ಉದ್ಧಟತನ ತೋರಿಸಿದ ಖಾಸಗಿ ಆಸ್ಪತ್ರೆಗೆ ಖಡಕ್ ವಾರ್ನಿಂಗ್; ಒಪಿಡಿ ಕ್ಲೋಸ್ ಮಾಡಿಸಿದ ಆಯುಕ್ತ

Jul 19, 2020, 6:06 PM IST

ಬೆಂಗಳೂರು (ಜು. 19): ಕೋವಿಡ್ 19 ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳುವ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಉದ್ಧಟತನ ತೋರಿಸುವುದನ್ನು ನಿಲ್ಲಿಸಿಲ್ಲ. ಮುಖ್ಯಮಂತ್ರಿಗಳ ಆದೇಶಕ್ಕೂ ಕ್ಯಾರೆ ಅನ್ನುತ್ತಿಲ್ಲ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕಮಿಷನರ್ ಮಂಜುನಾಥ್ ಪ್ರಸಾದ್ ಖಡಕ್ ಕ್ರಮ ತೆಗೆದುಕೊಂಡಿದ್ದಾರೆ. ಉದ್ಧಟತನ ಮೆರೆದ ಖಾಸಗಿ ಆಸ್ಪತ್ರೆಗೆ ವಾರ್ನಿಂಗ್ ಕೊಟ್ಟಿದ್ದಾರೆ. 

300 ಬೆಡ್‌ಗಳಲ್ಲಿ ಕೇವಲ 30 ಬೆಡ್‌ಗಳನ್ನ ಮಾತ್ರ ಆಸ್ಪತ್ರೆ ಮೀಸಲಿಟ್ಟಿದೆ. ಕೂಡಲೇ ಆಸ್ಪತ್ರೆಯ ಒಪಿಡಿ ವಿಭಾಗವನ್ನು ಕ್ಲೋಸ್ ಮಾಡಲು ಸೂಚನೆ ನೀಡಿದ್ದಾರೆ.  ಈಗಲೂ ನೀವು ಸರ್ಕಾರದ ಆದೇಶ ಪಾಲಿಸದಿದ್ದರೆ ಆಸ್ಪತ್ರೆಯ ಸಿಇಒರನ್ನು ಅರೆಸ್ಟ್ ಮಾಡಲಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. 

ಕೊರೋನಾ ಸೋಂಕಿತರಿಗಾಗಿಯೇ ಕಾರ್ಡ್‌ಬೋರ್ಡ್‌ ಬೆಡ್‌ ಸಿದ್ಧ..!