May 6, 2024, 10:48 AM IST
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Prajwal Revanna Obscene Case) ಸಂಬಂಧಿಸಿದಂತೆ SIT ಮುಖ್ಯಸ್ಥ ಬಿ.ಕೆ.ಸಿಂಗ್(SIT chief B.K.Singh) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಹಂಚುವುದು ಅಪರಾಧ ಎಂದು ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು(Videos) ಹರಡುವುದು ಅಪರಾಧವಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67(ಎ), ಐಪಿಸಿ 292 ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ. ಸಂತ್ರಸ್ತರು ರಾತ್ರಿ 8 ಗಂಟೆವರೆಗೆ ಸಂಪರ್ಕಿಸಬಹುದು. ಸಂತ್ರಸ್ತರ ಗುರುತು ಗೌಪ್ಯವಾಗಿ ಇಡಲಾಗುವುದು. ಸಂತ್ರಸ್ತರಿಗೆ ಅಗತ್ಯ ನೆರವನ್ನು ಎಸ್ಐಟಿ(SIT) ಒದಗಿಸಲಿದೆ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ವೀಕ್ಷಿಸಿ: DK Shivakumar Interview: ಉತ್ತರ ರಣಕಣದಲ್ಲಿ ಡಿಸಿಎಂ ! ನೇಹಾ ಹತ್ಯೆ, ಪ್ರಜ್ವಲ್ ಕೇಸ್ ಬಗ್ಗೆ ಡಿಕೆಶಿ ಬಿಚ್ಚಿಟ್ಟ ರಹಸ್ಯ ಏನು ?