Chitradurga: ಬಾಲಕಿಯರ ಕಾಲೇಜಿನಲ್ಲಿ 8 ಮಂದಿಗೆ ಕೋವಿಡ್, ಕಾಲೇಜು ಸೀಲ್‌ಡೌನ್

Jan 22, 2022, 2:39 PM IST

ಚಿತ್ರದುರ್ಗ (ಜ. 22): ಕೋಟೆನಾಡಿನಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಇಲ್ಲಿನ ಬಾಲಕಿಯರ ಕಾಲೇಜಿನಲ್ಲಿ 8 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ (Covid 19) ಬಂದಿದೆ. 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಒಂದು ವಾರಗಳ ಕಾಲ ಕಾಲೇಜನ್ನು ಸೀಲ್‌ಡೌನ್ (Seal Down) ಮಾಡಲಾಗಿದೆ. ಮಾದನಾಯಕನಹಳ್ಳಿ ಶಾಲೆಯಲ್ಲಿ 14 ಜನಕ್ಕೆ ಪಾಸಿಟಿವ್ ಬಂದಿದೆ.

Covid 19: 101 ವಾರ್ಡ್‌ಗಳಲ್ಲಿ 500 ಕ್ಕಿಂತ ಹೆಚ್ಚು ಕೇಸ್, ಡೇಂಜರ್ ಝೋನ್  

 ಕೋಟೆನಾಡು ಚಿತ್ರದುರ್ಗದಲ್ಲಿ ಕೋವಿಡ್‌ ಮತ್ತಷ್ಟುವ್ಯಾಪಿಸಿದ್ದು ಶುಕ್ರವಾರದ ವರದಿಯಲ್ಲಿ ಮತ್ತೆ 438 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 2387 ಸಕ್ರಿಯ ಪ್ರಕರಣ ಇದ್ದಂತಾಗಿದೆ. ಚಿತ್ರದುರ್ಗ 172, ಚಳ್ಳಕೆರೆ 68, ಹಿರಿಯೂರು 75,ಹೊಳಲ್ಕೆರೆ 39,ಹೊಸದುರ್ಗ 63, ಮೊಳಕಾಲ್ಮುರು ತಾಲೂಕಿನ 21 ಮಂದಿಗೆ ಶುಕ್ರವಾರ ಕೋವಿಡ್‌ ದೃಢಪಟ್ಟಿದೆ. 18 ವರ್ಷದವರೆಗಿನ 91ಮಕ್ಕಳಲ್ಲಿ ಹೊಸದಾಗಿ ಸೋಂಕು ತಗುಲಿದೆ. ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಪಾರ್ಶ್ವನಾಥ ಪ್ರೌಢಶಾಲೆಯ 14 ವಿದ್ಯಾರ್ಥಿಗಳಿಗೆ ಸೋಂಕು ಆವರಿಸಿದೆ.