ಹೋದ ವರ್ಷದ ಮಳೆಗೆ ಮನೆ ಕಳೆದುಕೊಂಡ ಮಂದಿ, ಪರಿಹಾರ ಸಿಗದೇ ಇವರ ಪರದಾಟ ನೋಡ್ರೀ?

Aug 18, 2020, 10:45 AM IST

ಬೆಂಗಳೂರು (ಆ. 18): ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭೆ ತುಂಬಿ ಹರಿಯುತ್ತಿದ್ದಾಳೆ. ರಾಮದುರ್ಗ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸುನ್ನಾಳ ಗ್ರಾಮದ 15 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಕಳೆದ ವರ್ಷವೂ ಭಾರೀ ಮಳೆಯಿಂದಾಗಿ ಸಾಕಷ್ಟು ಮಂದಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ಕೊಟ್ಟಿತ್ತು ಸರ್ಕಾರ. ಆದರೆ ಅದು ಈವರೆಗೂ ಈಡೇರಿಲ್ಲ. ಇವರ ಗೋಳನ್ನು ಕೇಳೋರೇ ಇಲ್ಲದಂತಾಗಿದೆ. ಈ ವರ್ಷವೂ ಇದೇ ಕಥೆ ಮುಂದುವರೆದಿದೆ. ಗೋಳು ಮಾತ್ರ ನಿಂತಿಲ್ಲ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

ನವಿಲು ತೀರ್ಥ ಡ್ಯಾಂನಿಂದ ನೀರು ಬಿಡುಗಡೆ; ಮುಳುಗಡೆ ಭೀತಿಯಲ್ಲಿ ಸಂಗಾಳ ಗ್ರಾಮ!