ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಂದು ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿನ ಮತಗಳನ್ನು ಮತ ತಾಳೆ ವ್ಯವಸ್ಥೆ (ವಿವಿಪ್ಯಾಟ್) ಮೂಲಕ ಪರಿಶೀಲನೆ ನಡೆಸಬಹುದಾಗಿದೆ. ಇದಕ್ಕಾಗಿ 2ನೇ ಹಾಗೂ 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಮತ ಎಣಿಕೆ ನಡೆದ 1 ವಾರದೊಳಗೆ ಅರ್ಜಿ ಸಲ್ಲಿಸಬೇಕು ಹಾಗೂ 41 ಸಾವಿರ ರು. ಶುಲ್ಕ ಕಟ್ಟಬೇಕು. ಇವಿಎಂ ಟ್ಯಾಂಪರಿಂಗ್ ಆಗಿದ್ದು ಸಾಬೀತಾದರೆ ಈ ಶುಲ್ಕ ಮರಳಿಸಲಾಗುತ್ತದೆ.
ಮುಂಬೈ(ನ.28): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಲು ಅನುಭವಿಸಿದ ಮಹಾ ವಿಕಾಸ ಅಘಾಡಿ (ಎಂವಿಎ), ತನ್ನ ಪರಾಜಿತ ಅಭ್ಯರ್ಥಿಗಳಿಗೆ ವಿವಿಪ್ಯಾಟ್ ಮತಚೀಟಿ ಪರಿಶೀಲನೆಗೆ ಕೋರಿಕೆ ಸಲ್ಲಿಸಲು ಸೂಚಿಸಿದೆ. ಈ ಮೂಲಕ ಮತ ಎಣಿಕೆಯಲ್ಲಿ ಏನಾದರೂ ವ್ಯತ್ಯಾಸ ಮಾಡಲಾಗಿದೆಯೇ ಎಂಬುದನ್ನು ಅರಿಯಲು ಅದು ಉದ್ದೇಶಿಸಿದೆ.
ಇದೇ ವೇಳೆ, ಇವಿಎಂ ವಿರುದ್ಧ ಪ್ರತಿಭಟನೆ ನಡೆಸಲು ಅದು ಉದ್ದೇಶಿಸಿದೆ ಹಾಗೂ ಮತ್ತೆ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ಜಾರಿಗೊಳಿಸಿ ಎಂದು ಕೋರ್ಟ್‌ಗೆ ಹೋಗಲು ಮುಂದಾಗಿದೆ ಎಂದು ಹೇಳಿದೆ. ಎಂವಿಎ ನಾಯಕರಾದ ಶಿವಸೇನೆ (ಯುಬಿಟಿ) ನಾಯಕ ಉದ್ದವ ಠಾಕ್ರೆ, ಎನ್‌ಸಿಪಿ (ಎಸ್ಟಿ) ನಾಯಕ ಶರದ್ ಪವಾರ್ ಅವರು ಪರಾಜಿತ ಅಭ್ಯರ್ಥಿಗಳನ್ನು ಭೇಟಿಯಾದರು. ಆಗ ಪರಾಜಿತರು, 'ಇವಿಎಂ ತಿರುಚಿದ್ದೇ ನಮ್ಮ ಸೋಲಿಗೆ ಕಾರಣ' ಎಂದು ಸಂದೇಹ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ ಹಾಗೂ ಪವಾರ್, 'ಪರಾಜಿತರು ವಿವಿಪ್ಯಾಟ್ (ಮತ ತಾಳೆ ಯಂತ್ರ) ಪರಿಶೀಲನೆಗೆ ಅರ್ಜಿ ಹಾಕಿ ಎಂದು ಸೂಚಿಸಿದರು' ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆರಿಫ್ ನಸೀಂ ಖಾನ್ ಹೇಳಿದ್ದಾರೆ.
undefined
'ಗೆದ್ದಾಗ ಸರಿ, ಸೋತಾಗ ಸರಿಯಿರಲ್ವ..' ಇವಿಎಂಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಂದು ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿನ ಮತಗಳನ್ನು ಮತ ತಾಳೆ ವ್ಯವಸ್ಥೆ (ವಿವಿಪ್ಯಾಟ್) ಮೂಲಕ ಪರಿಶೀಲನೆ ನಡೆಸಬಹುದಾಗಿದೆ. ಇದಕ್ಕಾಗಿ 2ನೇ ಹಾಗೂ 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಮತ ಎಣಿಕೆ ನಡೆದ 1 ವಾರದೊಳಗೆ ಅರ್ಜಿ ಸಲ್ಲಿಸಬೇಕು ಹಾಗೂ 41 ಸಾವಿರ ರು. ಶುಲ್ಕ ಕಟ್ಟಬೇಕು. ಇವಿಎಂ ಟ್ಯಾಂಪರಿಂಗ್ ಆಗಿದ್ದು ಸಾಬೀತಾದರೆ ಈ ಶುಲ್ಕ ಮರಳಿಸಲಾಗುತ್ತದೆ.
3 ಹಂತದ ಹೋರಾಟ
1 ವಿವಿಪ್ಯಾಟ್ ಚೀಟಿಗಳ ಎಣಿಕೆಗೆ ಪರಾಜಿತರಿಗೆ ಠಾಕ್ರೆ, ಪವಾರ್ ಸೂಚನೆ
2 ಎಲೆಕ್ಟ್ರಾನಿಕ್ ಮತಯಂತ್ರಗಳ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ ಇವಿಎಂ ಬಳಕೆ ಕೈಬಿಟ್ಟು ಮತ್ತೆ
3 ಬ್ಯಾಲೆಟ್ ಪೇಪರ್ ಚಾರಿಗಾಗಿ ಕೋರ್ಟ್‌ಗೆ ಮೊರೆ
ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಬೆಂಗಳೂರು: ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಿದೆ.
ಈ ಹಿಂದೆ ಆಂಧ್ರ ಪ್ರದೇಶ ರಾಜ್ಯದಲ್ಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಿದ್ದಾರೆ. ಆಗ ಅವರಿಬ್ಬರೂ ಸಹ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂಬ ಆರೋಪ-ಪ್ರತ್ಯರೋಪಗಳನ್ನು ಮಾಡಿದ್ದರ ಬಗ್ಗೆ ಸ್ಮರಿಸಿದ ನ್ಯಾಯಾದೀಶರು ಅರ್ಜಿದಾರರ ವಾದವನ್ನು ವಿಭಾಗೀಯ ಪೀಠ ತಳ್ಳಿಹಾಕಿತು. ಮುಂದುವರೆದು, ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಂಥ ವಾದ ಮಂಡಿಸಲು ಇದು ಸೂಕ್ತ ಜಾಗ ಅಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ಇವಿಎಂ ವಿರುದ್ಧ ಭಾರತ್ ಜೋಡೋ ರೀತಿ ರ್‍ಯಾಲಿ: ಮಲ್ಲಿಕಾರ್ಜುನ ಖರ್ಗೆ
ಅರ್ಜಿದಾರರು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು ಎಂಬ ಕೋರಿಕೆಯೊಂದಿಗೆ, ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸೇರಿದಂತೆ ಆಮಿಷಗಳನ್ನು ಒಡ್ಡುವುದು ಸಾಬೀತಾದಲ್ಲಿ ಅಭ್ಯರ್ಥಿಗಳನ್ನು ಕನಿಷ್ಠ 5 ವರ್ಷ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಶಿಕ್ಷಣ ಕಾರ್ಯಕ್ರಮ ಆಯೋಜಿಸಬೇಕು. ರಾಜಕೀಯ ಪಕ್ಷಗಳ ನಿಧಿಯನ್ನು ಪರಿಶೀಲಿಸಲು ತನಿಖಾ ವ್ಯವಸ್ಥೆ ರೂಪಿಸಬೇಕು. ಚುನಾವಣಾ ಸಂಬಂಧಿ ಹಿಂಸಾಚಾರಗಳನ್ನು ತಡೆಗಟ್ಟಲು ನೀತಿ ರೂಪಿಸಬೇಕು ಎಂದು ಮನವಿ ಮಾಡಿದ್ದರು.
ಈ ಎಲ್ಲಾ ಕೋರಿಕೆಗಳನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ರಾಜಕೀಯ ಪಕ್ಷಗಳಿಗೆ ಈ ವ್ಯವಸ್ಥೆಯಿಂದ ಯಾವುದೇ ತೊಂದರೆ ಇಲ್ಲ, ನಿಮಗೆ ಸಮಸ್ಯೆ ಇದೆ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ, ಈ ಎಲ್ಲಾ ಕೋರಿಕೆಗಳನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ನಾವು ಇದನ್ನು ತಳ್ಳಿಹಾಕುತ್ತಿದ್ದೇವೆ. ನೀವು ಇದನ್ನೆಲ್ಲ ವಾದಿಸುವ ಸ್ಥಳ ಇದು ಅಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿ ಆದೇಶಿಸಿತು.