Head Bush: ನೀನು ನಿರ್ಮಾಪಕ ಅಂತ ಫೀಲ್ ಆಗಿಲ್ಲ: ಲೂಸ್ ಮಾದ ಯೋಗಿ

Oct 5, 2022, 2:36 PM IST

ಹೆಡ್‌ಬುಷ್ ಸಿನಿಮಾದ ಪ್ರಚಾರವನ್ನ ಆರಂಭಿಸಿರೋ ನಟ ರಾಕ್ಷಸ ಡಾಲಿ ಧನಂಜಯ್ ಲೂಸ್ ಮಾದ ಯೋಗಿಯ ಸ್ಪೆಷಲ್ ಇಂಟರ್ವ್ಯೂ ಮಾಡಿದ್ದು, ಹಲವು ಸಂಗತಿಳನ್ನ ಬಾಯ್ ಬಿಡಿಸಿದ್ದಾರೆ. ಈ ವೇಳೆ ಪ್ರೊಡ್ಯೂಸರ್‌ ಡಾಲಿ ಬಗ್ಗೆ ಹಲವಾರು ವಿಚಾರಗಳನ್ನು ಯೋಗಿ  ಬಿಚ್ಚಿಟ್ಟಿದ್ದಾರೆ. ನೀನು ಪ್ರೊಡ್ಯೂಸರ್‌ ಅಂತ ಫೀಲ್ ಆಗಿಲ್ಲ... ನೀನೇ ಸೆಟ್‌ ಕೆಲ್ಸ... ಡ್ರೈವರ್‌ ಕೆಲ್ಸ.. ಮಾಡ್ತಿದ್ದೆ ಅಂತೆಲ್ಲಾ ಇಂಟರ್ವ್ಯೂನಲ್ಲಿ ಯೋಗಿ ಡಾಲಿ ಧನಂಜಯ್ ಬಗ್ಗೆ ಮಾತನಾಡಿದ್ದಾರೆ. ಇನ್ನು ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. ದೀಪಾವಳಿ ಹಬ್ಬಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment