ಬೀಚ್‌ನಲ್ಲಿ ಬಿಕಿನಿ ತೊಟ್ಟು ಬೆಂಕಿ ಹೊತ್ತಿಸಿದ ದಿಶಾ ಪಟಾನಿ: ಝೂಮ್ ಮಾಡಿ ನೋಡಿ ಅಂತಿದ್ದಾರೆ ನೆಟ್ಟಿಗರು!

First Published May 6, 2024, 10:22 AM IST

'ಲೋಫರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿಶಾ ಪಟಾನಿ ತಮ್ಮ ವಿನೂತನ ಲುಕ್‌ನಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿರುವ ದಿಶಾ ಪಟಾನಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. 

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸಖತ್ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.

'ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ' ಚಿತ್ರದ ಮೂಲಕ ಮನೆ ಮಾತಾಗಿರುವ ದಿಶಾ ಇತ್ತೀಚಿಗೆ ಬಿಕಿನಿ ಲುಕ್ ನಲ್ಲಿ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದು ಮತ್ತೆ ಸದ್ದು ಮಾಡಿದ್ದಾರೆ.

ಬಾಲಿವುಡ್​ ನಟಿ ನಟಿ ದಿಶಾ ಪಟಾನಿ ಸದ್ಯ ಥೈಲ್ಯಾಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಬೀಚ್ ಕ್ಷಣಗಳ ಗ್ಲಿಂಪ್‌ಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ.

ದಿಶಾ ಪಟಾನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಕೆಲವು ಫೋಟೋಗಳು ಆನ್​ಲೈನ್ ಬಿಸಿ ಹೆಚ್ಚಿಸಿದೆ. ದಿಶಾ ಪಟಾನಿ ಬಿಕಿನಿ ಧರಿಸಿ ಸಮುದ್ರ ಅಂಚಿನಲ್ಲಿ ಕುಳಿತು ಹಾಟ್ ಅವತಾರದಲ್ಲಿ ಪೋಸ್​ ಕೊಟ್ಟಿದ್ದಾರೆ.​​

ದಿಶಾ ಪಠಾನಿ ತನ್ನ ಟಾಪ್ ಸೌಂದರ್ಯವನ್ನು ತೋರಿಸಿ ಹುಡುಗರ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ.

ದಿಶಾ ಅವರು ಬಿಕಿನಿಗಳಿಂದಲೇ ಫೇಮಸ್. ಈ ನಟಿಯ ಫೋಟೋಗಳು ಹೆಚ್ಚಾಗಿ ಬಿಕಿನಿಯಲ್ಲಿಯೇ ಇವೆ. ಹಾಗಾಗಿಯೇ ಅವರಿಗೆ ಫಾಲೋವರ್ಸ್ ಕೂಡಾ ತುಂಬಾ ಹೆಚ್ಚಿದ್ದಾರೆ. ಜೊತೆಗೆ ತೆಲುಗು ಚಿತ್ರಗಳಲ್ಲಿ ಅವಕಾಶ ಪಡೆಯಲು ದಿಶಾ ಪ್ರಯತ್ನ ಪಡುತ್ತಿದ್ದಾರೆ.

ಪ್ರಭಾಸ್ ಅವರ ಮುಂಬರುವ ದೊಡ್ಡ ಚಲನಚಿತ್ರ ಪ್ರಾಜೆಕ್ಟ್ ಕೆ ಮೂವಿಯ ಭಾಗವಾಗಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ದೇಶಾದ್ಯಂತ ಭಾರೀ ನಿರೀಕ್ಷೆಗಳಿವೆ.

click me!