ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೋಗ್ಯ ವಿಮೆ ಘೋಷಿಸಿದ ಸಿಎಂ ಬೊಮ್ಮಾಯಿ

Dec 3, 2022, 6:13 PM IST

ಬೆಂಗಳೂರು (ಡಿ.3): ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಚೇತನರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬೊಮ್ಮಾಯಿ ಅವರು  5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ ಘೋಷಿಸಿದರು.

ಕೃಷಿಯಲ್ಲಿ ವಿಕಲಾಂಗನ ಹೆಜ್ಜೆ ಗುರುತು..ಕುದುರೆ ಬಳಸಿ ಕೃಷಿ ಮಾಡ್ತಾನೆ ಹಳ್ಳಿ ಹೈದಾ

ಮುಂದಿನ ಬಜೆಟ್​ನಲ್ಲಿ ವಿಶೇಷ ಅನುದಾನ ಕೊಡುತ್ತೇನೆ. ಅಂಗವಿಕಲರ ಆರೋಗ್ಯಕ್ಕೋಸ್ಕರ ವಿಶೇಷವಾದ ಆರೋಗ್ಯಸಿರಿ ಯೋಜನೆಯನ್ನ ನಿಮಗಾಗಿ ಪ್ರಾರಂಭ ಮಾಡುತ್ತೇನೆ. ವಿಕಲಚೇತನರಿಗೆ ಮೀಸಲಾತಿ ಪ್ರಮಾಣ 3% ಏರಿಸುತ್ತೇವೆ. ಬುದ್ದಿಮಾಂಧ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್ ಶಾಪ್ ಗಳನ್ನ ಮಾಡುವ ತೀರ್ಮಾನ ಮಾಡುತ್ತೇನೆ. ಇದೇ ವರ್ಷ ಪವರ್ ಟ್ರೇ ಸೈಕಲ್ ಕೊಡುತ್ತೇನೆ. ಅದಕ್ಕಾಗಿ 15 ಕೋಟಿ ಜೊತೆಗೆ ಇನ್ನು 22 ಕೋಟಿ ಮೀಸಲಿಟ್ಟು ಒಟ್ಟು 200 ಪವರ್ ಟ್ರೈ ಸೈಕಲ್ ಕೊಡುತ್ತೇನೆ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.