಕಳೆದ 3 ದಿನಗಳಿಂದ ನಿರಂತರವಾಗಿ ಸೋಂಕು ಪ್ರಮಾಣ ಇಳಿಕೆ

Jan 17, 2022, 4:19 PM IST

ಬೆಂಗಳೂರು (ಜ. 17): ರಾಜಧಾನಿಯಲ್ಲಿ (Bengaluru) ಕೋವಿಡ್ ಅಟ್ಟಹಾಸಕ್ಕೆ (Covid 19) ಕೊಂಚ ಬ್ರೇಕ್ ಬಿದ್ದಿದೆ. ಬೆಂಗಳೂರಿನಲ್ಲಿ ಇಂದು 18,622 ಮಂದಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ. ಕಳೆದ 3 ದಿನಗಳಿಂದ ನಿರಂತರವಾಗಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. 

Corona Vaccine: ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಿಲ್ಲ, ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ಕೋವಿಡ್‌ 3ನೇ ಅಲೆ ಸಾಕಷ್ಟುಆತಂಕ ಹುಟ್ಟುಹಾಕಿರುವ ಹೊತ್ತಿನಲ್ಲೇ ದೇಶದಲ್ಲಿ ಸೋಂಕು ಪ್ರಸರಣದ ಮಾಹಿತಿ ನೀಡುವ ‘ಆರ್‌ ವ್ಯಾಲ್ಯೂ’ (R Value) ಕಡಿಮೆಯಾಗಿರುವ ಸಿಹಿ ಸುದ್ದಿ ಹೊರಬಿದ್ದಿದೆ. ಇದು ದೇಶದಲ್ಲಿ ಕೋವಿಡ್‌ 3ನೇ ಅಲೆ ಜನವರಿ ಮಧ್ಯಭಾಗದಲ್ಲಿ ತನ್ನ ತುತ್ತತುದಿಗೆ ತಲುಪಿ, ಬಳಿಕ ಇಳಿಕೆಯ ಹಾದಿಯಲ್ಲಿ ಸಾಗಬಹುದು ಎಂಬ ಕೆಲ ವಿಜ್ಞಾನಿಗಳ ವಾದವನ್ನು ಪುಷ್ಟೀಕರಿಸುವಂತಿದೆ.