ಲಾಕ್‌ಡೌನ್‌ಗೆ ಚಿಕ್ಕಪೇಟೆ ವರ್ತಕರ ವಿರೋಧ

Jun 22, 2020, 7:16 PM IST

ಬೆಂಗಳೂರು(ಜೂ.22): ಕೊರೋನಾ ವಿರುದ್ಧದ ಹೋರಾಟದಲ್ಲೂ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಚಿಕ್ಕಪೇಟೆಯಲ್ಲಿ ಲಾಕ್‌ಡೌನ್ ಹೇರಿಕೆಯಿಂದಾಗಿ ನಷ್ಟ ಅನುಭವಿಸಲು ಸಿದ್ದವಿಲ್ಲ ಎಂದು ಕೆಲವರು ಅಪಸ್ವರ ಎತ್ತಿದ್ದಾರೆ.

ಸರ್ಕಾರ ಲಾಕ್‌ಡೌನ್ ಘೋಷಿಸಿದರೆ ಬೆಂಬಲಿಸುತ್ತೇವೆ, ಆದರೆ ಯಾವುದಾದರೂ ಸಂಘಟನೆ ಲಾಕ್‌ಡೌನ್‌ಗೆ ಕರೆ ನೀಡಿದರೆ ಬೆಂಬಲಿಸುವುದಿಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ 8 ವರ್ತಕರ ಸಂಘಟನೆಗಳು ಮನವಿ ಮಾಡಿವೆ.

ಹೆಚ್ಚಾಗುತ್ತಿದೆ ಕೊರೊನಾ: ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಶಿಫ್ಟ್‌..!

ಚಿಕ್ಕಪೇಟೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಆದರೆ ಇದರ ಕುರಿತಂತೆ ವಿರೋಧಗಳು ವ್ಯಕ್ತವಾಗಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.