ವಿದೇಶಿಗನ ಫೋನ್ ಕರೆಗೆ ಬೆಚ್ಚಿಬಿದ್ದ ಬೆಂಗಳೂರು ಪೊಲೀಸರು!

May 12, 2020, 9:53 AM IST

ಬೆಂಗಳೂರು(ಮೇ.12): ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಂಗೆ ವಿದೇಶಿಗನೊಬ್ಬ ಫೋನ್ ಕರೆ ಮಾಡುತ್ತಾನೆ. ಜ್ವರ ಬಂದಿದೆ ಆಸ್ಪತ್ರೆಗೆ ಸೇರಿಸಿ ಎಂದು ಕರೆ ಮಾಡುತ್ತಾನೆ.

ಬೆಂಗಳೂರಿನ ಪುಲಕೇಶಿ ನಗರದಲ್ಲಿರುವ ಆತನ ನಿವಾಸದಿಂದ ಕರೆ ಮಾಡುತ್ತಾನೆ. ಈತ 70 ವಯಸ್ಸಿನ ವೃದ್ಧನಾಗಿದ್ದು, ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆಸ್ಪತ್ರೆಗೆ ಹೋಗುತ್ತಿದ್ದಂತೆ ನನಗೆ ಕೊರೋನಾ ಇದೆ ಎಂದು ಆ ವೃದ್ಧ ಬಾಯ್ಬಿಟ್ಟಿದ್ದಾನೆ.

ತಬ್ಲಿಘಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಯನೂರು ಮಂಜುನಾಥ್ ಒತ್ತಾಯ

ವೃದ್ದನ ಹೇಳಿಕೆ ಕೇಳಿ ಬೆಂಗಳೂರು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಸಹಾಯ ಮಾಡಿದ ಪೊಲೀಸರಿಗೆ ಕ್ವಾರಂಟೈನ್ ಶಿಕ್ಷೆಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.