ಸಾಮಾನ್ಯ ಟೀವಿಗಳ ರೀತಿಯಲ್ಲಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡುವುದಕ್ಕಷ್ಟೇ ಸೀಮಿತವಲ್ಲ. ಇದರಲ್ಲಿ ಗೂಗಲ್ ರೀತಿಯೇ ಯಾವ ಕಾರ್ಯಕ್ರಮ ನೋಡ ಬೇಕೋ ಅದನ್ನು ಸರ್ಚ್ ಮಾಡಿದರೆ ಸಾಕು. ಕಾರ್ಯಕ್ರಮದ ಪೂರ್ಣ ಮಾಹಿತಿ ದೊರೆಯುತ್ತದೆ.
ನವ್ಯ ಶ್ರೀ ಶೆಟ್ಟಿ
ಮುಂಬೈ(ನ.28): 10ಕ್ಕೂ ಹೆಚ್ಚು ಭಾಷೆಗಳು, 24ಕ್ಕೂ ಅಧಿಕ ಆ್ಯಪ್‌ಗಳು,300ಕ್ಕೂ ಹೆಚ್ಚು ಚಾನೆಲ್ ಗಳು ಒಂದೇ ಟೀವಿ ಪರದೆಯಲ್ಲಿ ಕಾಣ ಸಿಗುವ ವಿನೂತನ ಸಾಹಸಕ್ಕೆ ಸ್ಟೀಮ್ ಬಾಕ್ಸ್ ಮೀಡಿಯಾ ಕೈ ಹಾಕಿದೆ. ಈ ಸಂಸ್ಥೆ 'ಡೋರ್' ಹೆಸರಿನ ಹೊಸ ಟೀವಿ ಪರಿಚಯಿಸಿದ್ದು, ಇದು ದೇಶದ ಮೊದಲ ಚಂದಾದಾರಿಕೆ ಟೀವಿಯಾಗಿದೆ.
undefined
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೋರ್ ಟೀವಿ ಅನಾವರಣಗೊಂಡಿತು. ಸ್ಟೀಮ್ ಬಾಕ್ಸ್ ಮೀಡಿಯಾ ಸಂಸ್ಥೆ ಮೈಕ್ರೋಮ್ಯಾಕ್ಸ್ ಇನ್‌ರ್ಫಾ ಮ್ಯಾಟಿಕ್ಸ್, ನಿಖಿಲ್ ಕಾಮತ್, ಸ್ಟೈಡ್ ವೆಂಚರ್ಸ್ ಸಹಭಾಗಿತ್ವದಲ್ಲಿ ಟೀವಿ ಪರಿಚಯಿಸಿದೆ.
ಸ್ಟೀಮ್ ಬಾಕ್ಸ್ ಮೀಡಿಯಾ ಸ್ಥಾಪಕ, ಸಿಇಓ ಅನುಜ್ ಗಾಂಧಿ ಮಾತನಾಡಿ, ಡೋರ್ ಟೀವಿಯು ಎಐ ತಂತ್ರಜ್ಞಾನ ಹೊಂದಿದೆ. 4 ವರ್ಷಗಳ ವಾರಂಟಿಯನ್ನು ನೀಡುತ್ತಿದ್ದೇವೆ' ಎಂದರು.
ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಸರ್ಕಾರದ ವಾರ್ನಿಂಗ್, ನಿಮ್ಮ ಸ್ಮಾರ್ಟ್‌ಫೋನ್‌ಗಿದೆಯಾ ರಿಸ್ಕ್?
ಮೈಕ್ರೋ ಮ್ಯಾಕ್ಸ್ ಇನ್‌ರ್ಫಾಮ್ಯಾಟಿಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಮಾತನಾಡಿ, ' ಈ ಟೀವಿ ಮೂಲಕ ಎಲ್ಲ ಓಟಿ ಟಿಗಳು ಒಂದೇ ಸೂರಿನಡಿ ಕೈಗೆಟಕುವ ದರದಲ್ಲಿ ಸಿಗುತ್ತದೆ' ಎಂದರು.
ವಿಶೇಷತೆಗಳೇನು?:
ಸಾಮಾನ್ಯ ಟೀವಿಗಳ ರೀತಿಯಲ್ಲಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡುವುದಕ್ಕಷ್ಟೇ ಸೀಮಿತವಲ್ಲ. ಇದರಲ್ಲಿ ಗೂಗಲ್ ರೀತಿಯೇ ಯಾವ ಕಾರ್ಯಕ್ರಮ ನೋಡ ಬೇಕೋ ಅದನ್ನು ಸರ್ಚ್ ಮಾಡಿದರೆ ಸಾಕು. ಕಾರ್ಯಕ್ರಮದ ಪೂರ್ಣ ಮಾಹಿತಿ ದೊರೆಯುತ್ತದೆ. ಒಂದು ವೇಳೆ ನೀವು ಯಾವುದೋ ಒಂದು ಸಿನಿಮಾ ನೋಡಬೇಕು ಎಂದು ಸಿನಿಮಾದ ಹೆಸರನ್ನು ಸರ್ಚ್ ಮಾಡಿದರೆ ಸಾಕು, ಆ ಸಿನಿಮಾ ಯಾವ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆಯೋ ಅದರ ಮಾಹಿತಿಯನ್ನು ಕೂಡ ಪಡೆಯಬಹುದು.
ನಿಮಗೆ ಸ್ಪ್ಯಾಮ್ ಕಾಲ್,SMS ಬರುತ್ತಿದೆಯಾ? ಜಿಯೋದಲ್ಲಿ ಬ್ಲಾಕ್ ಮಾಡುವುದು ಹೇಗೆ?
ಈ ಟೀವಿ ನಾಲ್ಕು ವರ್ಷಗಳ ವಾರಂಟಿ ಹೊಂದಿರುತ್ತದೆ. ಅಮೆಜಾನ್ ಪ್ರೈಮ್, ಜಿಯೋ ಸಿನೆಮಾ, ಡಿಸ್ನಿ + ಹಾಟ್‌ಸ್ಟಾರ್, ಜೀ5, ಯುಟ್ಯೂಬ್, ಸೇರಿದಂತೆ 24ಕ್ಕೂ ಹೆಚ್ಚು ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ ಕಾರ್ಯಕ್ರಮವನ್ನು ನೋಡಬ ಹುದು. ಕನ್ನಡವೂ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಾನೆಲ್ ವೀಕ್ಷಿಸಬಹುದು. ತಿಂಗಳಿಗೆ 799 ರು.ಚಂದಾದಾರಿಕೆ ನೀಡಬೇಕು. ಡೋರ್ ಟೀವಿಯನ್ನು ಮೊಬೈಲ್‌ಗೆ ಕನೆಕ್ಟ್ ಮಾಡಿ, ಐವರು ಒಂದೇ ಚಂದಾದಾರಿಕೆಯಲ್ಲಿ ವೀಕ್ಷಿಸಬಹುದು. ಇದರಲ್ಲಿ ಸಿನಿಮಾ, ಕ್ರೀಡೆ, ಸುದ್ದಿ, ಧಾರವಾಹಿ ಸೇರಿದಂತೆ ಹಲವು ಪ್ರತ್ಯೇಕ ವಿಭಾಗಗಳು ಇರುತ್ತವೆ. ಜತೆಗೆ ಮಕ್ಕಳಿಗಾಗಿಯೇ ಅವರ ಇಷ್ಟದ ಕಾರ್ಟೂನ್ ಗಳನ್ನು ವೀಕ್ಷಿಸಲು ಪ್ರತ್ಯೇಕ ವಿಭಾಗಗವೂ ಇದೆ.
ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟಿರುವ ಡೋರ್ ಟೀವಿ 43, 45, 65 ಇಂಚುಗಳಲ್ಲಿ ಲಭ್ಯ. 43 ಇಂಚಿನ ಟೀವಿಗೆ 10,799 ರು. ನಿಗದಪಡಿಸಲಾಗಿದೆ. ಡಿ.1ರಿಂದ ಪ್ಲಿಪ್ ಕಾರ್ಟ್‌ನಲ್ಲಿ ಖರೀದಿಸಬಹುದು.