ಪರೋಲ್‌ ಪಡೆದು ಜೈಲಿನ ಹೊರಗಿರುವ ಅಪರಾಧಿಯಿಂದ ಜೆಡಿಯು ಅಭ್ಯರ್ಥಿ ಪರ ಪ್ರಚಾರ

By Kannadaprabha NewsFirst Published May 6, 2024, 10:19 AM IST
Highlights

ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆಂಟ್ರಲ್‌ ಜೈಲು ಸೇರಿರುವ ಅಪರಾಧಿಯೊಬ್ಬರು ಜೆಡಿಯು ಅಭ್ಯರ್ಥಿ ಪರ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ.

ಪಟನಾ (ಮೇ.6): ಲೋಕಸಭೆ ಚುನಾವಣೆಗೆ ಬಿಹಾರದಿಂದ ಸ್ಪರ್ಧಿಸಿರುವ ನಿತೀಶ್‌ ಕುಮಾರ್‌ ನಾಯಕತ್ವದ ಜನತಾ ದಳದ (ಸಂಯುಕ್ತ) ಅಭ್ಯರ್ಥಿ ಪರ. ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆಂಟ್ರಲ್‌ ಜೈಲು ಸೇರಿರುವ ಅಪರಾಧಿಯೊಬ್ಬರು ಬೃಹತ್‌ ರೋಡ್‌ ಶೋ ಮೂಲಕ ಭಾನುವಾರ ಪ್ರಚಾರ ನಡೆಸಿದ್ದಾರೆ.

ಪಟನಾದ ಬ್ಯೂರ್‌ ಸೆಂಟ್ರಲ್‌ ಸೇರಿದ್ದ ಅಪರಾಧಿ ಅನಂತ್‌ ಕುಮಾರ್‌ ಸಿಂಗ್‌ ಭಾನುವಾರ ಬೆಳಗ್ಗೆ 15 ದಿನದ ಪೆರೋಲ್‌ ಮೇಲೆ ಹೊರ ಬಂದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಬರ್ಹ್‌ ಕ್ಷೇತ್ರದ ಜೆಡಿಯು ಅಭ್ಯರ್ಥಿ ಲಲನ್‌ ಸಿಂಗ್‌ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಛೋಟಾ ಸರ್ಕಾರ್‌ ಎಂದೇ ಹೆಸರು ಪಡೆದಿರುವ ಅನಂತ್‌ ಕುಮಾರ್‌ ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದರು.

ಮುಂಬೈ ದಾಳಿಯಲ್ಲಿ ಅಧಿಕಾರಿ ಕರ್ಕರೆ ಕೊಂದಿದ್ದು ಉಗ್ರನಲ್ಲ ಆರ್‌ಎಸ್‌ಎಸ್‌ ಪೊಲೀಸ್‌, ವಿವಾದವೆಬ್ಬಿಸಿದ ಕಾಂಗ್ರೆಸಿಗ

ಜೈಲಿನಿಂದ ಹೊರಬಂದ ಅನಂತ್‌ ಅವರನ್ನು ಕಾರುಗಳ ಮೂಲಕ ಡೋಲು, ಹೂಗಳನ್ನು ಅದ್ಧೂರಿ ಸ್ವಾಗತ ಕೋರಲಾಯಿತು. ಸ್ವಾಗತ ಕೋರಲು ಅಪಾರ ಜನಸ್ತೋಮ ನೆರೆದಿತ್ತು. ಜೆಡಿಯು ಅಭ್ಯರ್ಥಿ ಮತ್ತು ಅನಂತ್‌ ಪರ ಜೈಕಾರ ಹಾಕಲಾಯಿತು.

ನಾಳೆ 12 ರಾಜ್ಯಗಳ 94 ಸ್ಥಾನಗಳಿಗೆ ಚುನಾವಣೆ
ಲೋಕಸಭೆಗೆ ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ಮೇ 7ರಂದು 12 ರಾಜ್ಯಗಳ 95ನೇ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯ ಹಿಂದಿನ ದಿನವಾದ ಸೋಮವಾರ ಅಭ್ಯರ್ಥಿಗಳಿಗೆ ಮನೆಮನೆಗೆ ತೆರಳಿ ಮತಯಾಚನೆಯ ಅಂತಿಮ ಅವಕಾಶ ಇದೆ.

95 ಸ್ಥಾನಗಳಿಗೆ ಒಟ್ಟು 1351 ಜನರು ಸ್ಪರ್ಧಿಸಿದ್ದಾರೆ. ಈ ಪೈಕಿ ಗುಜರಾತ್‌ನಲ್ಲಿ ಎಲ್ಲ 26 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಗರಿಷ್ಠ 658 ಜನರು ಸ್ಪರ್ಧಿಸಿದ್ದರೆ, ಮಹಾರಾಷ್ಟ್ರದಲ್ಲಿ ಮಂಗಳವಾರ ಚುನಾವಣೆ ನಡೆವ 11 ಸ್ಥಾನಕ್ಕೆ 519 ಜನರು ಸ್ಪರ್ಧಿಸಿದ್ದಾರೆ.

ಮೂರನೇ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಮುಕ್ತಾಯಗೊಳ್ಳಲಿದೆ. ಇನ್ನೂ 4 ಹಂತದ ಚುನಾವಣೆ ಬಾಕಿ ಇದ್ದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಲೈಂಗಿಕ ಕಿರುಕುಳದ ಆರೋಪ ಬೆನ್ನಲ್ಲೇ ಪೊಲೀಸರನ್ನು ರಾಜಭವನ ಒಳಗೆ ಬಿಡದಂತೆ ಬಂಗಾಳ ರಾಜ್ಯಪಾಲ ಸೂಚನೆ

ಪ್ರಮುಖರು:
ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸುಪ್ರಿಯಾ ಸುಳೆ, ಡಿಂಪಲ್‌ ಯಾದವ್‌ ಚುನಾವಣೆಯ ಕಣದಲ್ಲಿರುವ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ.

ಎಲ್ಲೆಲ್ಲಿ ಚುನಾವಣೆ?:
ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್‌, ದಾದ್ರಾ ಮತ್ತು ನಗರ್‌ ಹವೇಲಿ, ದಮನ್ ಮತ್ತು ದಿಯು,

click me!