ದೇಶದಲ್ಲಿ 500 ರೂ. ನಕಲಿ ನೋಟುಗಳ ಪ್ರಮಾಣ ಶೇ.300ರಷ್ಟು ಹೆಚ್ಚಳ! ನಕಲಿ ನೋಟು ಗುರುತಿಸೋದ್ಹೇಗೆ?

First Published | Nov 26, 2024, 6:43 PM IST

ಕಳೆದ 5 ವರ್ಷಗಳಲ್ಲಿ 500 ರೂ. ನಕಲಿ ನೋಟುಗಳಲ್ಲಿ ಶೇ.317 ರಷ್ಟು ಏರಿಕೆಯಾಗಿದೆ. 2023-24ರಲ್ಲಿ ಚಲಾವಣೆಯಲ್ಲಿದ್ದ 2000 ರೂ. ನಕಲಿ ನೋಟುಗಳ ಸಂಖ್ಯೆ ಶೇ.166ರಷ್ಟು ಏರಿಕೆಯಾಗಿದೆ. 500 ರೂ. ನೋಟಿನ ನಕಲಿ ಮಾಡುವ ಪ್ರಮಾಣ ಹೆಚ್ಚಾಗಿದ್ದು, ನೋಟನ್ನು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಗುರುತಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ನಮ್ಮ ಪರ್ಸ್‌ನಲ್ಲಿರೋ 500 ರೂಪಾಯಿ ನೋಟು ನಕಲಿಯೇ ಅಂತ ಭಯಪಡಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ ಕಳೆದ 5 ವರ್ಷಗಳಲ್ಲಿ 500 ರೂ. ನಕಲಿ ನೋಟುಗಳಲ್ಲಿ ಶೇ.317 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ವರದಿಗಳು ಹೇಳುತ್ತಿವೆ.

ಕೇಂದ್ರ ಹಣಕಾಸು ಸಚಿವಾಲಯ ಸಿದ್ಧಪಡಿಸಿದ ವರದಿಯಲ್ಲಿ ಈ ವಿಷಯ ಉಲ್ಲೇಖವನ್ನು ಮಾಡಲಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಅಂಕಿ ಅಂಶಗಳ ಪ್ರಕಾರ, 2018-19ರಲ್ಲಿ 21,865 ದಶಲಕ್ಷ ನಕಲಿ ನೋಟುಗಳಿದ್ದವು. 2022-23ರಲ್ಲಿ 91,110 ದಶಲಕ್ಷಕ್ಕೆ ಏರಿಕೆಯಾಗಿದೆ. ಆದರೆ 2023-24ರಲ್ಲಿ ಶೇ.15ರಷ್ಟು ಇಳಿಕೆಯಾಗಿದೆ. ಅಂದರೆ, ಸದರಿ ಆರ್ಥಿಕ ವರ್ಷದಲ್ಲಿ ನಕಲಿ 500 ರೂ. ನೋಟುಗಳ ಪ್ರಮಾಣ 85,711 ದಶಲಕ್ಷಕ್ಕೆ ಇಳಿದಿದೆ.

Latest Videos


2021-22ರಲ್ಲಿ ನಕಲಿ 500 ರೂ. ನೋಟುಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. 2020-21ರಲ್ಲಿ 39,453 ದಶಲಕ್ಷ ನೋಟುಗಳಿದ್ದವು. ಇದು 2021-22ರಲ್ಲಿ 79,699 ದಶಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಶೇ.102ರಷ್ಟು ಏರಿಕೆ. 2023-24ರಲ್ಲಿ ಚಲಾವಣೆಯಲ್ಲಿದ್ದ 2000 ರೂ. ನಕಲಿ ನೋಟುಗಳ ಸಂಖ್ಯೆ ಶೇ.166ರಷ್ಟು ಏರಿಕೆಯಾಗಿದೆ. ಆದರೆ, ಒಟ್ಟಾರೆ ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ.30ರಷ್ಟು ಇಳಿಕೆಯಾಗಿದೆ. 2018-19ರಲ್ಲಿ 3,17,384 ನಕಲಿ ನೋಟುಗಳಿದ್ದವು. 2023-24ರಲ್ಲಿ 2,22,639ಕ್ಕೆ ಇಳಿಕೆಯಾಗಿದೆ.

ಒಟ್ಟಾರೆಯಾಗಿ ನಾವು ಒಮ್ಮೆ ಗೊತ್ತಾಗದ ರೀತಿಯಲ್ಲಿ ಹೊಸ ನಕಲಿ ನೋಟುಗಳು ಚಲಾವಣೆಗೆ ಬರ್ತಿವೆ. ನಮ್ಮ ದೇಶದಲ್ಲಿ 2000 ರೂ. ಮುಖಬೆಲೆಯ ನೋಟನ್ನು ವಾಪಸ್ ಪಡೆದ ಬೆನ್ನಲ್ಲಿಯೇ ಇದೀಗ 500 ರೂ. ಮುಖಬೆಲಯ ನೋಟು ಅತಿಹೆಚ್ಚು ಮೌಲ್ಯವನ್ನು ಹೊಂದಿರುವ ನೋಟು ಆಗಿದೆ. ಹೀಗಾಗಿ, ಅತಿಹೆಚ್ಚಿನ ಮೌಲ್ಯವನ್ನು ಹೊಂದಿರುವ ಈ 500 ರೂ. ನೋಟಿನ ನಕಲಿ ಮಾಡುವ ಪ್ರಮಾಣ ಹೆಚ್ಚಾಗಿದ್ದು, ಇದರ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಣಕಾಸು ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ, ನಮ್ಮ ಬಳಿ ಇರುವ ನೋಟನ್ನು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ.

500 ರೂ. ನೊಟು ಅಸಲಿ, ನಕಲಿ ಗುರುತಿಸುವುದು ಹೇಗೆ?
* ಅಸಲಿ 500 ರೂ. ನೋಟಿನ ಅಳತೆ 22 mm x 150 mm ಆಗಿದೆ.
* ನೋಟಿನ ಮೇಲೆ ದೇವನಾಗರಿ ಲಿಪಿಯಲ್ಲಿ 500 ಅಂತ ಮುದ್ರಣ ಮಾಡಲಾಗಿದೆ.
* ನೋಟಿನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧೀಜಿ ಚಿತ್ರವಿರುತ್ತದೆ.
* ಸೂಕ್ಷ್ಮ ಅಕ್ಷರಗಳಲ್ಲಿ 'ಭಾರತ್', 'ಇಂಡಿಯಾ' ಅಂತ ಬರೆದಿರುತ್ತದೆ.

500 ರೂ. ನೊಟು ಅಸಲಿ, ನಕಲಿ ಗುರುತಿಸುವುದು ಹೇಗೆ?
* 'ಇಂಡಿಯಾ', 'RBI' ಅಂತ ಬರೆದಿರೋ ಕಲರ್ ಶಿಫ್ಟ್ ವಿಂಡೋ ಇರುತ್ತದೆ.
* 500 ರೂ. ನೋಟನ್ನು ಬಗ್ಗಿಸಿದಾಗ, ಭದ್ರತಾ ದಾರದ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.
* ಗ್ಯಾರಂಟಿ ಷರತ್ತು, ಪ್ರಾಮಿಸ್ ಷರತ್ತು, ಗವರ್ನರ್ ಸಹಿ, ಬಲಭಾಗದಲ್ಲಿ ಮಹಾತ್ಮ ಗಾಂಧೀಜಿ ಚಿತ್ರದಲ್ಲಿ RBI ಚಿನ್ಹೆ ಇರುತ್ತದೆ.
* ನೋಟಿನಲ್ಲಿ ಮಹಾತ್ಮ ಗಾಂಧೀಜಿ ಚಿತ್ರ ಮತ್ತು ಎಲೆಕ್ಟ್ರೋಟೈಪ್ (500) ವಾಟರ್‌ಮಾರ್ಕ್ ಇರುತ್ತದೆ.

500 ರೂ. ನೊಟು ಅಸಲಿ, ನಕಲಿ ಗುರುತಿಸುವುದು ಹೇಗೆ?
* ನೋಟಿನ ಮೇಲಿನ ಎಡಭಾಗ ಮತ್ತು ಕೆಳಗಿನ ಬಲಭಾಗದಲ್ಲಿ ಸಂಖ್ಯಾ ಫಲಕ ಇರುತ್ತದೆ.
* ಕೆಳಗಿನ ಬಲಭಾಗದಲ್ಲಿ ರೂಪಾಯಿ ಚಿನ್ಹೆಯೊಂದಿಗೆ ಬಣ್ಣ ಬದಲಾಗುವ ಶಾಯಿಯಲ್ಲಿ (ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ) ಮೌಲ್ಯದ ಸಂಖ್ಯೆ ಇರುತ್ತದೆ.
* ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಚಿನ್ಹೆ ಇರುತ್ತದೆ.
* 500 ರೂ. ನೋಟಿನ ಎಡ ಭಾಗದಲ್ಲಿ ನೋಟು ಮುದ್ರಿಸಿದ ವರ್ಷ ಇರುತ್ತದೆ.
* ನೋಟಿನಲ್ಲಿ ಸ್ವಚ್ಛ ಭಾರತ್ ಲೋಗೋ ಮತ್ತು ಘೋಷಣೆ ಇರುತ್ತದೆ.

click me!