ಮುಸ್ಲಿಮರ ಓಟು ಬೇಡವೆಂದ ಮೇಲೆ ಯಾಕೆ ಕೇಳ್ತೀರಿ: ಎಚ್‌ಡಿಕೆಗೆ ಜಮೀರ್‌ ತಿರುಗೇಟು

By Kannadaprabha News  |  First Published Nov 17, 2024, 7:37 PM IST

ನನಗೆ ಲೋಕಾಯುಕ್ತ ನೋಟಿಸ್ ಬಂದಿರುವ ಬಗ್ಗೆ ಗೊತ್ತಿಲ್ಲ. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. 


ಮಂಗಳೂರು (ನ.17): ನನಗೆ ಲೋಕಾಯುಕ್ತ ನೋಟಿಸ್ ಬಂದಿರುವ ಬಗ್ಗೆ ಗೊತ್ತಿಲ್ಲ. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್‌ ನೀಡಿರುವ ಕುರಿತು ಮಾಧ್ಯಮದಲ್ಲಿ ಬರುತ್ತಿದೆ. ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ಅವರ ಕೆಲಸ. ಇಡಿಯವರು ಎಸಿಬಿಗೆ ಕಳುಹಿಸಿದ ಮೇಲೆ ಆ ಕೇಸ್ ಅಲ್ಲಿಂದ ಲೋಕಯುಕ್ತ‌ಕ್ಕೆ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದರು.

ಮುಸ್ಲಿಮರ ಓಟು ಯಾಕೆ ಕೇಳ್ತೀರಿ?: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್‌, ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ತನಗೆ ಮುಸ್ಲಿಮರ ಮತ ಬೇಕಾಗಿಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ಮುಸ್ಲಿಮರ ಓಟು ಬೇಡ ಅಂತ ಹೇಳಿ ನಂತರ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ? ಇದು ಎಷ್ಟು ಸರಿ ಅಂತ ಕೇಳಿದ್ದು. ಮುಸ್ಲಿಮರು ಪಂಕ್ಚರ್ ಹಾಕುವವರು, ವೆಲ್ಡಿಂಗ್‌ ಮಾಡುವರು ಅಂತ ಲಘವಾಗಿ ಮಾತಾಡಿದ್ದಾರೆ. ನಂತರ ಯಾಕೆ ಅವರ ಬಳಿ ಓಟ್ ಕೇಳುತ್ತೀರಿ ಎಂದು ಪ್ರಶ್ನಿಸಿದರು.

Latest Videos

undefined

ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ ಕೂದಲೆಳೆ ಅಂತರದಿಂದ ಗೆಲುವು: ಸಿ.ಪಿ.ಯೋಗೇಶ್ವರ್

ಯೂಟರ್ನ್‌ ಕುಮಾರಸ್ವಾಮಿ: ಅವರು ಯೂ ಟರ್ನ್ ಕುಮಾರಸ್ವಾಮಿ. ಹಾಗಾಗಿಯೇ ಬೇಗ ಹೇಳಿಕೆ ಬದಲಿಸಿದ್ದಾರೆ. ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂ ಟರ್ನ್ ಕುಮಾರಸ್ವಾಮಿ ಅಂತಾನೆ ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಎಂದು ಟೀಕಿಸಿದರು. ಕುಮಾರಸ್ವಾಮಿಗೆ ವೈಯಕ್ತಿಕವಾಗಿ ನಾನು ಹೇಳಿರುವುದೇ ವಿನಾ ಒಕ್ಕಲಿಗರ ವಿರುದ್ಧ ಅಲ್ಲ. ನಾನು ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಸ್ವಾಮೀಜಿ. 

ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದವನು. ಸ್ವಾಮೀಜಿ ಬಳಿ ಕೇಳಲು ಹೇಳಿ, ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವನು ಎಂದರು. ‘ಕಾಲಾ’ ಹೇಳಿಕೆಗೆ ಡಿಕೆ ಶಿವಕುಮಾರ್‌ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಜಮೀರ್‌, ನನ್ನದು ನನಗೆ, ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಅವರ ಹೇಳಿಕೆ ನಾನು ನೋಡಿಲ್ಲ. ಹೇಳಿಕೆ ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

2 ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ: ನಿಖಿಲ್ ಕುಮಾರಸ್ವಾಮಿ

ಯೋಗಿಶ್ವರ್‌ ಗೆಲುವು ಖಚಿತ: ಚುನಾವಣೆ ಸಂದರ್ಭ ‘ಕಾಲಾ’ ಹೇಳಿಕೆಯಿಂದ ಧಕ್ಕೆ ಆಗಿದೆ ಎಂದು ಸಿ.ಪಿ. ಯೋಗೀಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಜಮೀರ್ ಬಂದಿದ್ದು ಪ್ಲಸ್ ಆಗಿದೆ, ಹೇಳಿಕೆಯಿಂದ ಸ್ವಲ್ಪ ಅನನುಕೂಲ ಅಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ. ಬರೆದಿಟ್ಟುಕೊಳ್ಳಿ, ಚೆನ್ನಪಟ್ಟಣದಲ್ಲಿ ಏನೇನೂ ಆಗುವುದಿಲ್ಲ. ಅಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗಿಶ್ವರ್ 18ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

click me!