Bengaluru: ಬಿಎಂಟಿಸಿ ಬಸ್‌ಗೆ ಆಕಸ್ಮಿಕ ಬೆಂಕಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Jan 21, 2022, 1:12 PM IST

ಬೆಂಗಳೂರು (ಜ. 21): ಬಿಎಂಟಿಸಿ (BMTC) ಬಸ್‌ಗೆ ಆಕಸ್ಮಿಕ ಬೆಂಕಿ (Fire) ತಗುಲಿದೆ. ಕೆ ಆರ್ ಮಾರ್ಕೆಟ್‌ಗೆ ಹೊರಟಿದ್ದ ಬಸ್‌ಗೆ ಚಾಮರಾಜಪೇಟೆ, ಮಕ್ಕಳ ಕೂಟದ ಬಳಿ ಬೆಂಕಿ ತಗುಲಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.