ಚಂದನಾ ಅನಂತಕೃಷ್ಣ ಮದುವೆ ತಯಾರಿ ಭರ್ಜರಿಯಾಗಿ ನಡೀತಿದೆ. ಈ ನಡುವೆ ಲಕ್ಷ್ಮೀ ನಿವಾಸ ಚಿನ್ನುಮರಿ ಖ್ಯಾತಿಯ ಚಂದನಾ ಅನಂತಕೃಷ್ಣ ಭಾವೀ ಗಂಡನ ಜೊತೆ ಡ್ಯಾನ್ಸ್ ಮಾಡ್ತಿರೋ ವೀಡಿಯೋ ವೈರಲ್ ಆಗಿದೆ.
ಚಂದನಾ ಅನಂತಕೃಷ್ಣ ಅಂದ್ರೆ ಚಿನ್ನುಮರಿ ಅಂತಾನೇ ಪಾಪ್ಯುಲರ್. ಈ ನಟಿ ಕಿರುತೆರೆಯ ಚಿನಕುರಳಿ. ಮುದ್ದು ಮುದ್ದಾಗಿ ಮಾತನಾಡ್ತಾ, ಆಗಾಗ ಡ್ಯಾನ್ಸ್ ಮಾಡ್ತಾ ಟೈಮ್ ಸಿಕ್ರೆ ನಿರೂಪಣೆಯನ್ನೂ ಮಾಡೋ ಬಹುಕಲಾವಲ್ಲಭೆ. ಇಂಥಾ ಹುಡುಗಿ ಬೇಗ ಮದುವೆ ಆಗದಿರಲಪ್ಪಾ ಅಂತ ಒಂದಿಷ್ಟು ಜನ ಹುಡುಗರು ಬೇಡ್ಕೊಂಡಿದ್ದೂ ಇತ್ತು. ಆದರೆ ಅವರ ಹಾರ್ಟ್ ಚಿಂದಿ ಮಾಡಿ ಇದೀಗ ಚಿನ್ನುಮರಿ ಹಸೆಮಣೆ ಏರೋ ಸಂಭ್ರಮದಲ್ಲಿದ್ದಾರೆ. ಸದ್ಯ ಮದುವೆಯ ಸಂಭ್ರಮ ಶುರುವಾಗಿದೆ. ಈಗಾಗಲೇ ಅರಿಶಿನ ಶಾಸ್ತ್ರಗಳು ಮುಗಿದಿವೆ. ಈ ಫೋಟೋಗಳನ್ನು ಚಂದನಾ ತನ್ನ ಇನ್‌ಸ್ಟಾ ಪೇಜ್‌ನಲ್ಲಿ ಇನ್ನೂ ಪೋಸ್ಟ್ ಮಾಡಿಲ್ಲ. ಆದರೆ ಅವರ ಸ್ನೇಹಿತರು ಈಗಾಗಲೇ ಅವರ ಮೆಹೆಂದಿ, ಸಂಗೀತ್ ಕಾರ್ಯಕ್ರಮಗಳ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಆ ಪೋಸ್ಟ್ ಗಳನ್ನು ಚಂದನಾ ಅವರನ್ನು ಗುಟ್ಟಾಗಿ ಆರಾಧಿಸ್ತಾ ಇದ್ದ ಹುಡುಗರು ಕಣ್ಣೀರು ಹಾಕ್ಕೊಂಡು ನೋಡಿದ್ರೆ ಉಳಿದೆಲ್ಲ ಫ್ಯಾನ್ಸ್ ಖುಷಿ ಖುಷಿಯಿಂದ ನೋಡಿ ಹಾರ್ಟ್ ಇಮೋಜಿ ಒತ್ತುತ್ತಿದ್ದಾರೆ.
ಉದ್ಯಮಿ ಆಗಿರುವ ಪ್ರತ್ಯಕ್ಷ್ ಎಂಬುವರನ್ನ ಚಂದನಾ ಅನಂತಕೃಷ್ಣ ನಾಳೆ (ನ.28)ಕ್ಕೆ ಮದುವೆಯಾಗಲಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಇದಾಗಿದ್ದು, ಬಂಧು - ಮಿತ್ರರು, ಕಿರುತೆರೆ ಕಲಾವಿದರ ಸಮ್ಮುಖದಲ್ಲಿ ಚಂದನಾ ಅನಂತಕೃಷ್ಣ - ಪ್ರತ್ಯಕ್ಷ್ ವಿವಾಹವಾಗಲಿದ್ದಾರೆ. ಚಂದನಾ ಅನಂತಕೃಷ್ಣ ಮದುವೆ ಆಗುತ್ತಿರುವ ಪ್ರತ್ಯಕ್ಷ್ ಬೇರೆ ಯಾರೂ ಅಲ್ಲ.. ಕನ್ನಡ ಚಿತ್ರರಂಗದಲ್ಲೇ ಸಕ್ರಿಯರಾಗಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಪುತ್ರನೇ ಪ್ರತ್ಯಕ್ಷ್.
ಬದಲಾದ ಇಬ್ಬರು ನಾಯಕಿಯರು: ವೀಕ್ಷಕರಿಗೆ ಹಬ್ಬವೋ ಹಬ್ಬ! ಬೈಯ್ತಿದ್ದವರೇ ನೋಡಲು ಕಾಯ್ತಿದ್ದಾರೆ...
1987ರಲ್ಲಿ ತೆರೆಗೆ ಬಂದಿದ್ದ ‘ಆರಂಭ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟ ಉದಯ್ ಹುತ್ತಿನಗದ್ದೆ. ‘ಅಗ್ನಿಪರ್ವ’, ‘ಶುಭ ಮಿಲನ’, ‘ಜಯಭೇರಿ’, ‘ಉದ್ಭವ’, ‘ಅಮೃತ ಬಿಂದು’, ‘ಶಿವಯೋಗಿ ಅಕ್ಕಮಹಾದೇವಿ’, ‘ಉಂಡು ಹೋದ ಕೊಂಡು ಹೋದ’, ‘ಕ್ರಮ’ ಮುಂತಾದ ಚಿತ್ರಗಳಲ್ಲಿ ಉದಯ್ ಹುತ್ತಿನಗದ್ದೆ ಅಭಿನಯಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್, ಡಾ ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಜೊತೆಗೆ ಉದಯ್ ಹುತ್ತಿನಗದ್ದೆ ಸ್ಕ್ರೀನ್ ಶೇರ್ ಮಾಡಿದ್ದರು.
ಅಂದ್ಹಾಗೆ, ಉದಯ್ ಹುತ್ತಿನಗದ್ದೆ ಮೂಲತಃ ಚಿಕ್ಕಮಗಳೂರಿನವರು. ಕೆಲ ವರ್ಷಗಳ ಕಾಲ ನಟನೆ ಮಾಡಿದ್ದ ಉದಯ್ ಹುತ್ತಿನಗದ್ದೆ ಆನಂತರ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಪರಿಣಿತಿ ಪಡೆದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಉದಯ್ ಹುತ್ತಿನಗದ್ದೆ ಅದೇ ಉದ್ಯಮದಲ್ಲಿ ತೊಡಗಿದ್ದರು. 2022ರಲ್ಲಿ ಉದಯ್ ಹುತ್ತಿನಗದ್ದೆ ಕೊನೆಯುಸಿರೆಳೆದರು. ಇದೀಗ ಮಗ ಪ್ರತ್ಯಕ್ಷ್ ಸಹ ಅಪ್ಪನ ಉದ್ಯಮವನ್ನ ಮುಂದುವರಿಸುತ್ತಿದ್ದಾರೆ. ಇನ್ನೂ ನಟಿ ಲಲಿತಾಂಜಲಿ ಸಹ ಹಲವು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಮಿಂಚಿದ್ದಾರೆ.
ನನ್ನಿಂದ್ಲೇ ನೀವ್ ಕಾಸ್ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್ ಇಲ್ಲ ಅಂತೀರಾ? ಹಂಸಾ ಗರಂ
ರಾಜಾ ರಾಣಿ’ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ಚಂದನಾ ಅನಂತಕೃಷ್ಣ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ‘ಬಿಗ್ ಬಾಸ್’ ಮನೆಯೊಳಗೆ ಹೋಗಿಬಂದ್ಮೇಲೆ. ‘ಬಿಗ್ ಬಾಸ್ ಕನ್ನಡ 7’ ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ನಟಿ ಚಂದನಾ ಅನಂತಕೃಷ್ಣ ಸ್ಪರ್ಧಿಸಿದ್ದರು. ‘ಹೂಮಳೆ’ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ ‘ಲಕ್ಷ್ಮೀ ನಿವಾಸ’ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಸದ್ಯ ಇವರ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಚಂದನಾ ತನ್ನ ಭಾವೀ ಪತಿ ಪ್ರತ್ಯಕ್ಷ ಜೊತೆಗೆ 'ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ' ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಚಂದನಾ ಏನೋ ನಾಟ್ಯ ಪ್ರವೀಣೆ. ಅವರಿಗೆ ಡ್ಯಾನ್ಸ್ ಅನ್ನೋದು ನೀರು ಕುಡಿದಷ್ಟೇ ಸಲೀಸು. ಆದರೆ ಎಂಟರ್‌ಟೇನ್‌ಮೆಂಟ್ ಫೀಲ್ಡ್‌ನಲ್ಲಿಲ್ಲದ ಇವರ ಭಾವೀ ಪತಿ ಪ್ರತ್ಯಕ್ಷ್ ಡ್ಯಾನ್ಸ್‌ನಲ್ಲಿ ತಾನು ಚಂದನಾಗೆ ಏನೂ ಕಡಿಮೆ ಇಲ್ಲ ಅನ್ನೋ ಹಾಗೆ ಸ್ಟೆಪ್ ಹಾಕಿದ್ದು ವಿಶೇಷ ಆಗಿತ್ತು.