Sep 2, 2023, 2:41 PM IST
ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ಬಂದಾಗ್ಲೆಲ್ಲಾ ಕಾವೇರಿ(cauvery) ಕಾಟ ತಪ್ಪಿದ್ದಲ್ಲ. ಕಾವೇರಿ ಜಲಸಂಘರ್ಷ ದೊಡ್ಡ ಮಟ್ಟದಲ್ಲಿ ನಡೆದಾಗ್ಲೆಲ್ಲಾ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದದ್ದು, ಅಧಿಕಾರದಲ್ಲಿರೋದು ಕೈ ಸರ್ಕಾರ. ಬಂಗಾರಪ್ಪನವರಿಂದ ಹಿಡಿದು ಸಿದ್ದರಾಮಯ್ಯನವರವರೆಗೆ(Siddaramaiah) ಜಲ ಕಂಟಕ ತಟ್ಟಿದೆ. ಕಾವೇರಿ ಕನ್ನಡ ನಾಡಿನ ಉಸಿರು. ಕಾವೇರಿ ಇಲ್ಲದ ಕರ್ನಾಟಕವನ್ನು(Karnataka) ಕಲ್ಪನೆಯಲ್ಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡಿಗರ ಉಸಿರಲ್ಲಿ ಬೆರತು ಹೋಗಿರೋ ಜೀವನದಿ, ದೇವನದಿ ಕಾವೇರಿ. ಲಕ್ಷಾಂತರ ಜನರ ದಾಹ ನೀಗಿಸುವ, ಸಾವಿರಾರು ರೈತರಿಗೆ ಬದುಕು ಕಟ್ಟಿ ಕೊಟ್ಟಿರುವ ಕಾವೇರಿಯನ್ನು ಕನ್ನಡ ನಾಡಿನ ಜನ ತಾಯಿಯ ಸ್ಥಾನದಲ್ಲಿಟ್ಟು ಪೂಜಿಸ್ತಾರೆ. ಕಾವೇರಿ ಅನ್ನೋ ಹೆಸರು ಕೇಳಿದ್ರೆ ಕನ್ನಡಿಗರ ನರನಾಡಿನಲ್ಲಿ ಮಿಂಚಿನ ಸಂಚಾರವಾಗತ್ತೆ. ಆದ್ರೆ 90ರ ದಶಕದಿಂದ ಇಲ್ಲಿವರೆಗೆ ರಾಜ್ಯವನ್ನಾಳಿದ ನಾಲ್ಕು ಕಾಂಗ್ರೆಸ್ ಸರ್ಕಾರಗಳು ಮಾತ್ರ ಕಾವೇರಿ ಹೆಸರು ಕೇಳಿದ್ರೆ ಕನಸಲ್ಲೂ ಬೆಚ್ಚಿ ಬೀಳ್ತವೆ. ಕಾರಣ ಕೈ ರಾಜ್ಯಭಾರದಲ್ಲಿ ಭುಗಿಲೆದ್ದು ನಿಲ್ಲೋ ಕಾವೇರಿ ಜಲಯುದ್ಧ, ಜಲ ಸಂಘರ್ಷ.. ಈಗ ಸಿದ್ದರಾಮಯ್ಯ ಸರ್ಕಾರಕ್ಕೆ ಅದೇ ಕಾವೇರಿ ಜಲಸಂಘರ್ಷದ ಬಿಸಿ ತಟ್ಟಿದೆ.
ಇದನ್ನೂ ವೀಕ್ಷಿಸಿ: ಮಧ್ಯರಾತ್ರಿಯಲ್ಲಿ ಮಗಳು ಫೋನ್‌ನಲ್ಲಿ ಬ್ಯುಸಿ: ಬೆಳಗಾಗುವುದರೊಳಗೆ ಕೊಲೆ ಮಾಡಿ ತಂದೆಯ ನಾಟಕ !