1. ಚೆನ್ನೈ ಸೂಪರ್ ಕಿಂಗ್ಸ್:
5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 7 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರನ್ನು ಖರೀದಿಸಿದೆ. ಇದಕ್ಕೂ ಮೊದಲು 5 ಆಟಗಾರರನ್ನು ಚೆನ್ನೈ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು.
2. ಡೆಲ್ಲಿ ಕ್ಯಾಪಿಟಲ್ಸ್:
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ ಎಲ್ ರಾಹುಲ್, ಫಾಫ್ ಡು ಪ್ಲೆಸಿಸ್, ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರನ್ನು ಖರೀದಿಸಿದೆ. ಡೆಲ್ಲಿ ತಂಡದಲ್ಲಿ 7 ವಿದೇಶಿ ಆಟಗಾರರು ಸೇರಿದಂತೆ 23 ಆಟಗಾರರು ಇದ್ದಾರೆ.
3. ಗುಜರಾತ್ ಟೈಟಾನ್ಸ್:
ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು 7 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 20 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದೆ. ಹರಾಜಿಗೂ ಮುನ್ನ 5 ಆಟಗಾರರನ್ನು ಗುಜರಾತ್ ರೀಟೈನ್ ಮಾಡಿಕೊಂಡಿತ್ತು. ಜೋಸ್ ಬಟ್ಲರ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಗುಜರಾತ್ ತಂಡ ಸೇರಿದ ಪ್ರಮುಖ ಆಟಗಾರರೆನಿಸಿಕೊಂಡಿದ್ದಾರೆ.
4. ಕೋಲ್ಕತಾ ನೈಟ್ ರೈಡರ್ಸ್:
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರೀಟೈನ್ ಆಟಗಾರರು ಸೇರಿದಂತೆ 8 ವಿದೇಶಿ ಆಟಗಾರರ ಜತೆಗೆ ಒಟ್ಟು 21 ಆಟಗಾರರು ತಂಡದಲ್ಲಿದ್ದಾರೆ. ವೆಂಕಟೇಶ್ ಅಯ್ಯರ್, ಏನ್ರಿಚ್ ನೋಕಿಯೆ, ಕ್ವಿಂಟನ್ ಡಿ ಕಾಕ್ ಅವರಂತ ಆಟಗಾರರನ್ನು ಕೆಕೆಆರ್ ಫ್ರಾಂಚೈಸಿ ಖರೀದಿಸಿದೆ.
5. ಲಖನೌ ಸೂಪರ್ ಜೈಂಟ್ಸ್:
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಲಖನೌ ಫ್ರಾಂಚೈಸಿಯು 6 ವಿದೇಶಿ ಆಟಗಾರರೊಂದಿಗೆ ಒಟ್ಟು 24 ಆಟಗಾರರನ್ನು ಹೊಂದಿದೆ. ರಿಷಭ್ ಪಂತ್, ಆವೇಶ್ ಖಾನ್, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್ ಲಖನೌ ಫ್ರಾಂಚೈಸಿ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.
6. ಮುಂಬೈ ಇಂಡಿಯನ್ಸ್:
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 8 ವಿದೇಶಿ ಆಟಗಾರರೊಂದಿಗೆ ಒಟ್ಟು 23 ಆಟಗಾರರ ಬಲ ಹೊಂದಿದೆ. ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ನಮನ್ ಧಿರ್ ಅವರಂತಹ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
7. ಪಂಜಾಬ್ ಕಿಂಗ್ಸ್
ಹರಾಜಿಗೂ ಮುನ್ನ ಕೇವಲ 2 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಪಂಜಾಬ್, ಇದೀಗ 8 ವಿದೇಶಿ ಆಟಗಾರರು ಸೇರಿದಂತೆ 23 ಆಟಗಾರರನ್ನು ಖರೀದಿಸಿದೆ. ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಹಲ್, ಆರ್ಶದೀಪ್ ಸಿಂಗ್, ಮಾರ್ಕಸ್ ಸ್ಟೋನಿಸ್ ಪಂಜಾಬ್ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.
8. ರಾಜಸ್ಥಾನ ರಾಯಲ್ಸ್:
ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಇದೀಗ 6 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರನ್ನು ಹೊಂದಿದೆ. ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ವನಿಂದು ಹಸರಂಗ ರಾಯಲ್ಸ್ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.
9. ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಹರಾಜಿಗೂ ಮುನ್ನ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಆರ್‌ಸಿಬಿ ಇದೀಗ 8 ವಿದೇಶಿ ಆಟಗಾರರೊಂದಿಗೆ 22 ಆಟಗಾರರನ್ನು ಹೊಂದಿದೆ. ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಆರ್‌ಸಿಬಿ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.
10. ಸನ್‌ರೈಸರ್ಸ್ ಹೈದರಾಬಾದ್:
ಹರಾಜಿಗೂ ಮುನ್ನವೇ ಬಲಿಷ್ಠ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಕಳೆದ ಆವೃತ್ತಿಯ ರನ್ನರ್ ಅಪ್ ಸನ್‌ರೈಸರ್ಸ್ ತಂಡವು ಇದೀಗ 7 ವಿದೇಶಿ ಆಟಗಾರರೊಂದಿಗೆ 20 ಆಟಗಾರರನ್ನು ಹೊಂದಿದೆ. ಇಶಾನ್ ಕಿಶನ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಅಭಿನವ್ ಮನೋಹರ್ ಆರೆಂಜ್ ಆರ್ಮಿ ಸೇರಿಕೊಂಡ ಪ್ರಮುಖರಾಗಿದ್ದಾರೆ.