ಮಹಾರಾಷ್ಟ್ರದಲ್ಲಿಯು ಮೊಳಗಿದ ಕನ್ನಡ ಕಹಳೆ: ಕನ್ನಡ ಸಂಭ್ರಮ-50ಕ್ಕೆ ಸಾಕ್ಷಿಯಾದ ದಾನಮ್ಮ ದೇವಿಯ ಕ್ಷೇತ್ರ!

By Govindaraj S  |  First Published Sep 30, 2024, 8:43 PM IST

ಕನ್ನಡ ಸಂಭ್ರಮದ ನಡುವೆ ಗಡಿ ಕನ್ನಡ ಭಾಷಿಕರು ತಮ್ಮ ಅಹವಾಲು, ಸಮಸ್ಯೆಗಳನ್ನ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಭಾಷಿಕರಿಗೆ ಆಗ್ತಿರೋ ಅನ್ಯಾಯ, ಉಂಟಾಗ್ತಿರೋ ಸಮಸ್ಯೆಗಳ ಬಗ್ಗೆ ಮನವಿಪೂರ್ವಕಾಗಿ ಹೇಳಿಕೊಂಡಿದ್ದಾರೆ.‌


ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ‌.30): ಮಹಾರಾಷ್ಟ್ರದ ಗಡಿನಾಡ ಕನ್ನಡಿಗರಲ್ಲಿ ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸಂಭ್ರಮ 50 ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮ, ಗಡಿ ಕನ್ನಡಿಗರಿಗೆ ನೈತಿಕ ಬಲ ನೀಡಿದೆ. ಮಹಾರಾಷ್ಟ್ರದಲ್ಲಿ ಕನ್ನಡದ ಕಹಳೆ ಮೊಳಗಿದೆ.

Tap to resize

Latest Videos

undefined

ಮಹಾರಾಷ್ಟ್ರದಲ್ಲಿ ಕನ್ನಡ ಸಂಭ್ರಮ-50: ಕರ್ನಾಟಕ ಮಹಾರಾಷ್ಟ್ರ ಗಡಿ ಕನ್ನಡಿಗರಿಗೆ ಇಂದು ಸಂಭ್ರಮದ ದಿನ. ಸಾಂಗಲಿ ಜಿಲ್ಲೆ ಜತ್ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾರಾಷ್ಟ್ರದ ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಸಚಿವ ಶಿವರಾಜ್ ತಂಗಡಗಿ, ಶಿವಾನಂದ ಪಾಟೀಲ್, ಜತ್ ಶಾಸಕ ವಿಕ್ರಂ ಸಾವಂತ್ ಸೇರಿದಂತೆ ಎರಡು ರಾಜ್ಯದ ಜನಪ್ರತಿನಿಧಿ ಭಾಗಿಯಾಗಿದ್ದರು. 

ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಟ್‌ ಹೊಲೆಸಿ, ಕಾಯ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಗಡಿ ಕನ್ನಡಿಗರು: ಕನ್ನಡ ಸಂಭ್ರಮದ ನಡುವೆ ಗಡಿ ಕನ್ನಡ ಭಾಷಿಕರು ತಮ್ಮ ಅಹವಾಲು, ಸಮಸ್ಯೆಗಳನ್ನ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಭಾಷಿಕರಿಗೆ ಆಗ್ತಿರೋ ಅನ್ಯಾಯ, ಉಂಟಾಗ್ತಿರೋ ಸಮಸ್ಯೆಗಳ ಬಗ್ಗೆ ಮನವಿಪೂರ್ವಕಾಗಿ ಹೇಳಿಕೊಂಡಿದ್ದಾರೆ.‌ ಎರಡು ರಾಜ್ಯ ಸರಕಾರದ ಜನ ಪ್ರತಿನಿಧಿಗಳ ಮುಂದೆ ತಮ್ಮ ಸಮಸ್ಯೆಗಳ ಪಟ್ಟಿಯನ್ನಿಟ್ಟು ನಾವು ಕನ್ನಡಿಗರು, ರಾಜ್ಯ ಸರ್ಕಾರ ನಮ್ಮ ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.‌ 

ಉಭಯ ರಾಜ್ಯಗಳ ಜನಪ್ರತಿನಿಧಿಗಳಿಂದ ಕನ್ನಡ-ಮರಾಠಿ ಭಾಷಣ: ಕಾರ್ಯಕ್ರಮದ ವಿಶೇಷ ಘಟನೆಗೆ ಸಾಕ್ಷಿಯಾಯಿತು. ಅತಿ ಹೆಚ್ಚು ಕನ್ನಡಿಗರು ವಾಸವಿರುವ ಗಡಿ ಮಹಾರಾಷ್ಟ್ರ ದ ಜನಪ್ರತಿನಿಧಿಗಳು ಕನ್ನಡದಲ್ಲಿಯೆ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಇತ್ತ ಕರ್ನಾಟಕದ ಜನಪ್ರತಿಗಳ ಪೈಕಿ ಕೆಲವರು ಮರಾಠಿಯಲ್ಲಿ ಮಾತನಾಡಿದ್ದು ಕಂಡು ಬಂತು. ಈ ಮೂಲಕ ಮಹಾರಾಷ್ಟ್ರದ ಶಾಸಕರು ಕನ್ನಡದಲ್ಲಿ ಮಾತನಾಡಿ, ಕರ್ನಾಟಕದ ಸಚಿವರು ಮರಾಠಿಯಲ್ಲಿ ಉತ್ತರ ನೀಡುವ ಮೂಲಕ ಭಾಷಾ ಸಾಮರಸ್ಯೆಕ್ಕೆ ಸಾಕ್ಷಿಯಾದರು‌..

ಮಹಾರಾಷ್ಟ್ರದ ಕನ್ನಡ ಮಕ್ಕಳಿಗೆ ನಲಿಕಲಿ ವಿತರಣೆ: ಇನ್ನು ಗುಡ್ಡಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕನ್ನಡ ಶಾಲೆಗಳ ಮಕ್ಕಳಿಗೆ ನಲಿ ನಲಿ ಸಾಮಗ್ರಿ ವಿತರಣೆ ಮಾಡಲಾಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ 350 ಕನ್ನಡ ಶಾಲೆಗಳಿದ್ದು, 30 ಸಾವಿರ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಓದುತ್ತಿದ್ದಾರೆ.. ಈ ಶಾಲೆಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡ ಮಾಧ್ಯಮಕ್ಕೂ ಮರಾಠಿ ಪುಸ್ತಕ ನೀಡುತ್ತಿತ್ತು. ಇದೀಗ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ಸಾಮಗ್ರಿ ವಿತರಣೆ ಮಾಡುವ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ನೀಡಿದೆ. 

ಇನ್ನೂ ಬಿಡುಗಡೆಯಾಗದ ಅನುದಾನ: ಮಡಿಕೇರಿ ದಸರಾ ಜನೋತ್ಸವ ಸಿದ್ಧತೆಗೆ ಗರ

ಗಡಿಯಲ್ಲಿ ಕನ್ನಡ ಬೆಳಗಿಸಿದವರಿಗೆ ಪ್ರಶಸ್ತಿ: ಇದೇ ವೇಳೆ ಕರ್ನಾಟಕ ಗಡಿಯಲ್ಲಿ ಕನ್ನಡ ಬೆಳಗಿಸಿದ, ಕನ್ನಡವನ್ನ ಬೆಳೆಸಿದ ಮಹನೀಯರಿಗೆ ಕರ್ನಾಟಕ ಸರ್ಕಾರದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಶಸ್ತಿ ನೀಡಲಾಯಿತು. ಒಟ್ಟು ಆರು ಜನರಿಗೆ ಗಡಿನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಸರಗೋಡು, ಗುಜರಾತ್ ಸೇರಿದಂತೆ ವಿವಿಧ ರಾಜ್ಯದ ಕನ್ನಡಿಗರು ಆಗಮಿಸಿದ್ದರು‌. ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ವಿದ್ಯಾರ್ಥಿಗಳ ಧನ್ಯವಾದ ಸಲ್ಲಿಸಿದರು. ಒಟ್ಟಾರೆ ಗಡಿನಾಡ ಕನ್ನಡಗರ ಸಮಸ್ಯೆ ಸರ್ಕಾರದ ಗಮನಕ್ಕೆ ತರಲು ಕಾರ್ಯಕ್ರಮ ಯಶಸ್ವಿಯಾಯಿತು.

click me!