
ಕೋಲಾರ (ನ.19): ಬಿಲೋ ಪಾವರ್ಟಿ ಲೈನ್ ಎಂದರೆ ದಟ್ಟ ದರಿದ್ರರು, ಪಾವರ್ಟಿ ಲೈನ್ ಗಿಂತ ಕೆಳಗಿರುವವರು ಅಂತಾ ಕೋಲಾರದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ವಿವಾದಿತ ಪದ ಬಳಕೆ ಮಾಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ರಾಜ್ಯದಲ್ಲಿ ಬಿಪಿ ಏರಿಸಿರುವ ಬಿಪಿಎಲ್ ಕಾರ್ಡ್ ವಿಚಾರ ಸಂಬಂಧ ಮಾತನಾಡಿ, ದಟ್ಟ ದರಿದ್ರರು ಎಂದರೆ ಕಷ್ಟದಲ್ಲಿರುವವರು, ನಾವು ಒಂದು ಕಾಲದಲ್ಲಿ ದರಿದ್ರರೆ ಎನ್ನುವ ಮೂಲಕ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ೪ ಕೋಟಿ ೮೦ ಲಕ್ಷ ಜನ ಬಿಲೋ ಪಾವರ್ಟಿ ಲೈನ್ ಅವರು ಇದ್ದಾರೆ ಅಂದರೆ ಅರ್ಥವೆ ಇಲ್ಲ, ಅಂದರೆ ಸರ್ಕಾರದ ಯೋಜನೆ ದುರುಪಯೋಗವಾಗುತ್ತಿದೆ ಎಂದರ್ಥ. ಈ ಹಿಂದೆ ಉಮೇಶ್ ಕತ್ತಿಯವರೆ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ರು, ಆಗ ಇದು ರಾಜಕೀಯ ವಿಚಾರವಾಗಿತ್ತು, ಇವತ್ತು ಕೂಲಿ ಮಾಡುವವನು ಸಹ ಒಂದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ, ಅವರು ಸಹ ಸಮೃದ್ದಿಯಾದ ಜೀವನ ನಡೆಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ದಿವಾಳಿಯಾಗಿದ್ದರಿಂದ ಬಿಪಿಎಲ್ ಕಾರ್ಡ್ ಕಡಿತ: ಪ್ರಲ್ಹಾದ್ ಜೋಶಿ ಕಿಡಿ
ಕುಮಾರಸ್ವಾಮಿ ನಿಲುವೇ ಬೇರೆ
ಕೋಲಾರದಲ್ಲಿ ಭಾನುವಾರ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದ್ದು ಬೇರೆ ಅರ್ಥದಲ್ಲಿ. ರಾಜ್ಯದ ಜನರಿಗೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ, ಬಿಪಿಎಲ್ ನಿಂದ ಎಪಿಎಲ್ ಮಾಡಬೇಕಾದ್ರೆ ಸರಿಯಾದ ನೀತಿ ನಿಯಮಗಳನ್ನ ಪಾಲಿಸುವಂತೆ ಹೇಳಿದ್ದಾರೆ ಹಾಗಾಗಿ ಕುಮಾರಸ್ವಾಮಿ ಅವರ ನಿಲುವೆ ಬೇರೆ ನಾನು ರಾಜಕೀಯ ಮಾತನಾಡಲ್ಲ ಎಂದರು.
ಅರ್ಹರ BPL ರೇಷನ್ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಸಚಿವ ಮುನಿಯಪ್ಪ!
ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ
ಚನ್ನಪಟ್ಟಣ ಉಪ ಚುನಾವಣೆ ಕುರಿತು ಮಾತನಾಡಿದ ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ, ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ, ನಿಖಿಲ್ ಕುಮಾರಸ್ವಾಮಿ ಪಕ್ಷದ ಮುಂದಿನ ನಾಯಕ ರೇವಣ್ಣ ಕುಟುಂಬಕ್ಕೆ ಹಿನ್ನೆಡೆ ಇರೋದ್ರಿಂದ, ನಿಖಿಲ್ ರಾಜ್ಯಾಧ್ಯಕ್ಷರು ಆಗಬಹುದು ಎಂದು ಭವಿಷ್ಯ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ