ಮಂಗನಂತಾಡುವ ಜಮೀರ್ ತಾಳಕ್ಕೆ ಕುಣಿಯುವ ಸಿಎಂ ಸಿದ್ದರಾಮಯ್ಯ: ಎಂ.ಪಿ.ರೇಣುಕಾಚಾರ್ಯ

By Kannadaprabha News  |  First Published Nov 17, 2024, 8:39 PM IST

ಉಪ ಚುನಾವಣೆ ಹಿನ್ನೆಲೆಯಲ್ಲಿ ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನಾಟಕ ಮಾಡಿದ್ದರು. ನಾವು ನೋಟಿಸ್ ಹಿಂಪಡೆದರಷ್ಟೇ ಸಾಲದು, ಕಾಲಂ 11ರಲ್ಲಿ ವಕ್ಫ್ ಆಸ್ತಿ ಅಂತಾ ತೆಗೆದು ಹಾಕಲು ಒತ್ತಾಯಿಸಿದ್ದೆವು.


ದಾವಣಗೆರೆ (ನ.17): ಹೆಂಡ ಕುಡಿದ ಮಂಗನಂತೆ ಆಡುತ್ತಿರುವ ಜಮೀರ್ ಅಹಮ್ಮದ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಜಮೀರ್ ಸೂಚನೆ ಮೇರೆಗೆ ಚಿಂತಾಮಣಿ ತಾ. ತಿಮ್ಮಸಂದ್ರ ಗ್ರಾಮದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಟ್ರ್ಯಾಕ್ಟರ್ ಜಪ್ತು ಮಾಡಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನಾಟಕ ಮಾಡಿದ್ದರು. 

ನಾವು ನೋಟಿಸ್ ಹಿಂಪಡೆದರಷ್ಟೇ ಸಾಲದು, ಕಾಲಂ 11ರಲ್ಲಿ ವಕ್ಫ್ ಆಸ್ತಿ ಅಂತಾ ತೆಗೆದು ಹಾಕಲು ಒತ್ತಾಯಿಸಿದ್ದೆವು. ಇದೀಗ ಜಮೀರ್ ಸೂಚನೆ ಮೇರೆಗೆ ಚಿಂತಾಮಣಿ ಪೊಲೀಸರು ಉಳುಮೆ ಮಾಡುತ್ತಿದ್ದ ರೈತರ ಟ್ರ್ಯಾಕ್ಟರ್ ಜಪ್ತು ಮಾಡಿ, ಕೇಸ್ ಮಾಡಿದ್ದಾರೆ. ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಉಪಚುನಾವಣೆ ಮೇಲೆ ಹೊಡೆತ ಬೀಳುತ್ತದೆಂದು ವಕ್ಫ್ ನೋಟಿಸ್ ಹಿಂಪಡೆಯುವುದಾಗಿ ಸಿಎಂ ನಾಟಕ ಮಾಡಿದ್ದು, ಇದೀಗ ಮತ್ತೆ ವಕ್ಫ್ ವಿವಾದ ಶುರುವಾಗಿವೆ. ವಕ್ಫ್‌ಗೆ ತಮ್ಮ ಆಸ್ತಿ ಬಿಡುವುದಿಲ್ಲವೆಂದ ರೈತರ ಮೇಲೆ ಚಿಂತಾಮಣಿ ಪೊಲೀಸರು ಲಾಠಿ ಪ್ರಹಾರ ಮಾಡಿ, ಕೇಸ್ ದಾಖಲಿಸಿ, ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. 

Tap to resize

Latest Videos

undefined

ಮುಸ್ಲಿಮರ ಓಟು ಬೇಡವೆಂದ ಮೇಲೆ ಯಾಕೆ ಕೇಳ್ತೀರಿ: ಎಚ್‌ಡಿಕೆಗೆ ಜಮೀರ್‌ ತಿರುಗೇಟು

ಮೊನ್ನೆ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ಸಿನ ಸಚಿವರೆ ಜಮೀರ್ ಅಹಮ್ಮದ್ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರೂ, ಸಿಎಂ ಜಮೀರ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು. ವಕ್ಫ್ ನೋಟಿಸ್‌ ಹಿಂಪಡೆಯುವುದಷ್ಟೇ ಅಲ್ಲ, ಕಾಲಂ ನಂ.11ರಲ್ಲಿ ವಕ್ಫ್ ಆಸ್ತಿಯೆಂಬುದನ್ನು ತೆಗೆದು ಹಾಕಬೇಕು. ಗೆಜೆಟ್ ನೋಟಿಫಿಕೇಷನ್ ಸಹ ರದ್ದುಪಡಿಸಬೇಕು. ಸಿಎಂ ಸಿದ್ದರಾಮಯ್ಯ ಮೊದಲು ಜಮೀರ್ ಅಹಮ್ಮದ್‌ಗೆ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಜಮೀರ್‌ಗೆ ಹೇಗೆ ಹದ್ದುಬಸ್ತಿನಲ್ಲಿಡಬೇಕೆಂಬುದು ನಮಗೆ ಗೊತ್ತಿದೆ. ಜಮೀರ್‌ಗೆ ತಕ್ಕ ಪಾಠವನ್ನೇ ನಾವು ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳ್ಳುವುದು ಗ್ಯಾರಂಟಿ ಎಂದರು.

ಸಿದ್ದರಾಮಯ್ಯಗೆ ಕೆಳಗಿಳಿಸಲು ಕಾಂಗ್ರೆಸ್‌ ಪಕ್ಷದಲ್ಲೇ ಹೊಂಚು ಹಾಕುತ್ತಿದ್ದಾರೆ. ಬಿಜೆಪಿ ಯಾರೂ ಈ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಸಿದ್ದರಾಮಯ್ಯಗೆ ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿನವರೆ ಒಬ್ಬೊಬ್ಬರಿಗೆ 50 ಕೋಟಿ ಕೊಡಲು ಹಣ ಸಿದ್ಧವಾಗಿ, ಹೊಂಚು ಹಾಕುತ್ತಿದ್ದಾರೆ. ಅದನ್ನೇ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. 50 ಕೋಟಿ ರು. ಕೊಟ್ಟು ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದು ಬಿಜೆಪಿ ಬಗ್ಗೆ ಅಲ್ಲ. ಸ್ವಪಕ್ಷದವರ ಬಗ್ಗೆ ತಮ್ಮ ಹೈಕಮಾಂಡ್‌ಗೆ ಎಚ್ಚರಿಸಿದ್ದಾರೆ ಎಂದರು.

ರೈತರು, ಮಠ ಮಂದಿರಗಳು, ಸಾರ್ವಜನಿಕರ ಆಸ್ತಿಯನ್ನು ವಕ್ಫ್ ಕಬಳಿಸಲು ಹೊರಟಿದ್ದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ. ಉಭಯ ಸದನದಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು. ವಿಜಯೇಂದ್ರಗೆ ಪಕ್ಷದ ನಾಯಕತ್ವ ಸಿಕ್ಕ ಬಳಿಕ ಪಕ್ಷಕ್ಕೆ ಬೂಸ್ಟ್ ಸಿಕ್ಕಂತಾಗಿದೆ. ರಾಜ್ಯವ್ಯಾಪಿ ಸಂಘಟನೆ ಬಲಗೊಳ್ಳುತ್ತಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಧಿಕ್ಕರಿಸಿ ಬಸವನಗೌಡ ಪಾಟೀಲ್ ಯತ್ನಾಳ್ ಇತರರು ಹೋಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಪ್ಲಸ್ ಆಗುತ್ತಿದೆ. 

ಜಸ್ಟೀಸ್‌ ಡಿಕುನ್ಹಾ ವರದಿಯಲ್ಲಿ ಕೋವಿಡ್‌ ಅಕ್ರಮ ಸ್ಪಷ್ಟ ಉಲ್ಲೇಖ: ಸಚಿವ ದಿನೇಶ್‌ ಗುಂಡೂರಾವ್‌

ವಿಜಯೇಂದ್ರ 3 ತಂಡ ಮಾಡಿ, ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಯತ್ನಾಳ್ ಸಹ ಸೇರಿಕೊಂಡು ಪ್ರತಿಭಟಿಸಬೇಕಿತ್ತು. ಆದರೆ, ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ನಾವು ಸಹ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು, ಹೋರಾಟ ಮಾಡಬೇಕಾಗುತ್ತದೆ. ಪಕ್ಷದ ರಾಷ್ಟ್ರೀಯ ನಾಯಕರು ಮಧ್ಯ ಪ್ರವೇಶಿಸಿ, ಯತ್ನಾಳ್ ಇತರರಿಗೆ ತಿಳಿ ಹೇಳಲಿ ಎಂದರು. ದಾವಣಗೆರೆ ಜಿಲ್ಲಾ ಬಿಜೆಪಿ ಗುಂಪುಗಾರಿಕೆ ಕುರಿತ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಷ್ಟೇ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರವೀಣ ರಾವ್‌ ಜಾಧವ್‌, ರಾಜು ವೀರಣ್ಣ, ಮಂಜು, ಜಯರುದ್ರೇಶ, ಮಂಜುನಾಥ, ಧರ್ಮರಾಜ, ಸುರೇಶ, ಬಾಲರಾಜ, ಸುರೇಶ, ಗಿರೀಶಾಚಾರ್‌ ಮತ್ತಿತರರಿದ್ದರು.

click me!