ತಮ್ಮ ಜೀವನದಲ್ಲಿ ಕೊಟ್ಟ ಅತ್ಯಂತ ವೇಸ್ಟ್ ಎನಿಸಿರುವ ದುಬಾರಿ ಉಡುಗೊರೆ ಬಗ್ಗೆ ಮಾತನಾಡಿದ ನಟಿ ಸಮಂತಾ ರುತ್ ಪ್ರಭು ಕೊಟ್ಟ ಎಚ್ಚರಿಕೆ ಏನು?
ಸದ್ಯ ನಟಿ ಸಮಂತಾ ಹಾಟ್ ಟಾಪಿಕ್ ಆಗಿದ್ದಾರೆ. ಇದಕ್ಕೆ ಕಾರಣ ಇವರ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ ಧೂಲಿಪಾಲ್ ಅವರ ಜೊತೆಗೆ ಮದುವೆಗೆ ಸಿದ್ಧರಾಗಿರುವ ಕಾರಣದಿಂದ. ಇದೇ ಕಾರಣಕ್ಕೆ ಸಮಂತಾ ಅವರ ಸಂದರ್ಶನ ಬಲು ಜೋರಾಗಿ ನಡೆಯುತ್ತಿದೆ. ಸಮಂತಾ ಅವರು ತಮ್ಮ ಬದುಕಿನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಕೆಲವರು ತುಂಬಾ ಚಂಚಲ ಸ್ವಭಾವದರಾಗಿರುತ್ತಾರೆ. ಅವರು ನಿಮ್ಮನ್ನು ಪ್ರೀತಿಸೋದು ಕೆಲ ಕ್ಷಣ ಅಷ್ಟೇ. ಆದರೆ ಮೂರು ದಿನಗಳ ನಂತರ ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಾಗ ಅಥವಾ ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸಿದಾಗ ಅವರು ನಿಮ್ಮನ್ನು ಮತ್ತೆ ದ್ವೇಷಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಕುಟುಂಬ ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಈ ಸತ್ಯ ತಿಳಿದಿರುತ್ತದೆ. ಆದ್ದರಿಂದ ಅವರಿಗೆ ನಿಜವಾಗಿಯೂ ಏನು ನಡೆದಿದೆ ಎಂಬುದನ್ನು ತಿಳಿದುಕೊಂಡು ನೀವು ತೃಪ್ತರಾಗಿರಬೇಕು’ ಎನ್ನುವ ಮೂಲಕ ನಾಗಚೈತನ್ಯ ಅವರ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ.
ಇದೇ ವೇಳೆ, ಬಾಸ್‌ಬಾಬೆ ಇನ್‌ಸ್ಟಾಗ್ರಾಮ್‌ಗೆ ನೀಡಿರುವ ಸಂದರ್ಶನದಲ್ಲಿ ನಟಿಗೆ ನೀವು ನಿಮ್ಮ ಜೀವನದಲ್ಲಿ ಮಾಡಿರುವ ಅತಿ ದುಬಾರಿ ಖರ್ಚು ಯಾವುದು, ಅದು ನಿಮಗೆ ಅನಗತ್ಯ ಖರ್ಚು ಎನ್ನಿಸಿರಬೇಕು ಅಂಥದ್ದು ಯಾವುದು ಎಂದು ಕೇಳಿದಾಗ, ಕೂಡಲೇ ಸಮಂತಾ ನನ್ನ ಎಕ್ಸ್‌ಗೆ ಮಾಡಿರುವ ಖರ್ಚು ಎಂದಿದ್ದಾರೆ. ಅವರಿಗಾಗಿ ದುಬಾರಿ ಬೆಲೆಯ ಗಿಫ್ಟ್ ತೆಗೆದುಕೊಂಡಿದ್ದು ಮೂರ್ಖತನ ಎನ್ನಿಸುತ್ತಿದೆ. ಇದು ನನ್ನ ಜೀವನದಲ್ಲಿ ಮಾಡಿರುವ ಅನಗತ್ಯ ದುಬಾರಿ ಖರ್ಚು ಎನ್ನುವ ಮೂಲಕ ಗಂಡ ಅಥವಾ ಬಾಯ್‌ಫ್ರೆಂಡ್ ಆದವರಿಗೆ ಬೆಲೆ ಬಾಳುವ ಉಡುಗೊರೆ ಕೊಟ್ಟು ಅನಗತ್ಯ ಖರ್ಚು ಮಾಡುವ ಮೂಲಕ ಯೋಚಿಸಿ ಎನ್ನುವ ಸಂದೇಶವನ್ನು ನೀಡಿದ್ದಾರೆ. ಸಮಂತಾ ಅವರು ಮದುವೆಯಾದ ಹೊಸತರಲ್ಲಿ, ನಾಗ ಚೈತನ್ಯ ಅವರಿಗೆ ದುಬಾರಿ ಬೈಕನ್ನು ಉಡುಗೊರೆಯಾಗಿ ನೀಡಿದ್ದರು. ಅದು ತಮ್ಮ ಹಲವು ವರ್ಷಗಳಿಂದ ಕೂಡಿಸಿಟ್ಟ ಹಣ ಎಂದು ಹಿಂದೊಮ್ಮೆ ನಟಿ ಹೇಳಿಕೊಂಡಿದ್ದರು.
ಆಗ ಬೆಡ್‌ರೂಮ್, ಈಗ ಬಾತ್‌ರೂಮ್! ಫ್ರೆಂಡ್ ಜೊತೆ ನಿವೇದಿತಾ ಖುಲ್ಲಂ ಖುಲ್ಲಾ ವಿಡಿಯೋಗೆ ನೆಟ್ಟಿಗರು ಶಾಕ್...
ಇನ್ನೊಂದು ಸಂದರ್ಶನದಲ್ಲಿ ನಟಿ, ದುರದೃಷ್ಟ ಏನೆಂದರೆ, ನಾವು ಅಂತರ್ಗತವಾಗಿ ಪಿತೃಪ್ರಧಾನ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ತಪ್ಪು ನಡೆದಾಗಲೆಲ್ಲಾ ಮಹಿಳೆಯರನ್ನು ಟೀಕಿಸಲಾಗುತ್ತದೆ. ಪುರುಷರು ಜವಾಬ್ದಾರರಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮಹಿಳೆಯರು ಆನ್‌ಲೈನ್‌ನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಾರೆ ಎಂದಿದ್ದರು. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಅದು ನಿಜವಲ್ಲ. ಆದರೂ ನಾನು ನನ್ನನ್ನು ನಿಯಂತ್ರಿಸಿಕೊಂಡು ಸುಮ್ಮನಿದ್ದೆ. ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಹೇಳಲಾಗಿತ್ತು. ಅನೇಕ ಸುಳ್ಳುಗಳನ್ನು ಹಬ್ಬಿಸಿದ್ದು ನನಗೆ ಇನ್ನೂ ನೆನಪಿದೆ. ಆ ಸಮಯದಲ್ಲಿ ನಾನು ಎಲ್ಲರ ಮುಂದೆ ಬಂದು ಸತ್ಯ ಏನೆಂದು ಹೇಳಬೇಕು ಎಂದು ಆಗಾಗ ಅನಿಸುತ್ತಿತ್ತು ಎಂದಿದ್ದಾರೆ ಸಮಂತಾ.
ನನ್ನನ್ನು ಸೆಕೆಂಡ್ ಹ್ಯಾಂಡ್ ಎಂದುಕರೆಯಲಾಯಿತು. ಆ ಕ್ಷಣದಲ್ಲಿ ನನಗೆ ತುಂಬಾ ನೋವಾಯಿತು. ಜನರಿಗೆ ನಮ್ಮ ನೋವು ಅರ್ಥವಾಗುವುದಿಲ್ಲ. ಅದರೆ ಸಮಾಜ ಹೇಳುವುದನ್ನೆಲ್ಲಾ ಕೇಳುತ್ತಾ ಕುಳಿತುಕೊಂಡರೆ, ಬದುಕು ಸಾಗುವುದಿಲ್ಲ. ಆದ್ದರಿಂದ ಏನೇ ಬಂದರೂಅದನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿದ್ದೇನೆ ಎಂದಿದ್ದಾರೆ. ಇವೆಲ್ಲವುಗಳ ನಡುವೆಯೇ ಚಿತ್ರಗಳಲ್ಲಿ ನಟಿ ಬಿಜಿಯಾಗಿದ್ದಾರೆ. ಅವರು ಸಿಟೆಡಾಲ್ ಹನಿ ಬನಿ ಮೂಲಕ ಸದ್ಯ ಒಟಿಟಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಇವರು ಬಾಲಿವುಡ್ನಲ್ಲಿಯೇ ಬ್ಯುಸಿಯಾಗಿದ್ದಾರೆ. ಹಿಂದಿ ಬೆಲ್ಟ್ನಲ್ಲಿಯೂ ಅವರ ಕ್ರೇಜ್ ಸಖತ್ ಆಗಿಯೇ ಮುಂದುವರೆದಿದೆ.
ನನ್ನಿಂದ್ಲೇ ನೀವ್ ಕಾಸ್ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್ ಇಲ್ಲ ಅಂತೀರಾ? ಹಂಸಾ ಗರಂ