ಕೊಳಲು ನುಡಿಸುವ ಆಸೆ , ಓದಲು ಆಸಕ್ತಿ ಇಲ್ಲದೆ ಮನನೊಂದು ಹತ್ತನೇ ತರಗತಿ ವಿದ್ಯಾರ್ಥಿ ಓದಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.30): ಕೊಳಲು ನುಡಿಸುವ ಆಸೆ , ಓದಲು ಆಸಕ್ತಿ ಇಲ್ಲದೆ ಮನನೊಂದು ಹತ್ತನೇ ತರಗತಿ ವಿದ್ಯಾರ್ಥಿ ಓದಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಹತ್ತನೇ ತರಗತಿಯ ಧ್ರುವ ಎಂದು ಗುರುತಿಸಲಾಗಿದೆ.
ಓದಿನಲ್ಲಿ ಆಸಕ್ತಿ ಇರಲಿಲ್ಲ: ಮೃತ ಧ್ರುವ ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನವನು. ಶೃಂಗೇರಿ ಪಟ್ಟಣದಲ್ಲಿ ಪಿಜಿಯಲ್ಲಿ ಇದ್ದುಕೊಂಡು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಮೃತ ವಿದ್ಯಾರ್ಥಿ ಧ್ರುವನಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಕೊಳಲು ನುಡಿಸಲು ಹೆಚ್ಚಿನ ಆಸಕ್ತಿ ಹೊಂದಿದ್ದನು. ಪೋಷಕರು ಹತ್ತನೇ ತರಗತಿ ಮುಗಿಯಲಿ ಆಮೇಲೆ ಹೋಗುವಂತೆ ಎಂದು ಪೋಷಕರು ಬುದ್ಧಿ ಮಾತು ಹೇಳಿದ್ದರು ಎಂದು ತಿಳಿದುಬಂದಿದೆ. ಆದರೆ, 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಗೆ ಧ್ರುವ ಎರಡು ದಿನಗಳಿಂದ ಹೋಗಿರಲಿಲ್ಲ. ಈ ಬಗ್ಗೆ ಮೃತ ಬಾಲಕ ಧ್ರುವ ಅಜ್ಜನಿಗೆ ಶಾಲೆಯ ಮುಖ್ಯಸ್ಥರು ಫೋನ್ ಮಾಡಿ ಹೇಳಿದ್ದರು.
ವಿಧಿ ಎಷ್ಟು ಕ್ರೂರಿ... ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ
ಶೃಂಗೇರಿ ಪಟ್ಟಣದ ಪಿಜಿವೊಂದರಲ್ಲಿ ಧ್ರುವ ಇದ್ದ ರೂಮಿಗೆ ಬಂದು ತಾತ ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಧ್ರುವ ಆರಂಭದಲ್ಲಿ ಶೃಂಗೇರಿ ಪಟ್ಟಣದ ಸಮೀಪದ ಹಳ್ಳಿಯಿಂದ ನಿತ್ಯ ಶಾಲೆಗೆ ಬಂದು ಹೋಗುತ್ತಿದ್ದನು. ಆದರೆ, ಆ ಮಾರ್ಗದಲ್ಲಿ ಆನೆ ಕಂಡು ಶಾಲೆಗೆ ಬರಲು ಭಯವಾಗಿ ಪಿಜಿಯಲ್ಲೇ ಇದ್ದನು. ಇಂದು ಪಿಜಿಯ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.