ಮಾರ್ಕೆಟ್‌ ಇಲ್ಲ ಅಂದ್ರೂ ಮರ್ಯಾದೆ ಇದೆ, ಎಲ್ಲಿ ಹೇಗ್ ಇರ್ಬೇಕೋ ಹಾಗೆ ಇರ್ಬೇಕು: ಧರ್ಮ ಕೀರ್ತಿರಾಜ್ ಹೇಳಿಕೆ ವೈರಲ್

By Vaishnavi Chandrashekar  |  First Published Nov 27, 2024, 12:19 PM IST

 ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸುದೀಪ್‌ ಕೊಟ್ಟ ಸಲಹೆಯನ್ನು ನೆನೆಪಿಸಿಕೊಂಡ ಧರ್ಮ. ವ್ಯಕ್ತಿತ್ವ ಬಿಟ್ಟು ಕೊಡದ ವ್ಯಕ್ತಿ ಎಂದ ನೆಟ್ಟಿಗರು..... 


ಬಿಗ್ ಬಾಸ್ ಸೀಸನ್ 11ರಿಂದ ಈ ವಾರ ಧರ್ಮ ಕೀರ್ತಿರಾಜ್ ಹೊರ ಬಂದಿದ್ದಾರೆ. ಆರಂಭದಿಂದಲೂ ಸಿಕ್ಕಾಪಟ್ಟೆ ಸ್ಲೋ ಆಗಿ ಗೇಮ್ ಶುರು ಮಾಡಿದ ಧರ್ಮ ಎಲಿಮಿನೇಟ್ ಆಗಿ ಹೊರ ಬರಲು ತಮ್ಮ ಸೈಲೆಂಟ್ ವ್ಯಕ್ತಿತ್ವ ಕಾರಣ ಎಂದು ಹಲವರು ಕಾಮೆಂಟ್ ಮಾಡಿದ್ದರು. ಧರ್ಮ ಗೇಮ್ ಶುರು ಮಾಡಲಿ ಎಂದು ಪದೇ ಪದೇ ಸುದೀಪ್ ಹಿಂಟ್ ಕೊಟ್ಟರೂ ಎಲಿಮಿನೇಟ್ ಆಗಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ ನೆಟ್ಟಿಗರು. 

'ಸುದೀಪ್‌ ಸರ್‌ಗೆ ನಾನು ವಂದನೆಗಳನ್ನು ಹೇಳಲು ಇಷ್ಟ ಪಡುತ್ತೀನಿ ಹೊರಗಡೆ ನಾನು ಅವರನ್ನು ಹತ್ತಿರದಿಂದ ನೋಡಿದ್ದೀನಿ ಅವರ ಕ್ಯಾಪ್ಟನ್ಸಿಯಲ್ಲಿ ಕ್ರಿಕೆಟ್ ಆಟವಾಡಿದ್ದೀನಿ...ವೈಯಕ್ತಿಕವಾಗಿ ಅವರೊಟ್ಟಿಗೆ ಪರ್ಸನಲ್ ಕನೆಕ್ಷನ್ ಇದೆ. ಒಂದು ವಾರದಲ್ಲಿ ಯಾವುದೋ ಅವಾರ್ಡ್‌ ಅಂತ ಬಂದಾಗ ನನ್ನ ಪರವಾಗಿ ಡಿಫೆಂಡ್ ಮಾಡಿಕೊಂಡರು...ಧರ್ಮ್‌ ಅವರಿಗೆ ಒಂದು ಇಮೇಜ್‌ ಇದೆ ಮತ್ತು ಫ್ಯಾನ್ ಫಾಲೋವರ್ಸ್‌ ಇದ್ದಾರೆ ಅವರಿಗೆ ಈ ಅವಾರ್ಡ್ ಕೊಡುವುದಕ್ಕೂ ಬೇಜಾರು ಇದೆ ಆದರೆ ಗೇಮ್‌ ಲೆಕ್ಕದಲ್ಲಿ ನಾವು ಕೊಡುತ್ತಿರುವುದು ಎಂದು ಸುದೀಪ್ ಸರ್ ಹೇಳ್ತಾರೆ. ಕಳೆದು ಎರಡು ಮೂರು ವಾರಗಳಿಂದ ನನಗೆ ಡೈರೆಕ್ಟ್‌ ಹಾಗೂ ಇನ್‌ಡೈರೆಕ್ಟ್‌ ಆಗಿ ಸಪೋರ್ಟ್ ಮಾಡುತ್ತಿದ್ದರು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ.

Tap to resize

Latest Videos

ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ಕೂದಲು ಕತ್ತರಿಸಿದ ಭವ್ಯಾ ಗೌಡ

'ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರತಿಯೊಬ್ಬ ಸ್ಪರ್ಧಿ ಮೇಲೆ ಸುದೀಪ್ ಸರ್‌ಗೆ ಒಳ್ಳೆ ಗೌರವ ಇದೆ...ಅವರೊಟ್ಟಿಗೆ ಮಾತನಾಡುವಾಗ ಅವರೆ ಅವರೆ ಎಂದು ಗೌರವ ಕೊಟ್ಟು ಮಾತನಾಡುತ್ತಾರೆ. ನಿಮ್ಮಿಂದ ಇನ್ನೂ ಬೇಕು ಧರ್ಮ, ನೀವು ಐಸಿಯುನಲ್ಲಿ ಇದ್ದೀರಾ ಹೊರ ಬರಬೇಕು, ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದೀರಾ ಡಯಟ್ ಮಾಡುವುದು ನಿಲ್ಲಿಸಬೇಕು ಈ ರೀತಿ ಇನ್‌ಡೈರೆಕ್ಟ್‌ ಆಗಿ ಹೇಳುತ್ತಿದ್ದರು. ನನ್ನ ಬಿಗ್ ಬಾಸ್ ಜರ್ನಿಯಲ್ಲಿ ಸುದೀಪ್ ಸರ್ ಮುಖ್ಯ ಪಾತ್ರ ವಹಿಸುತ್ತಾರೆ ಅದರಲ್ಲೂ ಶನಿವಾರ ಮತ್ತು ಭಾನುವಾರ ನಮ್ಮೊಟ್ಟಿಗೆ ಮಾತನಾಡುವುದು ನಮಗೆ ಜೋಶ್ ಕೊಡುತ್ತದೆ. ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಎಲ್ಲಿ ಹೇಗಿರಬೇಕು ಆ ರೀತಿನೇ ಇರಬೇಕು ಎಂದು ಸುದೀಪ್‌ ಸರ್ ಕೊಟ್ಟಿರುವ ಸಲಹೆ ನಿಜಕ್ಕೂ ಅರ್ಥ ಮಾಡಿಕೊಳ್ಳಬೇಕು...ಈ ಸಮಾಜದಲ್ಲಿ ನಾವು ಬದುಕಬೇಕು ಅಂದ್ರೆ ಈ ಪಾಲಿಸಿಯನ್ನು ಫಾಲೋ ಮಾಡಬೇಕು...ತಪ್ಪದೆ ಸುದೀಪ್ ಸರ್ ಹೇಳಿರುವುದನ್ನು ಪಾಲಿಸಿಕೊಂಡು ಹೋಗುತ್ತೀನಿ' ಎಂದು ಧರ್ಮ ಹೇಳಿದ್ದಾರೆ.

ರಿಯಾಲಿಟಿ ಇಲ್ಲದ ಶೋ ಬಿಗ್ ಬಾಸ್; ಸುದೀಪ್‌ ಗುಡ್‌ಬೈ ಹೇಳಿದ್ದಕ್ಕೆ ಖುಷಿ ಆಯ್ತು ಎಂದ ನಟಿ

'ಎಮೋಷನಲ್‌ ಆಗಿರುವಾಗ ರಜತ್ ಡೈಲಾಗ್ ಹೊಡೆಯುತ್ತಾರೆ ಆಗ ಮನಸ್ಸಿಗೆ ಖುಷಿ ಆಗುತ್ತದೆ, ನಾನು ಎಲಿಮಿನೇಟ್ ಆಗಿ ಹೊರ ಬರುವಾಗ ಅಲಾ ಗುರು ಇಲ್ಲಿ ಇದ್ದಿದ್ದು ನೀನು ಒಬ್ಬನೇ ಈಗ ನೀನು ಹೋಗ್ತಿದ್ಯಾ ಅಂತ ಹೇಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರತಿಯೊಬ್ಬರು ಒಳ್ಳೆಯವರು ಆದರೆ ನಾಮಿನೇಷನ್‌ ಮತ್ತು ಟಾಸ್ಕ್‌ ಅಂತ ಬಂದಾಗ ಆಟವಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಒಂದು ವಿಚಾರ ಚರ್ಚೆ ಮಾಡುತ್ತಿದ್ವಿ ಆಗ ಮಾರ್ಕೆಟ್‌ನಲ್ಲಿ ನಿನಗೆ ಒಳ್ಳೆ ಹೆಸರು ಇದೆ ಅಂತ ರಜತ್ ಹೇಳುತ್ತಾರೆ...ಆಗ ನಾನು ಮಾರ್ಕೆಟ್‌ ಇಲ್ಲ ಅಂದ್ರೂ ಮರ್ಯಾದೆ ಇದೆ ಎಂದು ನಾನು ಹೇಳುತ್ತೀನಿ' ಎಂದಿದ್ದಾರೆ ಧರ್ಮ. 

click me!