ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೆ ಇಬ್ಬರು ಸಾವು

Jun 13, 2020, 11:20 AM IST

ಬೆಂಗಳೂರು (ಜೂ. 13): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಂಬತ್ತು ಮಂದಿ ಕೊರೊನಾಗೆ ಬಲಿಯಾಗಿದ್ದು ಈ ಮಹಾಮಾರಿಗೆ ತುತ್ತಾದವರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ ಮತ್ತೆ 271 ಮಂದಿಗೆ ಸೋಂಕು ದೃಢಪಟ್ಟಟಿದ್ದು ಸೋಂಕಿತರ ಸಂಖ್ಯೆ 6516 ಕ್ಕೆ ಏರಿಕೆಯಾಗಿದೆ. 

ಜುಲೈ ಆಯ್ತು ಈಗ ಆಗಸ್ಟ್! ಹೆಚ್ಚಾಗಲಿದೆ ರಾಜ್ಯದಲ್ಲಿ ಕೊರೊನಾ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರೂ ರೋಗಿಗಳು 60 ವರ್ಷ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ. ನಿನ್ನೆ ಒಂದೇ ದಿನ ವಿಕ್ಟೋರಿಯಾದಲ್ಲಿ ನಾಲ್ವರು ಸಾವನ್ನಪ್ಪಿದ್ದರು.