Jun 9, 2023, 11:08 PM IST
ಬೆಂಗಳೂರು (ಜೂ.9): ಬಿಜೆಪಿ ಸರ್ಕಾರದ ಅವಧಿಯಲ್ಲಾದ ಟೆಂಡರ್‌ಗಳ ಮರುಪರಿಶೀಲನೆಗೆ ಹಾಲಿ ಸರ್ಕಾರ ನಿರ್ಧಾರ ಮಾಡಲಿದೆ ಎನ್ನಲಾಗಿದೆ. ಅದರೊಂದಿಗೆ ಆರೆಸ್ಸೆಸ್‌ನ ಸಹಸಂಸ್ಥೆಗಳಿಗೆ ಪರಭಾರೆ ಮಾಡಿರುವ ಭೂಮಿಗಳನ್ನು ಸರ್ಕಾರ ವಾಪಾಸ್ ಪಡೆಯಬಹುದು ಎನ್ನುವ ಗುಮಾನಿಗಳು ಹರಿದಾಡುತ್ತಿವೆ.
ಅದರೊಂದಿಗೆ ಆರೋಗ್ಯ ಇಲಾಖೆಯಲ್ಲಿನ ಕೆಲವೊಂದು ಟೆಂಡರ್‌ಗಳನ್ನು ಈಗಾಗಲೇ ಸರ್ಕಾರ ರದ್ದು ಮಾಡಿದೆ. ಜಿವಿಕೆ ಸಂಸ್ಥೆಗೆ ನೀಡಲಾಗಿದ್ದ 108 ಅಂಬ್ಯುಲೆನ್ಸ್ ಸೇವೆಗಳ ಟೆಂಡರ್ ರದ್ದು ಮಾಡಲಾಗಿದೆ. ಚಾಮರಾಜನಗರ ಆಕ್ಸಿಜನ್ ದುರಂತದ ಮರು ತನಿಖೆಗೆ ಡಿಪಿಆರ್ ಸಿದ್ಧ ಮಾಡಲಾಗುತ್ತಿದೆ.
KARNATAKA BUDGET 2023: ಜುಲೈ 7 ರಂದು ಸಿದ್ಧರಾಮಯ್ಯ ಬಜೆಟ್ ಮಂಡನೆ!
ಇನ್ನೊಂದೆಡೆ, ಪಂಚ ಗ್ಯಾರಂಟಿ ಗೊಂದಲದ ನಡುವೆ ಸಿಎಂ ಸಿದ್ಧರಾಮಯ್ಯ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ದೊಡ್ಡ ಭಾರವನ್ನು ಇಳಿಸಿಕೊಂಡಿದ್ದಾರೆ. ರಹೀಂ ಖಾನ್ ಹಾಗೂ ಕೃಷ್ಣಬೈರೇಗೌಡರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ.